ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ ನಲ್ಲಿ ಮೈಂಡ್ ಟ್ರೀ ಸ್ಮಾರ್ಟ್ ಮೊಬೈಲ್

By Mahesh
|
Google Oneindia Kannada News

MindTree to launch Android-based Smartphone in US
ಬೆಂಗಳೂರು, ಆ.1: ಆಡ್ರಾಂಡ್ OS ಆಧಾರಿತ ಮೊಬೈಲ್ ಗಳಿಗೆ ಬೇಡಿಕೆ ಎಲ್ಲಿದೆ ಎಂದು ತಿಳಿದುಕೊಂಡ ಭಾರತದ ಮೈಂಡ್ ಟ್ರೀ ಸಂಸ್ಥೆ, ಹೊಸ ವಿನ್ಯಾಸ ಸ್ಮಾರ್ಟ್ ಫೋನ್ ಗಳನ್ನು ತಯಾರಿಸಿ ಅಮೆರಿಕದ ಮಾರುಕಟ್ಟೆಗೆ ಪರಿಚಯಿಸಲಿದೆ.

ಆರಂಭಿಕ ಹಂತದಲ್ಲಿ ಭಾರತದಲ್ಲಿ ಈ ಮೊಬೈಲ್ ಗಳನ್ನು ಪರಿಚಯಿಸಲು ಸಾಧ್ಯವಿಲ್ಲ. ಹೊಸ ಮೊಬೈಲ್ ಗಳಿಗೆ ಇನ್ನೂ ಹೆಸರಿಟ್ಟಿಲ್ಲ. ಗೂಗಲ್ ನ ಆಂಡ್ರಾಡ್ OS,3ಜಿ ನೆಟ್ ವರ್ಕ್ ಸೌಲಭ್ಯದ ಜೊತೆಗೆ ಅನೇಕ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಸ್ಮಾರ್ಟ್ ಫೋನ್ ಗಳ ಉಪಯುಕ್ತತೆಯನ್ನು ಈ ಮೊಬೈಲ್ ಹೊಂದಿರುತ್ತದೆ.ಪ್ರಸಕ್ತ ಆರ್ಥಿಕ ವರ್ಷದ ಎರಡನೆ ಅವಧಿಯಲ್ಲಿ ಯುಎಸ್ ಮಾರುಕಟ್ಟೆಯಲ್ಲಿ ಪರಿಚಯಿಸಲಿದ್ದೇವೆ ಎಂದು ಮೈಂಡ್ ಟ್ರೀ ಸಂಸ್ಥೆ ವಕ್ತಾರರು ಹೇಳಿದರು.

ಮೈಂಡ್ ಟ್ರೀಯ ಸ್ಮಾರ್ಟ್ ಫೋನ್ ನ ಬೆಲೆ ಸುಮಾರು 300 ಯುಎಸ್ ಡಾಲರ್ ಗಳಷ್ಟಿದೆ. ಅಭಿವೃದ್ಧಿ ಹೊಂದಿದ ಲ್ಯಾಟೀನ್ ಅಮೆರಿಕ ದೇಶಗಳು, ಕೆನಡಾ, ಯುಎಸ್ ಎ ಸೇರಿದಂತೆ ಯುರೋಪ್ ಮಾರುಕಟ್ಟೆಯಲ್ಲಿ ಭಾರತ ಮೂಲದ ಸಂಸ್ಥೆಯೊಂದು ತನ್ನ ಎಲೆಕ್ಟ್ರಾನಿಕ್ ಉತ್ಪನ್ನವನ್ನು ಪರಿಚಯಿಸುತ್ತಿರುವುದು ವಿಶೇಷವೆನಿಸಿದೆ.

ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅಪಲ್ ನ ಐಫೋನ್, ಬ್ಲಾಕ್ ಬೆರ್ರಿ, ಮೊಟೊರೊಲಾ ಹಾಗೂ ಸಾಮ್ ಸಂಗ್ ನ ಮೊಬೈಲ್ ಗಳು ಬೇಡಿಕೆಯಲ್ಲಿವೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X