ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೆಡಿಎಸ್ ಕಾಂಗ್ರೆಸ್ ಡೀಲ್ ಪಕ್ಕಾ : ಅಗ್ನಿ ಶ್ರೀಧರ್

By Mahesh
|
Google Oneindia Kannada News

Siddu as Cm and Revanna as DCM ;Agni Sridhar
ಬೆಂಗಳೂರು, ಅ.10: ವಿಧಾನಸೌಧ ಮುಖ್ಯ ದ್ವಾರಗಳಿಗೆ ಬೀಗ ಹಾಕಿ, ವಿಧಾನಸೌಧದ ಆವರಣದಲ್ಲಿ ವಾಮಾಚಾರ ನಡೆಯಲು ಬಿಟ್ಟಿರುವ ಬಿಜೆಪಿ ಸರ್ಕಾರದ ವಿರುದ್ಧ ಪತ್ರಕರ್ತ ಅಗ್ನಿ ಶ್ರೀಧರ್ ನೇತೃತ್ವದ ಪ್ರಗತಿ ಪರ ಸಂಘಟನೆಗಳ ಒಕ್ಕೂಟ ಇಂದು ಕೂಡ ಪ್ರತಿಭಟನೆ ಮುಂದುವರೆಸಿದೆ. ಈ ನಡುವೆ ಜೆಡಿಎಸ್ ಕಾಂಗ್ರೆಸ್ ಸರ್ಕಾರ ಸ್ಥಾಪನೆ ಖಚಿತ. ಸಿದ್ದು ಸಿಎಂ, ರೇವಣ್ಣ ಡಿಸಿಎಂ ಆಗುವುದು ಗ್ಯಾರಂಟಿ ಎಂದು ಸುವರ್ಣ ವಾಹಿನಿಗೆ ಅಗ್ನಿ ಶ್ರೀಧರ್ ಹೇಳಿದ್ದಾರೆ.

ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪೂರ್ವದ್ವಾರದ ಗೇಟ್‌ನ ಬೀಗ ಮುರಿಯುವ ಯತ್ನ ನಡೆಸಿದ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರನ್ನು ಸಮಾಧಾನಗೊಳಿಸಿದ ಪೊಲೀಸರು, ಗೇಟುಗಳ ಬೀಗವನ್ನು ಭದ್ರಪಡಿಸಿದರು. ಪರಿಸ್ಥಿತಿ ನಿಭಾಯಿಸಲು ಪ್ರತಿಭಟನಾಕಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ಆಡಳಿತ ಸೌಧದ ಗೇಟುಗಳಿಗೆ ಬೀಗ ಹಾಕಿರುವುದು ಕಾನೂನು ಬಾಹಿರ, ರಾಜಕಾರಣ ಅಧಃ ಪತನಕ್ಕೆ ಹೋಗಿದೆ. ಕುರ್ಚಿ ಉಳಿಸಿಕೊಳ್ಳಲು ಕೋಟ್ಯಂತರ ರೂ.ಖರ್ಚು ಮಾಡುತ್ತಿದ್ದಾರೆ, ಕುರ್ಚಿ ಉರುಳಿಸಲು ಪ್ರತಿಪಕ್ಷಗಳು ರೆಸಾರ್ಟ್ ಸಂಸ್ಕೃತಿಗೆ ಮೊರೆ ಹೋಗಿವೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕೆಂಡಕಾರಿದ ಅಗ್ನಿ ಶ್ರೀಧರ್ : ಪತ್ರಕರ್ತ ಅಗ್ನಿ ಶ್ರೀಧರ್ ಅವರು ಮಾತನಾಡಿ, ರಾಜಕಾರಣಿಗಳು ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವುದನ್ನು ಬಿಟ್ಟು ಗೋವಾ, ದೆಹಲಿ, ಪುಣೆ ರೆರ್ಸಾಟ್‌ಗಳಲ್ಲಿ ರಾಜಕೀಯ ನಡೆಸುತ್ತಿದ್ದಾರೆ. ಇವರಿಗೆ ನಾಚಿಕೆಯಾಗಬೇಕು. ಮತದಾರರು ಇವರನ್ನು ಗೆಲ್ಲಿಸಿದ್ದು ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಆದರೆ ಅದನ್ನು ಮರೆತು ಕೆಟ್ಟ ರಾಜಕಾರಣ ನಡೆಸಿದ್ದಾರೆ ಎಂದೂ ಆಕ್ರೋಶ ವ್ಯಕ್ತ ಪಡಿಸಿದರು. ವಿಧಾನಸೌಧ ರಾಜ್ಯದ ಸ್ವತ್ತು ಇದನ್ನು ಕ್ಷುಲಕ ರಾಜಕೀಯಕ್ಕೆ ಬಳಸಿಕೊಳ್ಳಲು ಬಿಡುವದಿಲ್ಲ

ಕಬ್ಬನ್ ಪಾರ್ಕ್ ಗಿರಾಕಿಗಳಿಗೆ ಬಳಸುವ ಭಾಷೆ ನಿತ್ಯ ಸುಮಂಗಲಿ, ಜಾರಿಣಿ ಪದಗಳನ್ನು ಸಾರ್ವಜನಿಕವಾಗಿ ಬಳಸುತ್ತಿರುವ ಸಿಟಿ ರವಿ ನಡತೆ ಎಂಥಹದ್ದು ಎಂದು ಬಯಲಾಗಿದೆ. ಜೆಡಿಎಸ್ , ಕಾಂಗ್ರೆಸ್ ನವರು ಎಲ್ಲಾ ಶಾಸಕರಿಗೆ ಚೆನ್ನಾಗಿ ಹಣ ತಿನ್ನಿಸಿದ್ದಾರೆ. ಗೋವಾಕ್ಕೆ ಹೋಗಿದ್ದ ರೆಡ್ಡಿ ಸಂಧಾನ ಸಾಧಿಸುವಲ್ಲಿ ಸಂಪೂರ್ಣವಾಗಿ ಸೋತ ನಂತರ ಬಿಜೆಪಿ ಸರ್ಕಾರ ಪತನ ನಿಶ್ಚಿತವಾಯಿತು ಎಂದು ಸುವರ್ಣ ಸುದ್ದಿ ವಾಹಿನಿಯಲ್ಲಿ ನಡೆದ ಚರ್ಚೆಯಲ್ಲಿ ಶ್ರೀಧರ್ ಹೇಳಿದರು.


ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X