ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ತ್ರೈಮಾಸಿಕದಲ್ಲಿ ಇನ್ಫಿಗೆ ನಿವ್ವಳ ಲಾಭ

By Mrutyunjaya Kalmat
|
Google Oneindia Kannada News

Infosys
ಮುಂಬೈ, ಅ. 16 : ಇನ್ಫೋಸಿಸ್ ಟೆಕ್ನಾಲಜೀಸ್ ಕಳೆದ ಸೆಪ್ಟೆಂಬರ್‌ಗೆ ಅಂತ್ಯವಾದ 2ನೇ ತ್ರೈಮಾಸಿಕ ಫಲಿತಾಂಶವನ್ನು ಪ್ರಕಟಿಸಿದ್ದು, ನಿವ್ವಳ ಲಾಭ ಗಳಿಕೆಯಲ್ಲಿ ಶೇ.13.1ರಷ್ಟು ಪ್ರಗತಿ ದಾಖಲಿಸಿದೆ. ಈ ಅವಧಿ ಯಲ್ಲಿ 1,732 ಕೋಟಿ ರೂ. ನಿವ್ವಳ ಲಾಭ ಗಳಿಸಿರುವ ಕಂಪನಿ, 30ನೇ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಪ್ರತಿ ಷೇರಿಗೆ 30 ರೂ.ಗಳ ವಿಶೇಷ ಡಿವಿಡೆಂಡ್ ಘೋಷಿಸಿದೆ.

ಉದ್ದೇಶಿತ 10 ರೂ.ಗಳ ಮಧ್ಯಂತರ ಡಿವಿಡೆಂಡ್ ಹೊರತಾಗಿ ಇದು ಸಿಗಲಿದೆ. ಗ್ರಾಹಕರೊಂದಿಗಿನ ಉತ್ತಮ ಬಾಂಧವ್ಯ ಹಾಗೂ ಹೊಸ ಹೂಡಿಕೆಗಳ ಪರಿಣಾಮ ಇನ್ಫೋಸಿಸ್ ಲಾಭ ಗಳಿಕೆಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 'ಆರ್ಥಿಕ ಪರಿಸ್ಥಿತಿ ಸವಾಲಿನಿಂದ ಕೂಡಿದ್ದರೂ, ನಾವು ಗ್ರಾಹಕರೊಂದಿಗಿನ ಬಾಂಧವ್ಯವನ್ನು ಉತ್ತಮಪಡಿಸಿಕೊಂಡಿದ್ದೇವೆ.

ಹೊಸ ಹೂಡಿಕೆಯಲ್ಲಿ ಯಶಸ್ವಿಯಾಗಿದ್ದೇವೆ. ಆದ್ದರಿಂದ ಈ ತ್ರೈಮಾಸಿಕದಲ್ಲಿ ಮತ್ತಷ್ಟು ಮುಂದುವರಿಯಲು ಸಾಧ್ಯವಾಗಿದೆ ಎಂದು ಕಂಪನಿಯ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಎಸ್. ಗೋಪಾಲಕೃಷ್ಣನ್ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ವರದಿಗಳ ದರ್ಜೆಯ ಪ್ರಕಾರ 2009-10ರ ಸಾಲಿನ ಸೆಪ್ಟೆಂಬರ್ ತ್ರೈ ಮಾಸಿಕದಲ್ಲಿ ಕಂಪನಿಯ ನಿವ್ವಳ ಲಾಭ 1,535 ಕೋಟಿ ರೂ.ಗಳಾಗಿವೆ ಎಂದು ಇನ್ಫೋಸಿಸ್ ಮುಂಬಯಿ ಷೇರು ವಿನಿಮಯ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X