ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಮೋಹಿ ಅಖಾರಾ ಯಾವ ಕಡೆ ಗುಂಪು?

By Mahesh
|
Google Oneindia Kannada News

Nirmohi Akhara
ಲಖ್ನೋ, ಆ.1: ಅಯೋಧ್ಯೆಯ ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ 30ರಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದ್ದು, ವಿವಾದಿತ ಭೂ ಪ್ರದೇಶವನ್ನು ಮೂರು ಭಾಗವಾಗಿ ಹಂಚಿಕೊಳ್ಳುವಂತೆ ಆದೇಶ ನೀಡಿದೆ.

ಬಾಬ್ರಿ ಮಸೀದಿಯ ಮಧ್ಯ ಭಾಗವಾದ ರಾಮಲಲ್ಲಾ ಸ್ಥಳದಲ್ಲೇ ರಾಮ ಜನ್ಮಿಸಿರುವುದರಿಂದ, 1947 ರಲ್ಲಿ ಸ್ಥಾಪಿತವಾದ ರಾಮನ ಮೂರ್ತಿಯನ್ನು ಹಾಗೆ ಉಳಿಸಿಕೊಳ್ಳುವಂತೆ ರಾಮ್ ಲಲ್ಲಾ ಸಮಿತಿಗೆ ಸೂಚಿಸಿದೆ. ಮೂರನೇ ಒಂದು ಭಾಗ ಸುನ್ನಿ ವಕ್ಫ್ ಮಂಡಳಿ ಸೇರುತ್ತದೆ. ಸೀತಾ ರಸೋಯಿ ಹಾಗೂ ರಾಮ್ ಚಬೂತರ್ ಜಾಗವನ್ನು ನಿರ್ಮೋಹಿ ಅಖಾಡ್ ಗೆ ನೀಡಲಾಗಿದೆ.

ನಿರ್ಮೋಹಿ ಅಖಾರಾ ಒಂದು ಹಿಂದೂ ಧಾರ್ಮಿಕ ಗುಂಪು,. ಶ್ರೀರಾಮನ ಭಕ್ತರು ಹಾಗೂ ಹನುಮಂತನ ಅನುಯಾಯಿಗಳು ಇದರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ನಿರ್ಮೋಹ ಎಂದರೆ ಮೋಹವಿಲ್ಲದ ಬಂಧನದ ಬೆಸುಗೆಯುಳ್ಳವರು ಒಟ್ಟಾಗಿ ಇರುವ ಗುಂಪು ಎನ್ನಬಹುದು. ಲೌಕಿಕ ಆಸಕ್ತಿ ಇರದ ಸಾಧು ಸಂತರು ಹೆಚ್ಚಾಗಿ ಈ ಗುಂಪಿನ ಸದಸ್ಯರು.

ಮಹಾಂತ ಭಾಸ್ಕರ್ ದಾಸ್ ಮುಖ್ಯಸ್ಥರಾಗಿರುವ ವೈಷ್ಣವ ಸಂಪ್ರದಾಯ ಪಾಲಕರಾದ 14 ಅಖಾರ್ ಗಳಲ್ಲಿ ನಿರ್ಮೋಹಿ ಅಖಾರಾ ಕೂಡಾ ಒಂದು. ಅಖಿಲ ಭಾರತೀಯ ಅಖಾರಾ ಪರಿಷದ್ ಇದಕ್ಕೆ ಮುಖ್ಯ ಸಂಸ್ಥೆಯಾಗಿದೆ. ಸೆ.30 ರ ಹೈ ಕೋರ್ಟ್ ನಿರ್ಣಯದಿಂದ ನಿರ್ಮೋಹಿ ಅಖಾರ್ ಕೂಡಾ ಪಾಲು ಸಿಕ್ಕಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X