ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೈಬರ್ ಲೋಕದಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ

By Mahesh
|
Google Oneindia Kannada News

BJP slaps cyber fraud notice to Congress
ನವದೆಹಲಿ, ಅ.4: ರಾಜಕೀಯ ವಿಚಾರವಾಗಿ ಪರಸ್ಪರ ಕಿತ್ತಾಟ ನಡೆಸುತ್ತಿದ್ದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಈಗ ಸೈಬರ್ ಯುದ್ಧ ಪ್ರಾರಂಭವಾಗಿದೆ. ಬಿಜೆಪಿ ವೆಬ್‌ಸೈಟನ್ನು ಕಾಂಗ್ರೆಸ್ ತನ್ನ ಎಐಸಿಸಿ ವೆಬ್‌ಸೈಟ್‌ಗೆ ರಿಡೈರೆಕ್ಟ್ ಮಾಡಿರುವ ಅಂಶ ಬಯಲಾದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್‌ಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.

ಏನಿದು ವೆಬ್ ಸೈಟ್ ರಿಡೈರೆಕ್ಟ್ ?: ಕಳೆದ ಕೆಲವು ತಿಂಗಳಿನಿಂದ ಭಾರತೀಯ ಜನತಾಪಕ್ಷದ ವೆಬ್‌ಸೈಟ್ ಕಡಿಮೆ ಪ್ರಮಾಣದಲ್ಲಿ ಹಿಟ್ಸ್ ಪಡೆಯುತ್ತಿತ್ತು. ಇದು ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿತ್ತು. ಇದರ ಕಾರಣ ಬೆನ್ನತ್ತಿ ತನಿಖೆ ನಡೆಸಿದಾಗ ತನ್ನ ವೆಬ್‌ಸೈಟ್ ನಿಧಾನದ ಹಿಂದೆ ಕಾಂಗ್ರೆಸ್ ಕೈ ಇರುವುದು ದೃಢಪಟ್ಟಿತ್ತು. bjp.com ಎಂಬ ವೆಬ್ ತಾಣವನ್ನು ಖರೀದಿಸಿರುವ ಎಐಸಿಸಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಲ್ಲಿ ಯಶಸ್ವಿಯಾಗಿತ್ತು.

ಬಿಜೆಪಿ ತನ್ನ ವೆಬ್‌ಸೈಟ್ ಬ್ರೌಸ್ ಮಾಡಿದ ವೇಳೆ ವೆಬ್ ಪೇಜ್ ಸ್ವಯಂ ಆಗಿ ಎಐಸಿಸಿ ವೆಬ್‌ಸೈಟ್‌ಗೆ ಸಂಪರ್ಕ ಹೊಂದುವಂತೆ ಮಾಡಲಾಗಿತ್ತು. ಬಿಜೆಪಿ ಡಾಟ್ ಕಾಮ್ ಮಾಲೀಕರಾದ ಭಾರತ್ ಜನತಾ ಪ್ರಕಾಶನ ಸೈಬರ್ ನೆರವು ಪಡೆದು ಪರಿಶೀಲನೆ ನಡೆಸಿದಾಗ ಈ ಕಾಂಗ್ರೆಸ್ ಕುತಂತ್ರ ಬಯಲಿಗೆ ಬಂದಿತ್ತು.

ಕೆಲ ತಿಂಗಳ ಹಿಂದಷ್ಟೇ ಬಿಜೆಪಿ ತನ್ನ ವೆಬ್‌ಸೈಟ್ ತೆರೆದಾಗ ಅದು ಸ್ವಯಂಚಾಲಿತವಾಗಿ ಎಐಸಿಸಿ ಅಧಿಕೃತ ವೆಬ್‌ಸೈಟ್‌ಗೆ ಸಂಪರ್ಕ ಕಲ್ಪಿಸುವ ತಂತ್ರ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತಂತೆ ವಿವರಣೆ ಕೋರಿ ಕಾಂಗ್ರೆಸ್ ಪಕ್ಷಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಎರಡು ರಾಷ್ಟ್ರೀಯ ಪಕ್ಷಗಳ ನಡುವಿನ ಈ ಸೈಬರ್ ಯುದ್ಧ ಮತ್ತಷ್ಟು ತೀವ್ರತೆ ಪಡೆದುಕೊಳ್ಳುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. ಸೆ.30 ರಂದು ಅಯೋಧ್ಯೆ ತೀರ್ಪು ಹೊರಬಿದ್ದ ಹಿನ್ನೆಲೆಯಲ್ಲಿ ಹೆಚ್ಚು ವೆಬ್ ವೀಕ್ಷಕರನ್ನು ಆಕರ್ಷಿಸುವ ನಿರೀಕ್ಷೆ ಹೊಂದಿದ್ದ ಬಿಜೆಪಿ ವೆಬ್ ಸೈಟ್, ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾಗಿದೆ ಎನ್ನಲಾಗಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X