• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೈಸೂರು ಶಾಸಕ ಶಂಕರಲಿಂಗೇಗೌಡ ಅಪಹರಣ

By Rajendra
|

ಬೆಂಗಳೂರು, ಅ. 7 : ಗುರುವಾರ ಬೆಳಗಿನ ರಾಜಕೀಯ ಪರಿಸ್ಥಿತಿಗಳ ವಿಹಂಗಮ ನೋಟ ಇಂತಿದೆ. ಮೈಸೂರು ಚಾಮರಾಜ ಕ್ಷೇತ್ರದ ಶಾಸಕ ಭಿನ್ನಮತೀಯ ಎಚ್ ಎಸ್ ಶಂಕರಲಿಂಗೇಗೌಡ ಅವರನ್ನು ಯಾರೋ ಅಪಹರಿಸಿದ್ದಾರೆ. ಅವರನ್ನು ಗೋಪ್ಯ ಸ್ಥಳದಲ್ಲಿ ಅಡಗಿಸಿ ಇಡಲಾಗಿದೆ ಎಂದು ಅವರ ಮಗ ನಂದೀಶ್ ಪ್ರೀತಮ್ ಆರೋಪಿಸಿದ್ದಾರೆ.

ಶಂಕರಲಿಂಗೇಗೌಡರ ಮೈಸೂರಿನ ಟಿಕೆ ಲೇಔಟ್ ಮನೆಯಲ್ಲಿ ಜನಜಾತ್ರೆ ಸೇರಿದ್ದು ರಾಜಕೀಯ ಬೆಳವಣಿಗಿಗೆಗಳ ಬಗೆಗೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು ತೀವ್ರ ಕುತೂಹಲ ತಾಳಿದ್ದಾರೆ. ಮೈಸೂರಿನವರೇ ಆಗಿರುವ, ಆದರೆ ಭಾಜಪಕ್ಕೆ ಸೇರದ ಶಾಸಕರೊಬ್ಬರ ಕೈವಾಡ ತನ್ನ ತಂದೆಯ ಅಪಹರಣದ ಹಿಂದೆ ಇದೆ ಎಂದು ಪ್ರೀತಮ್ ಹೇಳಿದ್ದಾರೆ. ಶಂಕರ ಲಿಂಗೇಗೌಡರು ಯಾವತ್ತೂ ಬಿಜೆಪಿ ನಿಷ್ಠರಾಗಿದ್ದು ಅವರು ಪಕ್ಷವನ್ನು ತೊರೆಯುವ ಯಾವುದೇ ಸಾಧ್ಯತೆಯಿಲ್ಲ ಎಂದು ಅವರ ಮಗ ತಿಳಿಸಿದ್ದಾರೆ.

ಈ ಮಧ್ಯೆ ಇನ್ನಿಬ್ಬರು ಮಂತ್ರಿಗಳನ್ನು ವಜಾ ಮಾಡಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆದೇಶಿಸಿದ್ದಾರೆ. ಆಸ್ನೋಟಿಕರ್ ಮತ್ತು ಬಾಲಚಂದ್ರ ಜಾರಕಿಹೊಳಿ ಅವರನ್ನು ವಜಾ ಮಾಡುವ ಪತ್ರವನ್ನು ಅವರು ಗುರುವಾರ ಬೆಳಗ್ಗೆ ರಾಜ್ಯಪಾಲರಿಗೆ ತಲುಪಿಸಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ಚೆನ್ನೈನಲ್ಲಿ ಮೊಕ್ಕಾಂ ಹೂಡಿದ್ದ ಬಿಜೆಪಿ ಭಿನ್ನಮತ ಶಾಸಕರು ಪುಣೆಗೆ ಹಾರಿದ್ದಾರೆ. ಶಾಸಕರ ಗುಂಪು ಗುರುವಾರ ಬೆಳಗ್ಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ಅಲ್ಲಿಂದ ಅವರೆಲ್ಲ ಶಿರಡಿ ಸಾಯಿಬಾಬಾ ದರ್ಶನ ಪಡೆಯಲು ತೆರಳುತ್ತಿದ್ದಾರೆ. ಕಾಂಗ್ರೆಸ್ಸಿನ 45 ಶಾಸಕರು ಚಿಕ್ಕಜಾಲದ ಒಂದು ರೆಸಾರ್ಟಿನಲ್ಲಿ ಜಮಾಯಿಸಿದ್ದು ಮಂತ್ರಾಲೋಚನೆಯಲ್ಲಿ ಮಗ್ನರಾಗಿದ್ದಾರೆ. ಇದೇ ವೇಳೆ ತಮ್ಮ ಸಚಿವ ಪದ ತ್ಯಾಗ ಮಾಡಲು ಮುಜರಾಯಿ ಸಚಿವ ಕೃಷ್ಣ ಪಾಲೇಮಾರ್ ಮುಂದೆ ಬಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X