ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅ.22 : ರಜಾದಿನ ಪಟ್ಟಿಗೆ ಹೊಸಸೇರ್ಪಡೆ

By Shami
|
Google Oneindia Kannada News

Valmiki maharshi
ಬೆಂಗಳೂರು, ಅ. 8 : ಕರ್ನಾಟಕ ರಾಜ್ಯ ಸರಕಾರದ ರಜಾದಿನಗಳ ಪಟ್ಟಿಗೆ ವಾಲ್ಮೀಕಿ ಜಯಂತಿ ರಜೆ (ಶುಕ್ರವಾರ 22 ಅಕ್ಟೋಬರ್) ಸೇರ್ಪಡೆಯಾಗುವುದರೊಂದಿಗೆ ಒಟ್ಟಾರೆ ರಜಾದಿನಗಳ ಲೆಕ್ಕ 141ಕ್ಕೆ ಏರಿದೆ. ಅಂದರೆ, 12 ತಿಂಗಳ ಅವಧಿಯಲ್ಲಿ ನಮ್ಮ ಸರಕಾರಿ ನೌಕರ ಪ್ರಭುಗಳು ಸ್ವಲ್ಪ ಹೆಚ್ಚೂ ಕಡಿಮೆ 5 ತಿಂಗಳು ಕಚೇರಿಯಿಂದ ಹೊರಗುಳಿಯುತ್ತಾರೆ. ಈ ಐದು ತಿಂಗಳಲ್ಲಿ ನಾನಾ ಬಗೆಯ ಹಬ್ಬ, ಜಯಂತಿ, ವರ್ಧಂತಿಗಳ ಜತೆಗೆ ಎರಡನೇ ಶನಿವಾರಗಳು ಮತ್ತು ಭಾನುವಾರಗಳು ಸೇರಿಕೊಂಡಿವೆ. ವಾಲ್ಮೀಕಿ ಜನಾಂಗದವರೂ, ಆರೋಗ್ಯ ಸಚಿವರೂ ಆಗಿರುವ ಶ್ರೀರಾಮುಲುರವರ ಆಗ್ರಹದಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ವಾಲ್ಮೀಕಿ ಜಯಂತಿ ರಜೆ ಘೋಷಿಸಿದ್ದಾರೆ.

ಸಾಮಾನ್ಯವಾಗಿ ಹಬ್ಬ ಹರಿದಿನಗಳ ನಿಮಿತ್ತ ಕೊಡಲಾಗುವ ರಜೆಗಳ ಸಂಖ್ಯೆ 18ರಿಂದ 20 ದಿನಕ್ಕೆ ಆಸುಪಾಸಿನಲ್ಲಿರುತ್ತದೆ. ಕೆಲವು ಹಬ್ಬಗಳು ಭಾನುವಾರ ಬಿದ್ದರೆ ಅಯ್ಯೋ ದೇವ್ರೆ ಒಂದು ರಜೆ ಕೈತಪ್ಪಿ ಹೋಯಿತಲ್ಲಾ ಎಂದು ಮೈ ಪರಚಿಕೊಳ್ಳುವಂತಾಗುತ್ತದೆ. ಇದರೊಂದಿಗೆ ಯಥಾಪ್ರಕಾರ ಸಿಎಲ್, ಪಿಎಲ್ ಮುಂತಾದ ರಜೆಗಳು ಸೇರಿದರೆ 141 ದಿನ ಸರಕಾರಿ ನೌಕರರು ಡಬ್ಬಿಯಲ್ಲಿ ಊಟಕಟ್ಟಿಕೊಂಡು, ಬಿಟಿಎಸ್ ಬಸ್ ಕ್ಯಾಚ್ ಮಾಡಿಕೊಂಡು ಅಷ್ಟು ದೂರ ಹೋಗಿ ವಾಪಸ್ಸು ಮನೆಗೆ ಬರುವ ತೊಂದರೆ ಇರುವುದಿಲ್ಲ.

ನಮ್ಮಲ್ಲಿ ಧಾರ್ಮಿಕ ಹಬ್ಬದ ರಜೆಗಳ ಜತೆಗೆ, ನಾಡ ಹಬ್ಬಗಳಿವೆ. ಮಹಾನ್ ನೇತಾರರನ್ನು, ಮಹಾನ್ ಚೇತನಗಳನ್ನು ಸ್ಮರಿಕೊಳ್ಳಲಿಕ್ಕೆಂದೇ ರಜೆಗಳಿವೆ. ಈ ರಜಾದಿನಗಳ ಲೆಕ್ಕವನ್ನು ಗಂಭೀರವಾಗಿ ಪರಿಗಣಿಸಿದರೆ ದಿಗಿಲಾಗುತ್ತದೆ. ಈ ದೇಶದಲ್ಲಿ ಎಲ್ಲರೂ ಮಹಾನ್ ವ್ಯಕ್ತಿಗಳಾಗಿ ಆನಂತರ ಅವರೆಲ್ಲ ಸತ್ತು ಸ್ವರ್ಗಕ್ಕೆ ಹೋದರೆ ಮುಂದೊಂದು ದಿನ 365 ದಿನಗಳೂ ರಜಾ ದಿನಗಳಾಗುವ ಸಂಭವವಿದೆ. ಸುಮ್ನೆ ಹೇಳ್ದೆ. ಸ್ವಲ್ಪ ಸೀರಿಯಸ್ ತಮಾಷಿ.

ಸರಿ. ಅಕ್ಟೋಬರ್ ತಿಂಗಳಲ್ಲಿ ಹಾಗೂ ಈ ವರ್ಷದಲ್ಲಿ ಕಾಣಿಸಿಕೊಳ್ಳುವ ಇತರ ರಜಾದಿನಗಳತ್ತ ಈಗ ಕಣ್ಣು ಹಾಯಿಸೋಣ.

ಅಕ್ಟೋಬರ್ 16, ಶನಿವಾರ : ಆಯುಧ ಪೂಜೆ, ಮಹಾನವಮಿ
ಅಕ್ಟೋಬರ್ 17, ಭಾನುವಾರ : ವಿಜಯದಶಮಿ
ಅಕ್ಟೋಬರ್ 22, ಶುಕ್ರವಾರ : ವಾಲ್ಮೀಕಿ ಜಯಂತಿ
ನವೆಂಬರ್ 01, ಸೋಮವಾರ : ಕನ್ನಡ ರಾಜ್ಯೋತ್ಸವ
ನವೆಂಬರ್ 05, ಶುಕ್ರವಾರ : ನರಕ ಚತುರ್ದಶಿ
ನವೆಂಬರ್ 06, ಶನಿವಾರ : ಬಲಿಪಾಡ್ಯಮಿ
ನವೆಂಬರ್ 17, ಬುಧವಾರ : ಬಕ್ರೀದ್
ನವಂಬರ್ 24, ಬುಧವಾರ : ಕನಕದಾಸ ಜಯಂತಿ
ಡಿಸೆಂಬರ್ 17, ಶುಕ್ರವಾರ : ಮೊಹರಂ
ಡಿಸೆಂಬರ್ 25, ಶನಿವಾರ : ಕ್ರಿಸ್ಮಸ್

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X