ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಂಕರಲಿಂಗೇಗೌಡ ಗುಡುಗಿಗೆ ಸರಕಾರ ಗಡಗಡ

By Prasad
|
Google Oneindia Kannada News

Shankarlinge Gowda
ಬೆಂಗಳೂರು, ಅ. 6 : ಭಿನ್ನಮತ ಸ್ಫೋಟದಿಂದಾಗಿ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲವಾಗಿದ್ದು, ರಾಜ್ಯದ ರಾಜಕೀಯದಲ್ಲಿ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಒಂದೆಡೆ ಬಿಜೆಪಿ ಭಿನ್ನಮತದ ಲಾಭ ಪಡೆಯಲು ಜೆಡಿಎಸ್ ಮುಂದಾಗಿದ್ದರೆ, ಇನ್ನೊಂದೆಡೆ ಚೆನ್ನೈನಲ್ಲಿ ಬಿಡಾರ ಹೂಡಿದ್ದ ಭಿನ್ನಮತೀಯರೊಂದಿಗೆ ಶ್ರೀರಾಮುಲು, ಅಶೋಕ್ ಸಂಧಾನ ಮಾತುಕತೆ ನಡೆಸಿದ್ದಾರೆ.

ಸಂಪುಟ ಸ್ಥಾನದಿಂದ ವಂಚಿತರಾಗಿದ್ದ ಬಿಜೆಪಿಯ ಹಿರಿಯ ಶಾಸಕ ಶಂಕರಲಿಂಗೇಗೌಡರು ಭಿನ್ನಮತೀಯ ಏಳು ಶಾಸಕರ ಸಹಿಯುಳ್ಳ ಪತ್ರವನ್ನು ರಾಜ್ಯಪಾಲರಿಗೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ 117 ಶಾಸಕರನ್ನು ಹೊಂದಿರುವ ಬಿಜೆಪಿ ಸರಕಾರದಲ್ಲಿ ಏಳು ಮಂದಿ ರಾಜೀನಾಮೆ ನೀಡಿದರೆ ಸರಕಾರ ಬಹುಮತ ಕಳೆದುಕೊಳ್ಳುವ ಸಾಧ್ಯತೆ ಇದೆ. ಬಹುಮತಕ್ಕೆ ಬೇಕಿರುವುದು 112 ಸ್ಥಾನಗಳು. ಇನ್ನೇನು ಕೆಲವೇ ಗಂಟೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ನಡೆಯಬಹುದು.

ಆನಂದ ಅಸ್ನೋಟಿಕರ್, ಬಾಲಚಂದ್ರ ಜಾರಕಿಹೊಳಿ, ಗೂಳಿಹಟ್ಟಿ ಶೇಖರ್, ನರೇಂದ್ರಸ್ವಾಮಿ, ಸಾರ್ವಭೌಮ ಬಗಲಿ, ಶಿವನಗೌಡ ನಾಯಕ್ ಭಿನ್ನಮತೀಯರಲ್ಲಿ ಮೊದಲಿಗರಾಗಿದ್ದಾರೆ ಎಂದು ಹೇಳಲಾಗಿದೆ. ಈ ಮಧ್ಯೆ ಜೆಡಿಎಸ್ ಮುಖಂಡ ಜಮೀರ್ ಮತ್ತು ಪುಟ್ಟಣ್ಣ ಬಣ ರಾಜಭವನದಲ್ಲಿ ನೆರದಿರುವುದು ತೀವ್ರ ಕುತೂಹಲವನ್ನು ಕೆರಳಿಸಿದೆ. ಒಂದು ಮಾತಿನಲ್ಲಿ ಹೇಳುವುದಾದರೆ ಶಂಕರಲಿಂಗೇಗೌಡ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ಆಪರೇಷನ್ ಕಮಲದ ಮುಖಾಂತರ ಬಿಜೆಪಿ ಸೇರಿದವರು. ಈಗ ಆಪರೇಷನ್ ಮಾಡಿದ ಪಕ್ಷಕ್ಕೇ ಆಪರೇಷನ್ ಮಾಡಲು ಹೊರಟಿದ್ದಾರೆ.

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X