• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಧಾರವಾಡ : ಶ್ರೇಷ್ಠ ಕೃಷಿಕ ಪ್ರಶಸ್ತಿ ಪ್ರದಾನ

By Mrutyunjaya Kalmat
|

ಧಾರವಾಡ, ಅ. 3 : ಕೃಷಿ ಕ್ಷೇತ್ರದಲ್ಲಿ ಬಂಡವಾಳ ತೊಡಗಿಸುವುದು ಅಗತ್ಯವಾಗಿದೆ ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ಮೇಳ ಅಂಗವಾಗಿ ಶನಿವಾರ 'ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿ ಮಹಿಳೆ" ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೈಕ್ರೊ ಇರಿಗೇಶನ್ ಕ್ರಾಂತಿ : ಶಿಗ್ಗಾವಿಯಲ್ಲಿ ಕೈಗೊಂಡಿರುವ ಮೈಕ್ರೊ ಇರಿಗೇಶನ್ ದೇಶಕ್ಕೆ ಮಾದರಿಯಾಗಿದೆ. ಅಲ್ಲಿ 26,000 ಎಕರೆ ಭೂಮಿಗೆ ಮೈಕ್ರೊ ಇರಿಗೇಶನ್ ವ್ಯವಸ್ಥೆ ಮಾಡಲಾಗುತ್ತಿದೆ. ಇತರ ರಾಜ್ಯಗಳಲ್ಲಿ ಇಂಥ ಯೋಜನೆ ರೂಪಿಸುವ ಚಿಂತನೆ ನಡೆದಿದೆ. ತಜ್ಞರು ಅಲ್ಲಿ ಭೇಟಿ ನೀಡಿ ಸಲಹೆ ನೀಡಬೇಕು. ಕೃಷಿ ವಿವಿ ನೀರಾವರಿ, ಮೈಕ್ರೊ ಇರಿಗೇಶನ್ ಕುರಿತ ಸಂಶೋಧನೆಗಳ ವೆಚ್ಚವನ್ನು ನೀರಾವರಿ ಇಲಾಖೆ ಭರಿಸಲಿದೆ ಎಂದರು. ಚಿತ್ರದುರ್ಗ ಬೃಹನ್ಮಠದ ಡಾ.ಶಿವಮೂರ್ತಿ ಶರಣರು ಸಾನಿಧ್ಯ ವಹಿಸಿದ್ದರು.

ಪ್ರಶಸ್ತಿ ಪುರಸ್ಕೃತರು : ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ ಕೃಷ್ಣ ಭಟ್, ಸರಸ್ವತಿ ಗಣಪತಿ ಗಂಗೊಳ್ಳಿ, ಹಾವೇರಿಯ ಪರಮೇಶ್ವರಯ್ಯ ವೀರಭದ್ರಯ್ಯ ಸಾಲಿಮಠ, ಲಲಿತವ್ವ ವೀರಪ್ಪ ಹೊಸಳ್ಳಿ, ಗದಗ ಜಿಲ್ಲೆಯ ಸಂಗನಗೌಡ ಗೋವಿಂದಗೌಡ ಕರಿಗೌಡರ, ಪಾರ್ವತೆವ್ವ ಶಂಕ್ರಪ್ಪ ಕುರ್ತಕೋಟಿ, ಧಾರವಾಡ ಜಿಲ್ಲೆಯ ರಮೇಶ ಸಂಗನಬಸಪ್ಪ ಮೇಟಿ, ಸುಜಾತಾ ಮಹಾಬಲೇಶ್ವರ ಹೆಗಡೆ, ಬೆಳಗಾವಿಯ ಶಿವಲಿಂಗಪ್ಪ ಬಸಲಿಂಗಪ್ಪ ಸುಳ್ಳನ್ನವರ, ಶಿವಲೀಲಾ ಚಂದ್ರಶೇಖರ ಗಾಣಿಗೇರ, ವಿಜಾಪುರದ ನಾನಾಗೌಡ ಶ್ರೀಮಂತರಾಯ ಪಾಟೀಲ, ಈರಮ್ಮ ಗಂಗಾಧರ ಡುಳ್ಳಿ, ಬಾಗಲಕೋಟೆಯ ಶಂಕರ ಭರಮಪ್ಪ ಜಂಗನ್ನವರ, ಹನಮವ್ವ ಈರಣ್ಣ ಮೇಟಿ. ಇದೇ ಸಂದರ್ಭ ರಾಘವೇಂದ್ರ ಕೃಷ್ಣ ಭಟ್ ಅವರಿಗೆ ಶಂಕರಗೌಡ ಪೊಲೀಸ್‌ಪಾಟೀಲ್ ನಗದು ಪುರಸ್ಕಾರ ನೀಡಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X