ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರ ಬೀಳಿಸುವುದೇ ನಮ್ಮ ಗುರಿ : ತಂಗಡಗಿ

By Shami
|
Google Oneindia Kannada News

Kanakagiri MLA Shivaraj Tangadagi
ಬೆಂಗಳೂರು, ಅ. 7 : ಶಿರಡಿ ಸಾಯಿಬಾಬಾ ಸನ್ನಿಧಿಯಿಂದ ಇದೀಗ ಬಂದ ರಾಜಕೀಯ ಆಕಾಶವಾಣಿ ಸುದ್ದಿಗಳು ಇಂತಿವೆ. ಅಲ್ಲಿ ಜಮಾಯಿಸಿರುವ ಭಿನ್ನಮತೀಯ ಬಿಜೆಪಿ ಶಾಸಕರ ಪರವಾಗಿ ರೆಬೆಲ್ ಸ್ಟಾರ್ ಶಿವರಾಜ್ ತಂಗಡಗಿ ಅವರು ಸುವರ್ಣ ನ್ಯೂಸ್ 24/7 ಚಾನಲ್ಲಿಗೆ ಗುರುವಾರ ಮಧ್ಯಾನ್ಹ 3 ಗಂಟೆಗೆ ದೂರವಾಣಿ ಮೂಲಕ ಖಡಾಖಂಡಿತವಾಗಿ ತಿಳಿಸಿದ ವಿಷಯಗಳು ಹೀಗಿವೆ.

"ನಾವು 18 ಮಂದಿ ಮಿತ್ರರು ಯಾವುದೇ ಕಾರಣಕ್ಕೂ ಭಾರತೀಯ ಜನತಾ ಪಕ್ಷದ ಮುಖ್ಯವಾಹಿನಿಗೆ ಹಿಂತಿರುಗುವ ಪ್ರಶ್ನೆಯೇಯಿಲ್ಲ. ನಾವೆಲ್ಲ ಇಂದು ಸಂಜೆ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದೇವೆ. ಯಡ್ಡಿ ಸರಕಾರ ಭದ್ರವಾಗಿದೆ, ಬಹುಮತಕ್ಕೂ ಕೊರತೆಯಿಲ್ಲ ಎಂದ ಮಾತುಗಳೆಲ್ಲವೂ ಗಾಳಿ ಸುದ್ದಿಗಳಷ್ಟೆ. ಕರ್ನಾಟಕದ ಟಿವಿ ವಾಹಿನಿಗಳ ಮೂಲಕ ಜನತೆಯನ್ನು ದಾರಿತಪ್ಪಿಸುವ ಹೇಳಿಕೆಗಳನ್ನು ಕೆಲವು ಸ್ವಯಂಘೋಷಿತ ನಾಯಕರು ನೀಡಿದ್ದಾರೆ. ಅವರ ಈ ಸುದ್ದಿ ಹೇಳಿಕೆಗಳನ್ನು ನಂಬಬೇಡಿ."

"ನಾವು ಬೆಂಗಳೂರಿಗೆ ಬಂದೇ ಬರುತ್ತೇವೆ, ನಿಜ. ಆದರೆ, ಅಕ್ಟೋಬರ್ 11ರಂದು ನಡೆಯುವ ಅಧಿವೇಶನದಲ್ಲಿ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯದ ಪರವಾಗಿ ಮತ ಹಾಗುವುದು ಖರೆ. ನಾವು ನೊಂದಿರುವ ಮಂದಿ. ನಮ್ಮನ್ನು ಅಲಕ್ಷ್ಯ ಮಾಡಿದುದನ್ನು ಎಂದಿಗೂ ಕ್ಷಮಿಸುವುದಿಲ್ಲ."

ಭಿನ್ನಮತೀಯ ಶಾಸಕರು :

* ನೆಲಮಂಗಲ ನಾಗರಾಜ್
* ಚಳ್ಳಕೆರೆ ಡಿ. ಸುಧಾಕರ್
* ಕನಕಗಿರಿ ಶಿವರಾಜ್ ತಂಗಡಗಿ
* ಹೊನ್ನಾಳಿ ರೇಣುಕಾಚಾರ್ಯ
* ಕಾರವಾರ ಆನಂದ್ ಆಸ್ನೋಟಿಕರ್
* ಶಿವಕುಮಾರ್ ಬೆಳಮಗಿ
* ಬಾಲಚಂದ್ರ ಜಾರಕಿಹೊಳಿ
* ಹೊಸದುರ್ಗ ಗೂಳಿಹಟ್ಟಿ ಶೇಖರ್
* ಸಾಗರ ಗೋಪಾಲಕೃಷ್ಣ ಬೇಳೂರು
* ವೆಂಕಟರಮಣಪ್ಪ
* ನರೇಂದ್ರಸ್ವಾಮಿ
* ಎಸ್ಕೆ. ಬೆಳ್ಳುಬ್ಬಿ
* ಕೋಲಾರದ ಸಂಪಂಗಿ
* ಸಾರ್ವಭೌಮ ಬಗಲಿ
* ಜಿಎನ್ ನಂಜುಂಡಸ್ವಾಮಿ
* ಶಂಕರಲಿಂಗೇಗೌಡ
* ನರಸಿಂಹ ನಾಯಕ್
* ಭರಮಗೌಡ ಕಾಗೆ
* ಶಿವನಗೌಡ ನಾಯಕ್
* ರಾಜುಗೌಡ ನಾಯಕ್

ಈ ಮೇಲಿನವರ ಪೈಕಿ ಎಸ್ಕೆ ಬೆಳ್ಳುಬ್ಬಿ ಈಗಾಗಲೇ ಯಡ್ಡಿ ಕ್ಯಾಂಪಿಗೆ ಅಧಿಕೃತವಾಗಿ ಮರಳಿದ್ದಾರೆ. ಸುರಪುರ ಶಾಸಕ ರಾಜುಗೌಡ ಕೂಡ ಇದೀಗ ವಾಪಸ್ಸು ಬಂದಿದ್ದು ಜನಾರ್ದನ ರೆಡ್ಡಿಯವರ ಸಂಧಾನ ಶಿಬಿರಕ್ಕೆ ಭರ್ತಿಯಾಗಿದ್ದಾರೆಂದು ಸುವರ್ಣ ಸುದ್ದಿ ಬಿಂಬ ಹೇಳಿದೆ. ಸಂಜೆಯ ವೇಳೆಗೆ ಒಬ್ಬೊಬ್ಬರಾಗಿ ತಮ್ಮ ತಪ್ಪನ್ನು ತಿದ್ದಿಕೊಂಡು ಸರಕಾರದ ಪರವಾಗಿ ವಾಪಸ್ಸಾಗುತ್ತಾರೆ ಎಂದು ರೆಡ್ಡಿ ಹೇಳುತ್ತಿದ್ದರೆ, ವಾಪಸ್ಸು ಬರುವ ಪ್ರಶ್ನೆಯೇ ಇಲ್ಲ ಎಂದು ಶಿವರಾಜ್ ತಂಗಡಿಗಿ ಸಂಗಡಿಗರು ಹೇಳುತ್ತಿದ್ದಾರೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X