ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡದ ಶ್ರೇಷ್ಠ ವಿಜ್ಞಾನ ಲೇಖಕರಿಗೆ ಪ್ರಶಸ್ತಿ ಆಹ್ವಾನ

By Prasad
|
Google Oneindia Kannada News

Karnataka Science and Technology Academy
ಬೆಂಗಳೂರು, ಅ. 2 : ಕನ್ನಡದಲ್ಲಿ ವಿಜ್ಞಾನ ವಿಷಯದ ಪುಸ್ತಕಗಳ ಬರವಣಿಗೆಯನ್ನು ಪ್ರೋತ್ಸಾಹಿಸುವ ಹಾಗೂ ಕನ್ನಡದಲ್ಲಿ ವಿಜ್ಞಾನದ ಪುಸ್ತಕಗಳು ಹೆಚ್ಚು ಹೆಚ್ಚಾಗಿ ಹೊರಬರಲು ಅನುವು ಮಾಡಿಕೊಡುವ ಉದ್ದೇಶದಿಂದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಲೇಖಕರಿಂದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ.

2009-10ನೇ ಸಾಲಿನಿಂದ ಶ್ರೇಷ್ಠ ಲೇಖಕರ ಪ್ರಶಸ್ತಿಗಾಗಿ ಲೇಖಕರು ತಮ್ಮ ಕನ್ನಡ ಪುಸ್ತಕವನ್ನು ಅಕ್ಟೋಬರ್ 30ರೊಳಗೆ ಕೆಳಗೆ ತಿಳಿಸಿದ ವಿಳಾಸಕ್ಕೆ ಕಳುಹಿಸಬಹುದು. ಶ್ರೇಷ್ಠ ಲೇಖಕರಿಗೆ ಅಕಾಡೆಮಿ ವತಿಯಿಂದ ಸನ್ಮಾನ ಹಾಗೂ ರೂ. 10 ಸಾವಿರಗಳ ಪುರಸ್ಕಾರ ನೀಡಲಾಗುತ್ತಿದೆ.

2009-10ನೇ ಸಾಲಿನಲ್ಲಿ ಕೃಷಿ ಕ್ಷೇತ್ರದಲ್ಲಿ ಬರವಣಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಕನ್ನಡದಲ್ಲಿ ಕೃಷಿ ವಿಜ್ಞಾನ ವಿಷಯದಲ್ಲಿ ಪುಸ್ತಕ ಬರೆದಿರುವ ಶ್ರೇಷ್ಠ ಲೇಖಕರಿನ್ನು ಗುರುತಿಸಿ ಸನ್ಮಾನಿಸಿ ಪುರಸ್ಕಾರ ನೀಡಲಾಗಿತ್ತು.

2010-11ನೇ ಸಾಲಿನಲ್ಲಿ ಈ ಪುರಸ್ಕಾರವನ್ನು ಕೃಷಿ ವಿಷಯದ ಲೇಖಕರಿಗಲ್ಲದೆ ಇತರೆ ವಿಜ್ಞಾನ ಲೇಖಕರಿಗೂ ನೀಡಲು ತೀರ್ಮಾನಿಸಲಾಗಿದೆ. ಈ ವರ್ಷ ಕೃಷಿ ವಿಷಯದಲ್ಲಿ ಇಬ್ಬರು ಶ್ರೇಷ್ಠ ಲೇಖಕರನ್ನು ಮತ್ತು ಇತರೆ ವಿಜ್ಞಾನ ವಿಷಯದ ಇಬ್ಬರು ಶ್ರೇಷ್ಠ ಲೇಖಕರನ್ನು ಗುರುತಿಸಿ, ಸನ್ಮಾನ ಮತ್ತು ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ.

ಪ್ರಶಸ್ತಿಗೆ ಅರ್ಹತೆ

* ಕನ್ನಡದ ಪುಸ್ತಕಗಳನ್ನು ಮಾತ್ರ ಪುರಸ್ಕಾರಕ್ಕೆ ಆಹ್ವಾನಿಸಲಾಗಿದೆ.
* ಪುಸ್ತಕಗಳು ಕಳೆದ 3 ವರ್ಷಗಳ (2007, 2008 ಮತ್ತು 2009) ಅವಧಿಯಲ್ಲಿ ಪ್ರಕಟಗೊಂಡಿರಬೇಕು.
* ಯಾವುದೇ ತರಗತಿ, ಪದವಿ-ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಅಥವಾ ಇನ್ನಿತರ ಯಾವುದೇ ಕೋರ್ಸ್‌ಗಳ ಪಠ್ಯ ಪುಸ್ತಕಗಳಾಗಿರಬಾರದು.
* ಪುಸ್ತಕಗಳು ವಿಜ್ಞಾನ ವಿಷಯಗಳಾದ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಜೀವಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಷಯಗಳಿಗೆ ಸಂಬಂಧಿಸಿರಬೇಕು.

ಸನ್ಮಾನ ಮತ್ತು ಪುರಸ್ಕಾರ

ಆಯ್ಕೆಯಾದ ಲೇಖಕರಿಗೆ ಒಂದು ಸಮಾರಂಭವನ್ನು ಏರ್ಪಡಿಸಿ ಸನ್ಮಾನ ಮಾಡಲಾಗುವುದು. ಅಲ್ಲದೆ ಆಯ್ಕೆಯಾದ ಪ್ರತೀ ಲೇಖಕರಿಗೆ ರೂ. 10 ಸಾವಿರಗಳ ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುವುದು.

ಪುಸ್ತಕಗಳನ್ನು ಕಳುಹಿಸುವ ವಿಧಾನ

ಪುರಸ್ಕಾರಕ್ಕೆ ಪುಸ್ತಕಗಳನ್ನು ಕಳುಹಿಸಲು ಬಯಸುವ ಲೇಖಕರು ಪುಸ್ತಕದ ಮೂರು ಪ್ರತಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸುವುದು:

ಸದಸ್ಯ ಕಾರ್ಯದರ್ಶಿ
ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ
ವಿಜ್ಞಾನ ಭವನ, 24/2, 21ನೇ ಮುಖ್ಯ ರಸ್ತೆ, ಬಿಡಿಎ ಕಾಂಪ್ಲೆಕ್ಸ್ ಹತ್ತಿರ
ಬನಶಂಕರಿ 2ನೇ ಹಂತ,
ಬೆಂಗಳೂರು 560 070.

ಪುಸ್ತಕಗಳನ್ನು ಸ್ವೀಕರಿಲು ಕೊನೆಯ ದಿನಾಂಕ : ಅಕ್ಟೋಬರ್ 30, 2010.

ವಿಶೇಷ ಸೂಚನೆ : 2007, 2008 ಮತ್ತು 2009ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಅಥವಾ ಸರ್ಕಾರದ ಅನುದಾನಿತ ಸಂಸ್ಥೆಗಳಿಂದ ಪುರಸ್ಕಾರ ಪಡೆದ ಲೇಖಕರನ್ನು ಪರಿಗಣಿಸುವುದಿಲ್ಲ. ಹೆಚ್ಚಿನ ವಿವರಗಳಿಗಾಗಿ ಸಂದರ್ಶಿಸಿ : http://www.kstacademy.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X