ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮ್ಮ ತೀರ್ಪನ್ನು ಸಮರ್ಥಿಕೊಂಡ ಬೋಪಯ್ಯ

By Prasad
|
Google Oneindia Kannada News

KG Bopaiah
ಬೆಂಗಳೂರು, ಅ. 11 : ಧ್ವನಿ ಮತದ ಮೂಲಕ ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಕಲ್ಪಿಸಿದ ತಮ್ಮ ನಡೆಯನ್ನು ಸಭಾಧ್ಯಕ್ಷ ಕೆಜೆ ಬೋಪಯ್ಯ ಸಮರ್ಥಿಸಿಕೊಂಡಿದ್ದಾರೆ. ಸರಕಾರದ ಪರವಾಗಿ 106 ಮತ ಮತ್ತು ವಿಶ್ವಾಸ ಗೊತ್ತುವಳಿಗೆ ವಿರುದ್ಧವಾಗಿ ಸೊನ್ನೆ ಮತದಿಂದ ತೀರ್ಪುಕೊಡಬೇಕಾದ ಸಂದರ್ಭವನ್ನು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಸೋಮವಾರ ಮಧ್ಯಾನ್ಹ ವಿವರಿಸಿದರು.

ಸದನದಲ್ಲಿ ಸಿಕ್ಕಾಪಟ್ಟೆ ಗೊಂದಲದ ವಾತಾವರಣ ನಿರ್ಮಾಣವಾಯಿತು. ಶಾಂತರಾಗಿ ತಮ್ಮ ತಮ್ಮ ಆಸನಕ್ಕೆ ಹೋಗಿ ಕುಳಿತುಕೊಳ್ಳಿ ಎಂದು ಪದೇ ಪದೆ ಶಾಸಕರನ್ನು ವಿನಂತಿಸಿಕೊಂಡೆ. ಆದರೆ, ಅಧ್ಯಕ್ಷಪೀಠದ ವಿನಂತಿಯನ್ನು ಕೇಳದ ಶಾಸಕರು ಕೂಗಾಟ, ಅರಚಾಟ ಮತ್ತು ದೊಂಬಿ ವಾತಾವರಣ ನಿರ್ಮಿಸಿದ್ದರಿಂದ ಧ್ವನಿ ಮತಕ್ಕೆ ಹಾಕಿದೆ. ಧ್ವನಿ ಮತ ಯಡಿಯೂರಪ್ಪ ಪರವಾಗಿ ಬಂತು ಎಂದರು.

ರಾಜ್ಯಪಾಲರ ಆದೇಶದ ಪ್ರಕಾರವೇ ತಾವು ಕಾರ್ಯ ನಿರ್ವಹಿಸಿದುದಾಗಿಯೂ ಬೋಪಯ್ಯ ಸಮರ್ಥಿಸಿಕೊಂಡರು. ವಿಶ್ವಾಸ ಮತ ನಿರ್ಣಯಕ್ಕೆ ರಾಜ್ಯಪಾಲರು ನಮಗೆ ನೀಡಿದ್ದು ಒಂದೇ ಒಂದಿ ದಿನ. ಅದರಂತೆ ನಾನು ಇವತ್ತೇ ಕಲಾಪಗಳನ್ನು ಮುಗಿಸಬೇಕಾಗಿತ್ತು. ಇಂದು ಬೆಳಗ್ಗೆ ಸದನದಲ್ಲಿ ತಲೆದೋರಿದ ವಾತಾವರಣವನ್ನು ಗಮನಿಸಿದರೆ ನಾನು ಕೊಟ್ಟ ತೀರ್ಪು ಅತ್ಯಂತ ಸಮಂಜಸವಾಗಿದೆ ಎಂದು ಬೋಪಯ್ಯ ಹೇಳಿದರು.

ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X