ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆಫ್ಟ್ ರೈಟ್, ಲೆಫ್ಟ್ ರೈಟ್, ಲೆಫ್ಟ್ ರೈಟ್

By Mrutyunjaya Kalmat
|
Google Oneindia Kannada News

Police March
ಬೆಂಗಳೂರು, ಸೆ. 29 : ಅಯೋಧ್ಯೆ ತೀರ್ಪಿನ ಸಲುವಾಗಿ ಗುರುವಾರ ಮತ್ತು ಶುಕ್ರವಾರ ಶಾಲಾ ಕಾಲೇಜುಗಳಿಗೆ ರಜೆ ಮತ್ತು ಮದ್ಯ ಮಾರಾಟ ನಿಷೇಧ ಹೊರತುಪಡಿಸಿ ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಬಸ್ ಗಳು, ಸರಕಾರಿ ಕಚೇರಿಗಳು, ಬ್ಯಾಂಕ್ ಸೇರಿ ಮತ್ತಿತರ ಅಗತ್ಯ ಸೇವಾ ಕೇಂದ್ರಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಜೀವನಚಕ್ರ ಯಥಾಪ್ರಕಾರ ಸಾಗಲಿದೆ. ದೈನಂದಿನ ಬೇಡಿಕೆಯ ಪದಾರ್ಥಗಳಾದ ಅಕ್ಕಿ ಕಾಳುಬೇಳೆ, ಹಾಲು ತರಕಾರಿ, ಔಷಧ ಮತ್ತು ಆಟೋರಿಕ್ಷಾ ಸವಾರಿಗೆ ತೊಂದರೆ ಉಂಟಾಗದು. ಆದರೆ, ಅಬಕಾರಿ ಇಲಾಖೆಯ ಕಟ್ಟಾಜ್ಞೆಯಂತೆ ಬೀರು, ಬ್ರಾಂದಿ, ವಿಸ್ಕಿ ಮುಂತಾದ ಅಮಲೇರಿಸುವ ಪದಾರ್ಥಗಳನ್ನು ಮಾರಾಟ ಮಾಡುವ ವೈನ್ ಶಾಪುಗಳಿಗೆ 4 ದಿನ ಬೀಗ ಜಡಿಯಲಾಗುತ್ತದೆ.

ಕಾನೂನು ಸುವ್ಯವಸ್ಥೆ ಕಾಪಾಡಲು ಬೆಂಗಳೂರು ನಗರದಲ್ಲಿ ಸೆ. 30ರಂದು ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 2 ಮದ್ಯರಾತ್ರಿ 12 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ನಗರ ವ್ಯಾಪ್ತಿಯಲ್ಲಿರುವ ಮದ್ಯದಂಗಡಿಗನ್ನು ಮುಚ್ಚುವಂತೆ ನಗರ ಪೊಲೀಸ್ ಆಯುಕ್ತ ಶಂಕರ ಬಿದರಿ ಈಗಾಗಲೇ ಆಜ್ಞಾಪಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗಿದೆ. 50 ಸಾವಿರ ಸಿವಿಲ್ ಪೊಲೀಸರ ಜೊತೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. 150 ಡಿಎಆರ್ ಪ್ಲಟೂನ್, 200 ಕೆಎಸ್ಆರ್ ಪಿ ಪ್ಲಟೂನ್ ಹಾಗೂ 12,000 ಹೋಮ್ ಗಾರ್ಡ್ಸ್ ಭದ್ರತೆಯ ಹೊಣೆ ಹೊರಲಿದ್ದಾರೆ. ಮಂಗಳೂರು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆ.

ವದಂತಿಗಳಿಗೆ ಕಿವಿಗೊಡಬೇಡಿ

ಸಾರ್ವಜನಿಕರು ಯಾವುದೇ ವದಂತಿಗೆ ಕಿವಿಗೊಡಬಾರದು ಹಾಗೂ ವದಂತಿಗಳಿಗೆ ಪ್ರತಿಕ್ರಿಯಿಸಬಾರದು. ಘಟನೆ ಬಗ್ಗೆ ಯಾವುದೇ ಸ್ಪಷ್ಟೀಕರಣ ಬೇಕಿದ್ದರೆ ಹತ್ತಿರದ ಠಾಣೆಗೆ ಅಥವಾ ಜಿಲ್ಲಾ ನಿಯಂತ್ರಣ ಕೊಠಡಿ 100ಕ್ಕೆ ಸಂಪರ್ಕಿಸುವುದು. ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲಾ ಅಧೀಕ್ಷಕರು, ಪೊಲೀಸ್ ಆಯುಕ್ತರು ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು. ಯಾವುದೇ ಭಾಗದಿಂದ ಉಚಿತ ಕರೆ 18004250100 ಗೆ ಕರೆ ಮಾಡಿ ಸ್ಪಷ್ಟೀಕರಣ ಕೇಳಬಹುದು.

ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ :

ಡಿಜಿ-ಐಜಿಪಿ- 2221 1803, 2221 4100, 94484 66133,
ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ - 2221 1834, 2668 4688, 94808 00005
ಎಡಿಜಿಪಿ ಗುಪ್ತವಾರ್ತೆ - 2221 1834, 2668 4688, 94498 78500
ಡಿಐಜಿಪಿ ಗುಪ್ತವಾರ್ತೆ - 2221 5129, 2558 9933, 94498 78501
ಬೆಂಗಳೂರು ಪೊಲೀಸ್ ಆಯುಕ್ತರು - 2226 0707, 2668 6355, 94481 27854

ಅಲಹಾಬಾದ್ ಹೈಕೋರ್ಟ್ ಗೆ ಭದ್ರತೆ : ಚಿದಂಬರಂ

ನಾಳೆ ಮಧ್ಯಾಹ್ನ 3.30ಕ್ಕೆ ಅಯೋಧ್ಯೆ ರಾಮಜನ್ಮಭೂಮಿ ಬಾಬ್ರಿ ಮಸೀದಿ ಮಾಲೀಕತ್ವದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್ ನೀಡಲಿರುವ ಹಿನ್ನೆಲೆಯಲ್ಲಿ ಅಯೋಧ್ಯೆ ಮತ್ತು ಹೈಕೋರ್ಟ್ ಭದ್ರತೆಗೆ ಸಿಆರ್ ಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಭದ್ರತಾ ಸಿಬ್ಬಂದಿ ಈ ಸ್ಥಳಗಳನ್ನು ಹಗಲು-ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ಕಾಯಲಿವೆ ಎಂದು ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತೀರ್ಪಿನ ಹಿನ್ನೆಲೆಯಲ್ಲಿ ಹೆಚ್ಚಿನ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಉತ್ತರ ಪ್ರದೇಶದ ಸೂಕ್ಷ್ಮ ರಾಜ್ಯ ಎಂದು ಗುರುತಿಸಲಾಗಿದ್ದು, ಜೊತೆಗೆ ಇಲ್ಲಿನ ನಾಲ್ಕು ಸ್ಥಳಗಳನ್ನು ಅತಿ ಸೂಕ್ಷ್ಮಸ್ಥಳಗಳಿಗೆ ಪೊಲೀಸ್ ಭದ್ರತೆ ಹಾಗೂ ಸಿಆರ್ ಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ.

ನಾಳೆ ಮಧ್ಯಾಹ್ನ ತೀರ್ಪು ಹೊರಬರಲಿರುವ ಕಾರಣ ಅಲಹಾಬಾದ್ ಹೈಕೋರ್ಟ್ ಸುತ್ತಮುತ್ತ ಖಾಕಿ ಪಡೆ ಕಾರ್ಯನಿರ್ವಸಲಿದೆ. ವಿವಾದಿತ ಸ್ಥಳ ಅಯೋಧ್ಯೆಗೆ ಒಬ್ಬ ಎಸ್ಪಿ, 6 ಹೆಚ್ಚುವರಿ ಎಸ್ಪಿಗಳು, 22 ಸಹಾಯಕ ಎಸ್ಪಿಗಳು, 144 ಸಬ್ ಇನ್ಸ್ ಪೆಕ್ಟರ್ ಗಳು, 104 ಹೆಡ್ ಕಾನ್ ಸ್ಟೇಬಲ್ ಗಳು, 807 ಪೇದೆಗಳು ಕಾರ್ಯನಿರ್ವಹಿಸಲಿದ್ದಾರೆ. ಇದರ ಜೊತೆಗೆ ಎರಡು ಪ್ಯಾಕ್ ಕಂಪನಿಗಳು, ಸಿಆರ್ ಪಿಎಫ್ ಮತ್ತು ಆರ್ಎಎಫ್ ಸಿಬ್ಬಂದಿಗಳು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದರು.

ಇದರಂತೆ ತೀರ್ಪು ನೀಡುತ್ತಿರುವ ಅಲಹಾಬಾದ್ ಹೈಕೋರ್ಟ್ ಗೆ ಇಬ್ಬರು ಎಸಿಪಿಗಳು. 16 ಡಿಎಸ್ ಪಿಗಳು. 6 ಇನ್ಸ್ ಪೆಕ್ಟರ್ ಗಳು, 30 ಸಬ್ ಇನ್ಸ್ ಪೆಕ್ಟರ್ ಗಳು, 200 ಪೇದೆಗಳು, 4 ಪ್ಯಾಕ್ ಕಂಪನಿಗಳ ಸಿಬ್ಬಂದಿಗಳನ್ನು ಭದ್ರತೆಗೆ ಹಾಕಲಾಗಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X