ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

16 ಅತೃಪ್ತ ಶಾಸಕರು ಅನರ್ಹ

By Shami
|
Google Oneindia Kannada News

Speaker disqualifies 16 rebel MLAs
ಬೆಂಗಳೂರು, ಅ. 11 : ಭಿನ್ನಮತ ಚಟುವಟಿಕೆಯಲ್ಲಿ ಪಾಲ್ಗೊಂಡ ಆರೋಪ ಹೊತ್ತಿರುವ ಬಿಜೆಪಿಯ ಹನ್ನೊಂದು ಶಾಸಕರು ಮತ್ತು ಐವರು ಪಕ್ಷೇತರ ಶಾಸಕರನ್ನು ಅನರ್ಹಗೊಳಿಸಿ ವಿಧಾನಸಭಾಧ್ಯಕ್ಷ ಕೆಜೆ ಬೋಪಯ್ಯ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದನದಲ್ಲಿ ವಿಶ್ವಾಸಮತ ಕೋರುವ ಕೆಲವೇ ಗಂಟೆಗಳ ಮುನ್ನ ಈ ನಿರ್ಧಾರ ಹೊರಬಿದ್ದಿರುವುದು ಕುತೂಹಲಕಾರಿಯಾಗಿದೆ.

ಅನರ್ಹಗೊಂಡ ಶಾಸಕರು ಮುಂದಿನ ಕಾನೂನು ಕ್ರಮದ ಆಲೋಚನೆಯಲ್ಲಿ ಮಗ್ನರಾಗಿದ್ದಾರೆ. ಆ ಮಧ್ಯೆ ಕೇಂದ್ರ ಕಾನೂನು ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಇಂದು ಬೆಂಗಳೂರಿಗೆ ಬಂದಿದ್ದಾರೆ. ವಿಧಾನಸೌಧದ ಸುತ್ತಮುತ್ತ ಸೂಕ್ಷ್ಮ ವಾತಾವರಣ ಇದೆ. ಕಾನೂನು ಮತ್ತು ಶಿಸ್ತು ಪಾಲನೆ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ವಿಧಾನಸೌಧದ ಒಳಗೆ ಶಿಸ್ತು ಕಾಪಾಡಲು 150 ಮಾರ್ಷಲ್ ಗಲೂ ಸಹ ಈಗ ಸನ್ನದ್ದರಾಗಿದ್ದಾರೆ. ಅನರ್ಹಗೊಳಿಸಲಾಗಿರುವ ಶಾಸಕರೂ ವಿಧಾನಸೌಧ ಪ್ರವೇಶ ಮಾಡುತ್ತಿದ್ದು ಹೊಯ್ ಕಯ್ ಚಿತ್ರ ಸೃಷ್ಟಿಯಾಗಿದೆ.

ಇಂದಿನ ವಿಶ್ವಾಸ ಮತ ಯಾಚನೆಯ ನಡಾವಳಿಗಳನ್ನು ವರದಿ ಮಾಡುವ ಮಾಧ್ಯಮ ಪ್ರತಿನಿಧಿಗಳಿಗೆ ವಿಧಾನಸೌಧ ಪ್ರವೇಶ ನಿರಾಕರಿಸಲಾಗಿದೆ. ಇದು ಯಡ್ಡಿ ದರ್ಬಾರ್. ಸಭಾಧ್ಯಕ್ಷರು ಅನರ್ಹಗೊಳಿಸಿದ ಶಾಸಕರ ಹೆಸರುಗಳು ಇಂತಿವೆ.

*ಬಾಲಚಂದ್ರ ಜಾರಕಿಹೊಳಿ,
* ಭರಮ ಗೌಡ ಕಾಗೆ
* ದೊಡ್ಡಣಗೌಡ ಪಾಟೀಲ್
* ಎಸ್.ಕೆ.ಬೆಳ್ಳುಬ್ಬಿ,
* ಡಾ.ಸಾರ್ವಭೌಮ ಬಗಲಿ
* ನರಸಿಂಹ ನಾಯಕ್
* ಆನಂದ್ ವಸಂತ ಅಸ್ನೋಟಿಕರ್,
* ಕೆ.ಶಿವನ ಗೌಡ ನಾಯಕ್,
* ಗೋಪಾಲಕೃಷ್ಣ ಬೇಳೂರು,
* ವೈ.ಸಂಪಂಗಿ,
* ಎಂ.ವಿ.ನಾಗರಾಜು,
* ಎಚ್.ಎಸ್. ಶಂಕರಲಿಂಗೇಗೌಡ,
* ಜಿ.ಎನ್.ನಂಜುಂಡಸ್ವಾಮಿ,
* ಮಾನಪ್ಪ ವಜ್ಜಲ
* ನರೇಂದ್ರ ಸ್ವಾಮಿ
* ವೆಂಕಟರಮಣಪ್ಪ
* ಡಿ.ಸುಧಾಕರ್,
* ಗೂಳಿಹಟ್ಟಿ ಡಿ. ಶೇಖರ್,
* ಶಿವರಾಜ್ ತಂಗಡಗಿ
* ವರ್ತೂರು ಪ್ರಕಾಶ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X