ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿಯಲ್ಲಿ ಗಾಂಧಿ ಜಯಂತಿ ಪ್ರಯುಕ್ತ ವಸ್ತ್ರ ವೈಭವ

By * ರೋಹಿಣಿ, ಬಳ್ಳಾರಿ
|
Google Oneindia Kannada News

MP J Shanta inaugurates textile exhibition
ಬಳ್ಳಾರಿ. ಸೆ.30: ಜವಳಿ ಕೈಗಾರಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪ್ರೋತ್ಸಾಹಿಸಲು ಸಂಸದೆ ಜೆ. ಶಾಂತಾ ಅವರು ಕರೆ ನೀಡಿದ್ದಾರೆ. ಜವಳಿ ಹಾಗು ಕೈಮಗ್ಗ ಇಲಾಖೆ ಏರ್ಪಡಿಸಿರುವ 'ವಸ್ತ್ರ ವೈಭವ - 2010'ರ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾತ್ಮಗಾಂಧಿ ಜಯಂತಿ ಮತ್ತು ವಿಜಯದಶಮಿ ಹಬ್ಬಗಳ ಅಂಗವಾಗಿ ರಾಜ್ಯ ಮಟ್ಟದ ವಿಶೇಷ ಕೈಮಗ್ಗ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಸೆ.29ರಿಂದ 15 ದಿನಗಳವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಕೈಮಗ್ಗ ಬಟ್ಟೆಗಳನ್ನು ಖರೀದಿಸಿ ನೇಕಾರರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಈ ಮೇಳದಲ್ಲಿ 42 ಕೈಮಗ್ಗ ನೇಕಾರ ಸಹಕಾರ ಸಂಘಗಳು ಪಾಲ್ಗೊಂಡಿವೆ. ಬಳ್ಳಾರಿಯ 13 ಹಾಗೂ ಮತ್ತಿತರ ಜಿಲ್ಲೆಗಳಿಂದ 27, ಹೊರರಾಜ್ಯದ 2 ಸಂಘಗಳು ಪಾಲ್ಗೊಂಡಿವೆ. ವಿವಿಧ ನಮೂನೆಯ ಕೈಮಗ್ಗ ಬಟ್ಟೆಗಳು, ಹತ್ತಿ ಸೀರೆಗಳು, ಕರವಸ್ತ್ರಗಳು, ಲುಂಗಿ, ಬೆಡ್‌ಶೀಟ್, ಉಣ್ಣೆ ಕಂಬಳಿ, ರಗ್ಗು, ಕಾರ್ಪೆಟ್, ತೆಕ್ಕಲಕೋಟೆಯ ಪ್ರಸಿದ್ಧ ಗುಡಾರಗಳು, ಡೋರ್ ಮ್ಯಾಟ್ಸ್, ಮೈಸೂರು ಮತ್ತು ಮೊಳಕಾಲ್ಮೂರು ರೇಷ್ಮೆ ಸೀರೆಗಳು ಮಾರಾಟಕ್ಕೆ ಲಭ್ಯ ಎಂದು ಜವಳಿ ಕೈಮಗ್ಗ ಇಲಾಖೆ ಉಪನಿರ್ದೇಶಕ ಶ್ರೀಧರ್‌ನಾಯಕ್ ಅವರು ತಿಳಿಸಿದರು.

ಈ ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಂಜಮ್ಮ, ಸಹಾಯಕ ನಿರ್ದೇಶಕ ವಾಸುದೇವ ದೊಡ್ಡಮನಿ, ಟೆಕ್ಸ್‌ಟೈಲ್ ಪ್ರೊಮೋಟರ್ ಅಧಿಕಾರಿ ಎಸ್.ಎಸ್. ಬೆಳಕಲ್ ಉಪಸ್ಥಿತರಿದ್ದರು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X