For Daily Alerts
CWG: ಪದಕ ವಿಜೇತರಿಗೆ ಯಡ್ಡಿ ಬಹುಮಾನ
ಬೆಂಗಳೂರು, ಅ. 15 : ಶುಕ್ರವಾರ ಮುಕ್ತಾಯಗೊಂಡ 19ನೇ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪದಕ ವಿಜೇತರಾಗಿರುವ ಕರ್ನಾಟಕದ ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನಗದು ಬಹುಮಾನ ಘೋಷಿಸಿದ್ದಾರೆ.
ಚಿನ್ನದ ಪದಕ ವಿಜೇತರಿಗೆ ತಲಾ ಹತ್ತು ಲಕ್ಷ ರುಪಾಯಿ, ಬೆಳ್ಳಿ ಪದಕ ವಿಜೇತರಿಗೆ ತಲಾ ಏಳು ಲಕ್ಷ ರುಪಾಯಿ ಮತ್ತು ಕಂಚಿನ ಪದಕ ವಿಜೇತರಿಗೆ ತಲಾ ಐದು ಲಕ್ಷ ರುಪಾಯಿ ಬಹುಮಾನ ನೀಡಲಾಗುವುದು. ಪದಕ ವಿಜೇತರ ಪಟ್ಟಿ ಸಿದ್ಧಪಡಿಸಿ ನಗದು ಬಹಮಾನ ವಿತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಯುವಜನಾ ಸೇವಾ ಮತ್ತು ಕ್ರೀಡಾ ಇಲಾಖೆಗೆ ಸೂಚನೆ ನೀಡಿದ್ದಾರೆ.
ಕಳೆದ 10 ದಿನದಿಂದ ರಾಜ್ಯದಲ್ಲಿ ಉಂಟಾಗಿದ್ದ ರಾಜಕೀಯ ಅಸ್ಥಿರತೆಯಿಂದಾಗಿ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಗೆದ್ದಿರುವ ಕ್ರೀಡಾಳುಗಳ ಬಗ್ಗೆ ಗಮನ ಹರಿಸಿರಲಿಲ್ಲ. ಸರಕಾರದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ರಾಜ್ಯಕ್ಕೆ ಗೌರವ ತಂದ ಕ್ರೀಡಾಪಟುಗಳಿಗೆ ಸರಕಾರ ಗೌರವಿಸಲಿಲ್ಲ ಎನ್ನುವ ಕೂಗು ಸಾರ್ವಜನಿಕ ವಲಯದಿಂದ ಕೇಳಿ ಬಂದಿತ್ತು.