ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂತರಿಕ ಬಂಡಾಯ: ರೆಡ್ಡಿ ಸಹೋದರರ ಕೈವಾಡ?

By Rajendra
|
Google Oneindia Kannada News

Janardhana Reddy
ಬೆಂಗಳೂರು, ಅ.7: ಬಿಜೆಪಿಯಲ್ಲಿನ್ನ ಆಂತರಿಕ ಬಂಡಾಯ ಪರಾಕಾಷ್ಠೆಗೆ ತಲುಪಿದ್ದು, 19 ಮಂದಿ ಶಾಸಕರು ಬೆಂಬಲ ವಾಪಸ್ಸು ಪಡೆದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಸಂಕಷ್ಟಕ್ಕೆ ಸಿಲುಕಿದೆ. ಇಷ್ಟೆಲ್ಲಾ ಬೆಳವಣಿಗೆಗಳಿಗೆ ಯಾರು ಕಾರಣ? ಎಂಬ ಪ್ರಶ್ನೆ ಈಗ ರಾಜ್ಯ ರಾಜಕೀಯ ವಲಯದಲ್ಲಿ ಭುಗಿಲೆದ್ದಿದೆ.

ಸಂಪುಟ ಪುನಾರಚನೆ ಸಂದರ್ಭದಲ್ಲಿ ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮಣಿಸುವ ಸಂಬಂಧ ಗಣಿ ರೆಡ್ಡಿಗಳು ಹೆಣೆದಿರುವ ತಂತ್ರ ಇದು ಎನ್ನಲಾಗಿದೆ. ಬುಧವಾರ ಜನಾರ್ದನರೆಡ್ಡಿ ಸಂಧಾನಕ್ಕೆ ತೆರಳಿದ ನಂತರ ಬಂಡಾಯ ಶಾಸಕರ ಬೇಡಿಕೆ ಬದಲಾಗಿರುವುದರ ಹಿಂದೆ ಈ ದಟ್ಟ ಅನುಮಾನ ವ್ಯಕ್ತವಾಗಿದೆ.

ಒಂದು ವೇಳೆ ಪ್ರಸಕ್ತ ಬಂಡಾಯ ಶಮನಗೊಂಡರೆ ಇದರಲ್ಲಿ ರೆಡ್ಡಿ ಸಹೋದರರ ಪಾತ್ರ ಇರುವುದು ಸ್ಪಷ್ಟವಾಗಲಿದೆ.ಏತನ್ಮಧ್ಯೆ ಬಂಡಾಯ ಶಾಸಕರು ಕೊಚ್ಚಿಯಿಂದ ಮುಂಬೈಗೆ ತೆರಳಿದ್ದು ಅಲ್ಲಿಂದ ಹಾಂಕಾಂಗೆ ಹಾರುವ ಸಾಧ್ಯತೆ ಇದೆ ಎನ್ನಲಾಗಿದೆ. ಒಟ್ಟಿನಲ್ಲಿ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತೆ ಗೋಚರವಾಗುತ್ತಿದೆ. ಯಾವಾಗ ಏನಾಗುತ್ತದೋ ಎಂಬುದು ಕಾಲ ನಿರ್ಣಯಿಸಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X