ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಣಸೂರು ಬ್ಯಾಂಕ್ ಅಧ್ಯಯನಕ್ಕೆ ಲಂಕಾ ತಂಡ

By Mahesh
|
Google Oneindia Kannada News

Self Help Groups, Hunsur
ಹುಣಸೂರು, ಅ.3: ಶ್ರೀಲಂಕಾದ ಸನಸಾ ಡೆವಲಪ್‌ಮೆಂಟ್ ಬ್ಯಾಂಕಿನ 14 ಅಧಿಕಾರಿಗಳ ತಂಡವು ಭಾರತದ ಮೈಕ್ರೋ ಫೈನಾನ್ಸಿಂಗ್ ಅಧ್ಯಯನದಲ್ಲಿ ಆಸಕ್ತಿವಹಿಸಿದೆ. ಈ ನಿಟ್ಟಿನಲ್ಲಿ ಹುಣಸೂರು ತಾಲೂಕಿನ ಶ್ಯಾನುಭೋಗನಹಳ್ಳಿಗೆ ಭೇಟಿ ನೀಡಿದ್ದಾರೆ.

ಮೈರಾಡ ಮತ್ತು ಜ್ಞಾನ ಚಿಗುರು ಸಂಪನ್ಮೂಲ ಕೇಂದ್ರದಿಂದ ಸ್ಥಾಪಿತಗೊಂಡಿರುವ ಶ್ಯಾನುಭೋಗನಹಳ್ಳಿಯ ಶ್ರೀವಂದನಾ ಅಗರಬತ್ತಿ ಉತ್ಪಾದನಾ ಮಹಿಳಾ ಸ್ವಸಹಾಯ ಸಂಘದ ಅಭಿವೃದ್ಧಿ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳನ್ನು ಶ್ರೀಲಂಕಾ ಅಧಿಕಾರಿಗಳು, ನಬಾರ್ಡ್ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.

ಮಹಿಳಾ ಸಂಘದ ಮುಖ್ಯಸ್ಥರಾದ ಕಾಮಾಕ್ಷಿ, ಜಯಲಕ್ಷ್ಮಿಯವರಿಂದ ಅಗತ್ಯ ಮಾಹಿತಿ ಪಡೆದುಕೊಂಡ ಅವರು, ಗ್ರಾಮಾಂತರ ಪ್ರದೇಶದ ಮಹಿಳೆಯರ ಸಾಧನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ದೇಶದಲ್ಲಿ ಪ್ರಯೋಗ ಮಾಡುವುದಾಗಿ ಶ್ರೀಲಂಕಾ ತಂಡದ ಅಧಿಕಾರಿಗಳು ತಿಳಿಸಿದರು.

ನಬಾರ್ಡ್‌ನ ಹಿರಿಯ ಅಧಿಕಾರಿಗಳಾದ ಜೆ.ಡಿ. ಭಟ್ಟಚಾರ್, ಜಿ.ಅನಂತಮೂರ್ತಿ 1984ರಲ್ಲಿ ಮಂಗಳೂರಿ ನಲ್ಲಿ ಅಸ್ತಿತ್ವಕ್ಕೆ ಬಂದ ನಬಾರ್ಡ್‌ನ ಪ್ರಾದೇಶಿಕ ಮಹಾವಿದ್ಯಾನಿಲಯವು 26 ವರ್ಷಗಳ ಅವಧಿಯಲ್ಲಿ ದಕ್ಷಿಣ ಭಾರತದ ಸಹಕಾರಿ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಹಾಗೂ ವಾಣಿಜ್ಯ ಬ್ಯಾಂಕ್‌ಗಳ 35 ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿಗೆ ವಿವಿಧ ರೀತಿಯ ತರಬೇತಿ ನೀಡುತ್ತಾ ಬಂದಿದೆ ಎಂದರು.

ಮೈಕಾಫ್ಟ್ ಸಂಸ್ಥೆಯ ಜ್ಞಾನ ಚಿಗುರು ಸಂಪನ್ಮೂಲ ಕೇಂದ್ರದ ವ್ಯವಸ್ಥಾಪಕ ಎಚ್.ಎಸ್.ಶಂಕರ್, ನಬಾರ್ಡ್ ನ ಎಂ.ಸಿ.ನಾಣಯ್ಯ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X