ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಯೋಧ್ಯೆ ತೀರ್ಪು ತೀರ್ಪೇ ಅಲ್ಲ : ಅರುಂಧತಿ ರಾಯ್

By Mrutyunjaya Kalmat
|
Google Oneindia Kannada News

Arundhati Roy
ನವದೆಹಲಿ, ಅ. 3 : ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ ನೀಡಿರುವ ತೀರ್ಪು ಒಂದು ರಾಜಕೀಯ ಹೇಳಿಕೆಯಾಗಿದೆ. ಅದು ಸಾಕ್ಷ್ಯಗಳು ಮತ್ತು ಸ್ಪಷ್ಟ ಕಾನೂನು ಸಿದ್ಧಾಂತಗಳನ್ನು ಆಧರಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತೆ, ಲೇಖಕಿ ಅರುಂಧತಿ ರಾಯ್ ಅಭಿಪ್ರಾಯಪಟ್ಟಿದ್ದಾರೆ. ವಿವಾದಿತ ವಿಷಯಕ್ಕೆ ಸಂಬಂಧಿಸಿ ಸಾರ್ವಜನಿಕ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ನ್ಯಾಯಾಲಯವು ಆತಂಕ ಮತ್ತು ಪ್ರಭಾವಕ್ಕೆ ಒಳಗಾಗಿರುವಂತಿದೆ ಎಂದು ಅರುಂಧತಿ ರಾಯ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟಿಸ್ (ಪಿಯುಸಿಎಲ್)ನ ಸಮಾವೇಶವೊಂದರಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಬಾಬ್ರಿ ಮಸೀದಿಯೊಳಗೆ 1949ರಲ್ಲಿ ಪ್ರತಿಷ್ಠಾಪಿಸಲಾಗಿರುವ ರಾಮಲಲ್ಲಾ ಪ್ರತಿಮೆಗೆ ಮಾನವನ ಸ್ಥಾನಮಾನ ನೀಡಿ, ವಿವಾದಿತ ಭೂಮಿಯಲ್ಲಿ ಪಾಲು ನೀಡಿರುವುದು ದಿಗ್ಭ್ರಮೆಯನ್ನು ಹುಟ್ಟು ಹಾಕಿದೆ. ಇದೊಂದು ತರ್ಕ ರಹಿತ ತೀರ್ಪಿನಂತಿದೆ ಎಂದು ರಾಯ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಕರಣ ದಾಖಲಿಸಲ್ಪಟ್ಟು 60 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ನೀಡಿರುವ ಮೂಲ ಕಾರಣವನ್ನು ಪ್ರಶ್ನಿಸಿರುವ ರಾಯ್, ಚುನಾವಣೆಗೆ ಮೊದಲು ರಾಜಕೀಯ ಲಾಭಕ್ಕಾಗಿ ಸಂಭವಿಸುವ ಕೋಮು ಗಲಭೆಯ ಭಯ ತೀರ್ಪಿನಲ್ಲಿ ಕಂಡು ಬರುತ್ತದೆ ಎಂದು ಹೇಳಿದ್ದಾರೆ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ವಾದಕ್ಕೆ ಇದು ನಿಜಕ್ಕೂ ಬೆದರಿಕೆಯಾಗಿದೆ. ಹೀಗಾಗಿ ಈ ವಿಷಯದಲ್ಲಿ ನಾವು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ ಎಂದು ರಾಯ್ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X