ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಶತ ಕೋಟಿ ರು.

By Mrutyunjaya Kalmat
|
Google Oneindia Kannada News

Govind Karjol
ಬೆಂಗಳೂರು, ಸೆ. 29 : ರಾಜ್ಯದ ಗುಲ್ಬರ್ಗಾ, ಬೀದರ್, ಮೈಸೂರು, ಕಿತ್ತೂರು, ಶ್ರೀರಂಗಪಟ್ಟಣ ಹಾಗೂ ಬಿಜಾಪುರವನ್ನು ಐತಿಹಾಸಿಕ ಪಟ್ಟಣಗಳೆಂದು ಗುರುತಿಸಲಾಗಿದ್ದು, ಇಲ್ಲಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕೇಂದ್ರ ಸರಕಾರವು 13ನೇ ಹಣಕಾಸು ಆಯೋಗದಿಂದ 100 ಕೋಟಿ ರುಪಾಯಿಗಳನ್ನು ಮಂಜೂರು ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ವಿಕಾಸಸೌಧದಲ್ಲಿ ಮಾತನಾಡಿದ ಅವರು, ಪಾರಂಪರಿಕ ಕಟ್ಟಡಗಳ ರಕ್ಷಣೆಗೆ ಕೇಂದ್ರ ಸರಕಾರ ಮಂಜೂರು ಮಾಡಿರುವ ಅನುದಾನವನ್ನು ಸಮಗ್ರವಾಗಿ ಬಳಸಿಕೊಳ್ಳಲು, 2011-14ಕ್ಕೆ ಅನ್ವಯವಾಗುವಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗುವುದು ಎಂದರು. ರಾಜ್ಯ ಪತ್ರಾಗಾರವು ಮೂರು ಲಕ್ಷಕ್ಕೂ ಮೇಲ್ಪಟ್ಟು ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ಇವುಗಳಲ್ಲಿ ಪ್ರಮುಖವಾಗಿ ಟಿಪ್ಪು ಸುಲ್ತಾನ್‌ರ ಆಳ್ವಿಕೆಯಲ್ಲಿನ 1799ರ ಶ್ರೀರಂಗಪಟ್ಟಣದ ಒಪ್ಪಂದ, ಬ್ರಿಟಿಷ್ ಆಳ್ವಿಕೆಯ ದಾಖಲೆಗಳು ಹಾಗೂ 1866ರಲ್ಲಿ ಪ್ರಕಟಿಸಲಾದ ಮೊದಲನೇ ಗೆಜೆಟ್ ಇದೆ ಎಂದು ಕಾರಜೋಳ ಹೇಳಿದರು.

ಸರ್.ಎಂ.ವಿಶ್ವೇಶ್ವರಯ್ಯ, ಸರ್ ಮಿರ್ಜಾ ಇಸ್ಮಾಯಿಲ್, ಶೇಷಾದ್ರಿ ಐಯ್ಯಂಗಾರ್, ದಿವಾನ್ ರಂಗಾಚಾರ್ಲು ಇವರ ವ್ಯವಹಾರಗಳ ಪತ್ರಗಳು ಹಾಗೂ 300 ಕ್ಕೂ ಮೇಲ್ಪಟ್ಟ ಗಣ್ಯ ವ್ಯಕ್ತಿಗಳ ಸ್ವತಂತ್ರ ಹೋರಾಟಗಾರರ ದಾಖಲೆಗಳನ್ನು ಸಂರಕ್ಷಿಸಿಡಲಾಗಿದೆ. ಈ ದಾಖಲೆಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಿ ಗಣಕೀಕರಣ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು.

ಹಂಪಿ ಉತ್ಸವ, ಕದಂಬೋತ್ಸವ, ದಸರಾ ಉತ್ಸವದಲ್ಲಿ ಈ ದಾಖಲೆಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಂಪಿ ಅಭಿವೃದ್ಧಿ ಪ್ರಾಧಿಕಾರದಲ್ಲಿ 80 ಲಕ್ಷ ರುಪಾಯಿ ಅನುದಾನವಿದ್ದು, ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಐತಿಹಾಸಿಕ ದಾಖಲೆಗಳ ಸಂರಕ್ಷಣೆ, ಲ್ಯಾಮಿನೇಷನ್, ಬೈಂಡಿಂಗ್ ಮಾಡಿಸಲಾಗುವುದು ಹಾಗೂ ಚಾರಿತ್ರಿಕ ಮಹತ್ವವುಳ್ಳ ದಾಖಲೆಗಳನ್ನು ಸ್ಕಾನಿಂಗ್ ಮಾಡಿ, ಗಣಕೀಕರಣ ಡಿಜಿಟಲೈಜೆಷನ್ ಮಾಡಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X