ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ಸ್ಫೋಟದ ಆರೋಪಿಗಳು ಬಂಧನ

By Mrutyunjaya Kalmat
|
Google Oneindia Kannada News

Bangalore blast
ಬೆಂಗಳೂರು, ಅ. 16 : ಬೆಂಗಳೂರು ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಇಬ್ಬರು ಭಯೋತ್ಪಾದಕರನ್ನು ಬಂಧಿಸುವಲ್ಲಿ ಬೆಂಗಳೂರು ಪೊಲೀಸರು ಶನಿವಾರ ಸಫಲರಾಗಿದ್ದಾರೆ. ಬಂಧಿತ ಆರೋಪಿಗಳಬ್ಬರು ಪಾಕಿಸ್ತಾನಿ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಸ್ತಾನ ಪೊಲೀಸರ ಸಹಕಾರದೊಂದಿಗೆ ಅಲ್ಲಿನ ಅಜ್ಮೇರ್ ಬಳಿಯಲ್ಲಿ ಫಾರೂಕ್ ಉಮರ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರೆ, ಕೇರಳದ ಕಾಸರಗೋಡಿನಲ್ಲಿ ಇಬ್ರಾಹಿಂ ಎಂಬ ಉಗ್ರನನ್ನು ಕೂಡಾ ಬಂಧಿಸಲಾಗಿದೆ. ಈ ಇಬ್ಬರು ಪಾಕಿಸ್ತಾನಿ ಮೂಲದ ಲಷ್ಕರ್ ಇ ತೊಯ್ಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾರೆ. ಬೆಂಗಳೂರು ಸರಣಿ ಸ್ಫೋಟ ಸೇರಿದಂತೆ ಭಾರತದ ವಿವಿಧ ಪ್ರದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಈ ಇಬ್ಬರು ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳ ತಿಳಿಸಿವೆ.

2008ರ ಜುಲೈ 25 ರಂದು ಬೆಂಗಳೂರಿನ 9 ಕಡೆಗೆ ಬಾಂಬ್ ಸ್ಫೋಟ ನಡೆಸಲಾಗಿತ್ತು. ಈ ಘಟನೆಯಲ್ಲಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಅನೇಕ ಮಂದಿ ಗಾಯಗೊಡಿದ್ದರು. ಬೆಂಗಳೂರು ಸರಣಿ ನಂತರ ಗುಜರಾತ್ ನ ಅಹಮದಾಬಾದ್ ಹಾಗೂ ಸೂರತ್ ನಲ್ಲಿ ಬಾಂಬ್ ಸ್ಫೋಟ ನಡೆಸಲಾಗಿತ್ತು. ಬ್ಯಾಡ್ ಎಂದು ಹೆಸರಿಟ್ಟುಕೊಂಡಿದ್ದ ಉಗ್ರರು, ಬೆಂಗಳೂರು, ಅಹಮದಾಬಾದ್ ಮತ್ತು ದೆಹಲಿ ಟಾರ್ಗೆಟ್ ಮಾಡಿಕೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X