ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೇಜಸ್ವಿ 'ಜುಗಾರಿ ಕ್ರಾಸ್' ಗೆ 50ರ ಸಂಭ್ರಮ !

By Mahesh
|
Google Oneindia Kannada News

Jugari cross play
ಬೆಂಗಳೂರು, ಅ.12: ಸಮುದಾಯದ ಇತ್ತೀಚಿನ ಅತಿ ಜನಪ್ರಿಯ ನಾಟಕ "ಜುಗಾರಿ ಕ್ರಾಸ್" ಇದೇ ಅಕ್ಟೋಬರ್ 15 ರಂದು 50ನೇ ಪ್ರದರ್ಶನ ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಪೂರ್ಣಚಂದ್ರ ತೇಜಸ್ವಿಯವರು ತೆಗೆದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ತೇಜಸ್ವಿ ಮತ್ತು ಅವರ ಕೃತಿಗಳು, ಕ್ರಿಯಾಶೀಲತೆ ಕುರಿತು ಖ್ಯಾತ ಚಿಂತಕ ಡಾ. ಕೆ.ಮರುಳಸಿದ್ದಪ್ಪನವರು ಮಾತನಾಡಲಿದ್ದಾರೆ.

ಸಾಮಾಜಿಕ ಚಳುವಳಿ ಮತ್ತು ಹೋರಾಟಗಳಿಗೆ ಸಾಂಸ್ಕೃತಿಕ ಆಯಾಮದ ಬದಲಾದ ಮಾದರಿಗಳನ್ನು ಕಟ್ಟಿಕೊಟ್ಟ ಸಂಘಟನೆಯೇ ಸಮುದಾಯ. ಕಳೆದ 35 ವರ್ಷಗಳಿಂದ ಪುಸ್ತಕ ಪ್ರಕಟಣೆ, ವಿಚಾರಸಂಕಿರಣ, ರಂಗ ತರಬೇತಿ ಶಿಬಿರ, ಬೀದಿ ನಾಟಕ, ನಾಟಕೋತ್ಸವ, ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ.

ಈ ಕೆಳಗೆ ನಾಟಕದ ವಿವರಗಳು ಕೆಳಕಂಡಂತಿದೆ.

ನಾಟಕದ ಸಂಕ್ಷಿಪ್ತ ವಿವರ: ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ಈ ನಾಟಕ ಕೇವಲ 24 ಘಂಟೆಗಳಲ್ಲಿ ನೆಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆಯೇ ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಕಾದಂಬರಿ.

ಕಾಡಿನಲ್ಲಿರುವ ಲಕ್ಷಾಂತರ ಬೆಲೆಬಾಳುವ ಮರಗಳು ಮತ್ತಿತರ ನೈಸರ್ಗಿಕ ಸಂಪತ್ತು ಕಾಡೇ ಕಾಳ ಧಂಧೆಗಳ ತವರೂರಾಗುವುದು, ಕಾಡಿನಿಂದ ಉತ್ಪತ್ತಿಯಾಗುವ ಕಾಳಧನ ದೇಶದ ರಾಜಕೀಯವನ್ನೇ ನಿಯಂತ್ರಿಸುವುದು, ಈ ಕಾಳ ವ್ಯವಹಾರಗಳ ಜೊತೆಜೊತೆಗೇ ಡ್ರಗ್ಸ್ ಮಾಫಿಯಾ ಜೂಜು ಸೇರಿ, ಅನೇಕ ವೇಳೆ ಇದ್ಯಾವುದಕ್ಕೂ ಸಂಬಂಧಿಸದ ಮುಗ್ಧರನ್ನೂ ಪ್ರಾಣಾಪಾಯದ ಅಂಚಿಗೆ ತಳ್ಳಬಹುದು ಎಂಬುದೇ ಈ ಕಥೆಯ ಹಿನ್ನೆಲೆ. ಏಲಕ್ಕಿ ಬೆಳೆಗಾರ ಸುರೇಶ ಮತ್ತು ಅವನ ಹೆಂಡತಿ ಗೌರಿ ಏಲಕ್ಕಿ ವ್ಯಾಪಾರಕ್ಕೆಂದು ಪೇಟೆಗೆ ಬಂದವರು, ಅವರಿಗೇ ತಿಳಿಯದೇ ಕಳ್ಳ ಧಂಧೆಗೆ ಸಿಕ್ಕಿಕೊಂಡು ಕ್ಷಣ ಕ್ಷಣಕ್ಕೂ ರೋಚಕವಾಗಿ ಸಾಗುವ, ಬೆಚ್ಚಿಬೀಳಿಸುವ ಅಂಡರ್‌ವರ್ಲ್ಡ್‌ನ ಕಥೆಯೊಂದಿಗೆ ಹೆಣೆದುಕೊಂಡಿರುವ ನಾಟಕವೇ ಜುಗಾರಿ ಕ್ರಾಸ್.

ನಾಟಕ : ಜುಗಾರಿ ಕ್ರಾಸ್
ರಚನೆ : ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ನಾಟಕ ರೂಪ ಮತ್ತು ನಿರ್ದೇಶನ : ನಟರಾಜ್ ಹೊನ್ನವಳ್ಳಿ
ಸಂಗೀತ : ಗಜಾನನ ಟಿ. ನಾಯ್ಕ
ಸ್ಥಳ : ರಂಗಶಂಕರ
ದಿನಾಂಕ/ವಾರ : 15.10.2010/ಶುಕ್ರವಾರ
ಸಮಯ : ಸಂಜೆ 7.30
ಟಿಕೆಟ್ ಗಳಿಗೆ ಸಂಪರ್ಕಿಸಿ: 9900182400, 9880731987

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X