ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗದಗ : ಹಿಂದೂಗಳಿಂದಲೇ ಮಸೀದಿ ನಿರ್ಮಾಣ!

By Mrutyunjaya Kalmat
|
Google Oneindia Kannada News

Gadag Map
ರೋಣ(ಗದಗ), ಸೆ. 28 : ಅಯೋಧ್ಯೆ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಮಾಲೀಕತ್ವದ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರಿಂಕೋರ್ಟ್ ನಿಂದ ಮಹತ್ವದ ನಿರ್ಣಯ ಹೊರಬೀಳಲಿದೆ. ಈ ಮಧ್ಯೆ, ಹಿಂದೂ ಮತ್ತು ಮುಸ್ಲಿಮರು ಜೊತೆಯಾಗಿ ಮಸೀದಿ ನಿರ್ಮಿಸುವ ಮೂಲಕ ಭಾವೈಕ್ಯತೆ ಮೆರೆದಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಪುರ್ತಗೇರಿ ಗ್ರಾಮದಲ್ಲಿ ನಡೆದಿದೆ.

ಗಜೇಂದ್ರಗಡ ಸಮೀಪ ಇರುವ ಪುರ್ತಗೇರಿಯಲ್ಲಿ 170 ಮನೆಗಳಿವೆ. ಮುಸ್ಲಿಂ ಕುಟುಂಬಗಳು ಇರುವುದು 3 ಮಾತ್ರ. ಗ್ರಾಮದಲ್ಲಿ 700 ಜನಸಂಖ್ಯೆ ಇದ್ದು, ಶೇ. 97 ರಷ್ಟು ಹಿಂದೂಗಳೇ ಇದ್ದಾರೆ ಎನ್ನುವುದು ವಿಶೇಷ. ಕಳೆದ ವರ್ಷ ಸುರಿದ ಮಳೆಯಿಂದಾಗಿ ಮಸೀದಿ ಕುಸಿದು ಬಿದ್ದಿತ್ತು. ಮೂರು ಮುಸ್ಲಿಂ ಕುಟುಂಬಗಳು ಮಸೀದಿ ಕಟ್ಟುವುದಾದರೂ ಹೇಗೆ ? ಕೃಷಿ, ಕೂಲಿ ಮಾಡಿ ಬದುಕುವ ಹಾಗೂ ಸ್ವತಃ ನೆರೆ ಹಾನಿ ಅನುಭವಿಸಿದ ಗ್ರಾಮಸ್ಥರಿಗೂ ತಾವು ದೊಡ್ಡ ದೇಣಿಗೆ ನೀಡುವುದು ಸಾಧ್ಯವಿಲ್ಲ ಎನಿಸಿತು.

ಮಸೀದಿ ಕಟ್ಟಲು ಏನಿಲ್ಲವೆಂದರೂ ಒಂದೂವರೆ ಲಕ್ಷ ರುಪಾಯಿ ಬೇಕು. ಹೀಗಾಗಿ. ಗ್ರಾಮದ ಹಿರಿಯರೆಲ್ಲರೂ ಗಜೇಂದ್ರಗಡ ಪಟ್ಟಣದ ಗಣ್ಯರು, ವ್ಯಾಪಾರಿಗಳು ಮತ್ತು ದಾನಿಗಳ ನೆರವನ್ನು ಪಡೆಯುವ ಮೂಲಕ ಕಾಮಗಾರಿಯನ್ನು ಪೂರ್ಣಗೊಳಿಸಿ ಮಸೀದಿ ನಿರ್ಮಿಸಿದ್ದಾರೆ.

ನಮ್ಮೂರಾಗ ಎಲ್ಲರೂ ಒಂದೇ. ನಮ್ಮಲ್ಲಿ ಮೇಲು-ಕೀಳು, ಹಿಂದೂ-ಮುಸ್ಲಿಂ ಭೇದ ಭಾವಗಳಿಲ್ಲ. ಪುರ್ತಗೇರಿ ಗ್ರಾಮಸ್ಥರಿಗೆ ಏನೇ ಕಷ್ಟ. ಸುಖ ಇರಲಿ, ದುಃಖ ಇರಲಿ ಹಂಚಿಕೊಳ್ಳುತ್ತೇವೆ. ನಾವೆಲ್ಲರೂ ಸಹೋದರರಿದ್ದಂತೆ. ನಮ್ಮ ಮೈಯಲ್ಲಿ ಹರಿಯುತ್ತಿರುವುದು ಒಂದೇ ರಕ್ತ. ಸೇವಿಸುವ ಗಾಳಿಯೂ ಒಂದೇ. ಮೊಹರಂ ಹಬ್ಬವನ್ನು ಸಹ ಗ್ರಾಮಸ್ಥರೆಲ್ಲರೂ ಕೂಡಿ ವಿಶಿಷ್ಟವಾಗಿ ಆಚರಿಸುತ್ತೇವೆ ಎಂದು ಹೇಳುತ್ತಾರೆ ಪುರ್ತಗೇರಿ ಜನತೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X