ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೀರ್ಪು ಪ್ರಕಟ : ರಾಮ ರಹೀಮ ಇಬ್ಬರಿಗೂ ಜಾಗ

By * ದಿಲೀಪ್ ಆರೋರಾ, ಲಖನೌ
|
Google Oneindia Kannada News

Allahabad HC Judges SU Khan, DV Sharma and Sudhir Agarwal
ಲಖನೌ, ಸೆ. 30 : ಅತ್ಯಂತ ಕುತೂಹಲ ಮತ್ತು ಕಾತರದಿಂದ ನಿರೀಕ್ಷಿಸಲಾಗುತ್ತಿದ್ದ ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ಕುರಿತ ಅಲಹಾಬಾದ್ ಹೈಕೋರ್ಟಿನ ತೀರ್ಪು ಹೊರಬಿದ್ದಿದೆ. ವಿವಾದಿತ 2.7 ಎಕರೆ ಭೂಮಿಯನ್ನು ಯಾವುದೇ ಒಂದು ಪಂಗಡಕ್ಕೆ ನೀಡದೆ ಮೂರು ಹೋಳುಗಳನ್ನಾಗಿ ಹಂಚಿ ಸಾಮಾಜಿಕ ನ್ಯಾಯ ಮೆರೆದಿದೆ.

ಪ್ರಸ್ತುತ ರಾಮಲಲ್ಲಾ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಮತ್ತು ಅದರ ಹೊರಗಿನ ಜಾಗ ಬಾಬ್ರಿ ಮಸೀದಿ ಕ್ರಿಯಾ ಸಮಿತಿಗೆ ಸೇರಬೇಕು ಮತ್ತು ಉಳಿದ ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ.

ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಲಖನೌ ಪೀಠದ 21ನೇ ಕೋಣೆಯಿಂದ ನೀಡಿದೆ. ಅಕ್ಟೋಬರ್ 1ರಂದು ನಿವೃತ್ತರಾಗಿ ನಿರ್ಗಮಿಸುತ್ತಿರುವ ನ್ಯಾ. ಶರ್ಮಾ ಅವರು ತೀರ್ಪನ್ನು ಸರಿಯಾಗಿ 3.30ಕ್ಕೆ ಮೊದಲು ಓದಲು ಪ್ರಾರಂಭಿಸಿದರು. ಮೂರೂ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ತೀರ್ಪನ್ನು ನೀಡಿದ್ದಾರೆ. ಸರಿಯಾಗಿ ಒಂದು ಗಂಟೆಯಲ್ಲಿ ತೀರ್ಪು ಓದುವ ಪ್ರಕ್ರಿಯೆ ಮುಗಿಯಿತು.

ತೀರ್ಪಿನ ಪ್ರಕಾರ, ಸುನ್ನಿ ವಕ್ಫ್ ಬೋರ್ಡ್ ಅರ್ಜಿ ಬಹುಮತದಿಂದ ವಜಾಗೊಂಡಿದೆ. ಮಸೀದಿಯ ಸುತ್ತ ಸ್ಮಶಾನವಿತ್ತೆಂಬ ಅರ್ಜಿಯೂ ವಜಾಗೊಂಡಿದೆ. ಮೂರು ತಿಂಗಳುಗಳ ಕಾಲ ಯಥಾಸ್ಥಿತಿ ಕಾಪಾಡಬೇಕೆಂದು ಹೈಕೋರ್ಟ್ ಹೇಳಿದೆ. ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುನ್ನಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.

ಹೈಕೋರ್ಟ್ ನ 200 ಮೀಟರ್ ಸುತ್ತಮುತ್ತ ಮಾಧ್ಯಮದವರನ್ನು ಸುಳಿಯಲು ಬಿಟ್ಟಿರಲಿಲ್ಲ. ತೀರ್ಪಿನ ವಿವರ ತಿಳಿಸಲು ಮಾಧ್ಯಮ ಕೇಂದ್ರವನ್ನು ಜಿಲ್ಲಾಡಳಿತ ಸ್ಥಾಪಿಸಿತ್ತು. (ಓದಿ : ಮೂರು ಜಡ್ಜ್ ಗಳಿಂದ 6 ಪ್ರಶ್ನೆಗೆ ಉತ್ತರ)

ಸೆಲ್ ಫೋನಿನಲ್ಲಿ ಕನ್ನಡ ಓದುವ ಸಂಭ್ರಮ | ದಟ್ಸ್ ಕನ್ನಡ ಹೂವಿನಂಗಡಿ 24/7 | ಕನ್ನಡ ಸಿನಿಮಾ SMS | ಕನ್ನಡ ಸುದ್ದಿಗಳ SMS

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X