ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈನಲ್ ಗೆ ರಿಲೆ ಈಜು : ಕನ್ನಡಿಗ ಬೋಪಣ್ಣಗೆ ಫಸ್ಟ್ ಗೆಲುವು

By Mrutyunjaya Kalmat
|
Google Oneindia Kannada News

CWG 2010 logo
ನವದೆಹಲಿ, ಅ. 4 : ಕಾಮನ್ ವೆಲ್ತ್ ಕ್ರೀಡಾಕೂಟ ಪುರುಷರ ರಿಲೆ ಈಜು ಸ್ಪರ್ಧೆಯಲ್ಲಿ ವಾರ್ದವಾಲ್ ಖಾಡೆ ನೇತೃತ್ವದ ಆರೋನ್ ಡಿಸೋಜಾ, ಜಯಪ್ರಕಾಶ ಮತ್ತು ಅಂಶುಲ್ ಕೋಠಾರಿ ಅವರನ್ನು ಒಳಗೊಂಡ 4X100 ಫ್ರಿಸ್ಟೈಲ್ ರಿಲೆ ತಂಡ ಫೈನಲ್ ತಲುಪಿದೆ.

ಕ್ರೀಡಾಕೂಟದ ಟೆನಿಸ್ ವಿಭಾಗದಲ್ಲಿ ಭಾರತ ಮೊದಲ ಗೆಲುವು ದಾಖಲಿಸಿದೆ. ಕರ್ನಾಟಕದ ಯುವ ಟೆನಿಸ್ ಪಟು ರೋಹನ್ ಬೋಪಣ್ಣ ಪುರುಷರ ಟೆನಿಸ್ ಸಿಂಗಲ್ಸ್ ನಲ್ಲಿ ಉಗಾಂಡಾದ ರಾಬರ್ಟ್ ಬುಯಿಂಜಾ ಅವರನ್ನು 6-1, 6-4 ನೇರ ಸೆಟ್ ಗಳಿಂದ ಸೋಲಿಸಿ ಮುನ್ನೆಡದರು.

ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಟೇಬಲ್ ಟೆನಿಸ್ ನಲ್ಲಿ ಭಾರತ ಶ್ರೀಲಂಕಾ ತಂಡವನ್ನು 3-0 ಅಂಕ ಗಳಿಸಿ ಮುನ್ನುಗ್ಗಿದೆ. ಭಾರತ ಶಮೀಮಾ ಕುಮಾರೇಶನ್ ಅವರು ನೂವಾನ್ ನಾವೂದ್ಯ ಅವರನ್ನು 11-9, 11-9, 11-7 ಅಂಕಗಳಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಮೌಮಾ ದಾಸ್ ಅವರು ಲಂಕಾದ ಮದರಂಗಿ ದರ್ಶಿಕಾ ಅವರನ್ನು 11-4, 11-5, 11-4 ಅಂಕಗಳಿಂದ ಸೋಲಿಸಿದರು.ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X