ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲಾ ಹೋಟೆಲ್ ಗಳಲ್ಲಿ ಬಾಳೆಲೆ ಬಳಸಲು ಕರೆ

By Mahesh
|
Google Oneindia Kannada News

Plantain Leaf
ಬೆಂಗಳೂರು, ಸೆ.29: ರಾಜ್ಯದ ಎಲ್ಲಾ ಉಪಾಹಾರ ಕೇಂದ್ರಗಳು, ಭೋಜನಾಲಯಗಳೂ ( ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು) ಸೇರಿದಂತೆ ಎಲ್ಲಾ ಬಗೆಯ ತಿನಿಸು ಧಾಮಗಳಲ್ಲಿ ಗ್ರಾಹಕರಿಗೆ ಬಾಳೆ ಎಲೆಯ ಮೇಲೆಯೇ ಆಹಾರವನ್ನು ಸೇವಿಸಲು ಒದಗಿಸಬೇಕು ಎಂದು ಸರ್ಕಾರ ಆದೇಶ ಹೊರಡಿಸಿದಲ್ಲಿ, ಬಾಳೆ ಬೆಳೆ ರಾಜ್ಯದಲ್ಲಿ ಹಣದ ಹೊಳೆಯನ್ನೇ ಹರಿಸಲಿದೆ ಎಂದು ಪತಂಜಲಿ ಯೋಗಾಶ್ರಮ ಟ್ರಸ್ಟ್ ಧರ್ಮದರ್ಶಿ ವಿ. ರಘುಚಂದ್ರ ಗುರೂಜಿ ಅವರು ತಿಳಿಸಿದರು.

ಪತಂಜಲಿ ಯೋಗಾಶ್ರಮ ಟ್ರಸ್ಟ್ ಸಹಯೋಗದೊಂದಿಗೆ ಗಾರ್ಡನ್ ವಿಲ್ಲಾಸ್ ಬಡಾವಣೆಯಲ್ಲಿ ಆಯೋಜಿಸಿದ್ದ 'ಸಸ್ಯಾಹಾರ: ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಪರಿಹಾರ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಒಂದೆಡೆ ಬಾಳೆ ಎಲೆಯ ಮೇಲೆ ಆಹಾರ ಸೇವಿಸಿದವರಿಗೆ ತೃಪ್ತಿ ದೊರೆಯುತ್ತದೆ. ಮತ್ತೊಂದೆಡೆ ತಟ್ಟೆ ತೊಳೆಯುವ ತಾಪತ್ರಯ ತಪ್ಪುವುದರ ಜೊತೆಗೆ ತಿನಿಸು ಧಾಮಗಳಲ್ಲಿ ಶುಚಿತ್ವಕ್ಕೆ ಆದ್ಯತೆ ಲಭಿಸುತ್ತದೆ. ಅಲ್ಲದೆ, ಎಲ್ಲೆಡೆ ಬಾಳೆ ಎಲೆಗೆ ಬೇಡಿಕೆಯೂ ಹೆಚ್ಚುತ್ತದೆ. ಬೇಡಿಕೆ ಹೆಚ್ಚಾದಂತೆ ರೈತರೂ ಬಾಳೆ ಬೆಳೆ ಬೆಳೆಯಲು ಒತ್ತು ನೀಡುತ್ತಾರೆ. ಆರ್ಥಿಕ ಸಧೃಡತೆಯತ್ತ ಮುನ್ನಡೆಯುತ್ತಾರೆ. ಹೂವಿನ ಜೊತೆ ನಾರೂ ಸ್ವರ್ಗಕ್ಕೆ ಹೋದಂತೆ ಎಂಬ ಗಾದೆಯಂತೆ ಬಾಳೆ ಎಲೆಯ ಜೊತೆ ಬಾಳೆ ಹಣ್ಣುಗಳ ಉತ್ಪಾದನೆಯಲ್ಲೂ ಕ್ರಾಂತಿಯಾಗಲಿದೆ. ಒಟ್ಟಾರೆ ಇಡೀ ರಾಜ್ಯವೇ ಪ್ರಗತಿ ಪಥದಲ್ಲಿ ಸಾಗಲಿದೆ ಎಂದು ಅವರು ವಿವರಿಸಿದರು.

ಮಾನವನ ದೇಹ ಸಸ್ಯಾಹಾರ ಸೇವನೆಗೆ ಯೋಗ್ಯವಾಗಿದೆ. ಸಸ್ಯಾಹಾರ ಸೇವನೆಯಿಂದ ಮಾನವ ಅರಳುತ್ತಾನೆ. ಮಾಂಸಾಹಾರ ಸೇವನೆಯಿಂದ ನರಳುತ್ತಾನೆ ಎಂದ ರಘುಚಂದ್ರ ಗುರೂಜಿ ಅವರು ಮಾಂಸಾಹಾರಿಗಳಿಗಿಂತಲೂ ಸಸ್ಯಾಹಾರಿಗಳು ಹೆಚ್ಚು ಆರೋಗ್ಯವಂತರು ಹಾಗೂ ಧೀರ್ಘಾಯುಷಿಗಳಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟರು.

ವಾರ್ತಾ ಇಲಾಖೆಯ ಉಪ ನಿರ್ದೇಶಕ ಡಿ.ಪಿ. ಮುರಳೀಧರ್ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ದೇಶಗಳಲ್ಲಿ ಸಸ್ಯಾಹಾರಕ್ಕೆ ಆದ್ಯತೆ ದೊರೆಯುತ್ತಿದ್ದರೂ, ಭಾರತದ ಬೃಹನ್ನಗರಿಗಳಲ್ಲಿ ವಾಸಿಸುತ್ತಿರುವ ಸಸ್ಯಾಹಾರಿಗಳು ಮಾಂಸಾಹಾರಿಗಳಾಗಿ ಪರಿವರ್ತಿತರಾಗುತ್ತಿರುವುದು ಅತ್ಯಂತ ಕಳವಳದ ಸಂಗತಿಯಾಗಿದೆ ಎಂದರು.

ವಿಚಾರ ಸಂಕಿಣದಲ್ಲಿ ಪಾಲ್ಗೊಂಡಿದ್ದ ಸಭಿಕರು ಇನ್ನು ಮುಂದೆ ಸಸ್ಯಾಹಾರವನ್ನೇ ಸೇವಿಸುವುದಾಗಿ ಪ್ರಮಾಣ ಮಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X