ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಜನ್ಮಭೂಮಿ ಹಿಂದೂಗಳ ಸ್ವತ್ತು : ಚಿದಾನಂದಮೂರ್ತಿ

By Mrutyunjaya Kalmat
|
Google Oneindia Kannada News

M Chidanandamurthy
ಬೆಂಗಳೂರು, ಸೆ. 29 : ರಾಮಜನ್ಮಭೂಮಿ ಹಿಂದುಗಳಿಗೆ ಸೇರಿದ್ದು ಎಂದು ಸಂಶೋಧಕ ಡಾ. ಎಂ ಚಿದಾನಂದಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಅಲಹಾಬಾದ್ ಹೈಕೋರ್ಟ್ ಯಾವುದೇ ತೀರ್ಪು ನೀಡಿದರೂ ಸುಪ್ರೀಂ ಕೋರ್ಟ್‌ಗೆ ಹೋಗಲು ಅವಕಾಶವಿರುವುದರಿಂದ ಹಿಂದುಗಳು ಶಾಂತಿಯಿಂದ ಇರಬೇಕು ಎಂದು ಮಾಧ್ಯಮಗಳ ಮುಖಾಂತರ ಅವರು ಮನವಿ ಮಾಡಿಕೊಂಡಿದ್ದಾರೆ.

ಅಯೋಧ್ಯೆ ಹಿಂದುಗಳ ಪವಿತ್ರ ಕ್ಷೇತ್ರ. 10-11ನೇ ಶತಮಾನದ ಕನೋಜ್ ಚಕ್ರವರ್ತಿಗಳ ಕಾಲದಿಂದ ಅಲ್ಲಿ ಹಲವು ದೇವಾಲಯಗಳು ನಿರ್ಮಾಣವಾದವು. ಅದಕ್ಕೂ ಮೊದಲೇ ರಾಮದೇವಾಲಯವಿತ್ತು ಎಂದು ಅವರು ಹೇಳಿದರು. ಕ್ರಿ.ಶ. 1528ರಲ್ಲಿ ದೆಹಲಿಯ ಮೊಘಲ್ ಸಾಮ್ರಾಟ ಬಾಬರನು ಅದನ್ನು ಭಗ್ನಗೊಳಿಸಿ ಮಸೀದಿ ಕಟ್ಟಿಸಿದ.

ಆ ಮಸೀದಿಯು ರಾಮಜನ್ಮಭೂಮಿಯಲ್ಲಿ ನಿರ್ಮಾಣವಾದದ್ದು ಎಂಬುದಕ್ಕೆ ಪ್ರಬಲ ಸಾಕ್ಷ್ಯಾಧಾರಗಳಿವೆ. ಆದ್ದರಿಂದ ತೀರ್ಪು ಹಿಂದುಗಳ ಪರ ಆಗುವವರೆಗೂ ಹೋರಾಟ ಮಾಡೋಣ. ಆದರೆ, ಸಹನೆ ಕಳೆದುಕೊಂಡು ಹಿಂಸಾಚಾರಕ್ಕೆ ಕೈಹಾಕಬಾರದು ಎಂದರು. ಆತ್ಮಾನಂದ ಸರಸ್ವತಿ ಸ್ವಾಮೀಜಿ, ಅಯೋಧ್ಯೆಯಲ್ಲಿ ಈ ಹಿಂದೆ ನಡೆದ ಆಂದೋಲನ ಹಾಗೂ ಗಲಭೆ ಕುರಿತ ಕೆಲವು ಘಟನೆಗಳನ್ನು ವಿವರಿಸಿದರು. ಹಿಂದು ಮಹಾಸಭಾ ಅಧ್ಯಕ್ಷ ಎಂ.ವಾಸುದೇವರಾವ್ ಕಶ್ಯಪ್, ಅಯೋಧ್ಯೆ ಹಿಂದುಗಳ ಪರವಾಗುವವರೆಗೆ ಹೋರಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X