ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಹಾಬಾದ್ ನತ್ತ ಮುಖ ಮಾಡಿದ ಎಲ್ಲಾ ಪಕ್ಷಗಳು

By Mahesh
|
Google Oneindia Kannada News

Ayodhya verdict on september 30
ನವದೆಹಲಿ, ಸೆ.28: ಬಾಬ್ರಿ ಮಸೀದಿ ರಾಮಜನ್ಮಭೂಮಿ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಇದ್ದ ತಡೆಯಾಜ್ಞೆಯನ್ನು ಸುಪ್ರಿಂಕೋರ್ಟ್ ಇಂದು ತೆರವುಗೊಳಿಸಿದೆ. ಸೆ.30 ರಂದು ಅಲಹಾಬಾದ್ ಹೈಕೋರ್ಟ್ ಅಂತಿಮ ತೀರ್ಪು ನೀಡಲಿದ್ದು, ದೇಶದ ಪ್ರಮುಖ ಪಕ್ಷಗಳು ಕೋರ್ಟ್ ನಿರ್ಣಯವನ್ನು ಮುಕ್ತವಾಗಿ ಸ್ವಾಗತಿಸಿವೆ.

ಬಿಜೆಪಿ ವಕ್ತಾರ ಬಲ್ಬೀರ್ ಪುಂಜ್, ಹಿಂದೂ ಮಹಾಸಭಾ ಮುಖಂಡರು ಕೋರ್ಟ್ ನಿರ್ಣಯವನ್ನು ಸ್ವಾಗತಿಸಿ, ಒಳ್ಳೆಯ ಬೆಳವಣಿಗೆ ಎಂದಿದ್ದಾರೆ. ಆರ್ ಸಿ ತ್ರಿಪಾಠಿ ಮೇಲ್ಮನವಿ ಸಲ್ಲಿಕೆಗೆ ವಿರೋಧ ವ್ಯಕ್ತ ಪಡಿಸಿದ್ದ ಸುನ್ನಿ ಕೇಂದ್ರ ವಕ್ಫ್ ಮಂಡಳಿ ವಕ್ತಾರರು ಕೂಡಾ ಪ್ರತಿಕ್ರಿಯಿಸಿದ್ದು, ಸೆ.30 ರಂದು ಮಧ್ಯಾಹ್ನ 3.30ಕ್ಕೆ ಅಲಹಾಬಾದ್ ಹೈಕೋರ್ಟ್ ನೀಡುವ ನಿರ್ಣಯಕ್ಕೆ ಬದ್ಧರಾಗಿರುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಜನಾರ್ಧನ್ ದ್ವಿವೇದಿ ಮಾತನಾಡುತ್ತಾ, 'ಕಾಂಗ್ರೆಸ್ ಪಕ್ಷ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ ಹಾಗೂ ಹೈ ಕೋರ್ಟ್ ನೀಡುವ ನಿರ್ಣಯವನ್ನು ಎಲ್ಲರೂ ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳಬೇಕು ಹಾಗೂ ನ್ಯಾಯಾಲಯದ ನಿರ್ಣಯ್ಕ್ಕೆ ತಲೆ ಬಾಗಬೇಕು' ಎಂದಿದ್ದಾರೆ.

ಬಿಜೆಪಿಯ ಪ್ರಕಾಶ್ ಜಾವೇದ್ ಕರ್ ಪ್ರತಿಕ್ರಿಯೆ ನೀಡುತ್ತಾ, 'ದೇಶದ ಜನತೆ ಶಾಂತಿ ಹಾಗೂ ಸುರಕ್ಷತೆಯನ್ನು ಕಾಯ್ದುಕೊಳ್ಳಬೇಕು. ಊಹಾಪೋಹಗಳಿಗೆ ಕಿವಿಗೊಡದೆ, ಹೈಕೋರ್ಟ್ ನೀಡುವ ತೀರ್ಪಿಗೆ ಕಾಯೋಣ. ಇದೊಂದು ನ್ಯಾಯಾಂಗ ಹೋರಾಟ ಅಷ್ಟೆ. ತೀರ್ಪು ವ್ಯತಿರಿಕ್ತವಾದರೆ, ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಬಹುದು ಎಂದಿದ್ದಾರೆ.

ಆದರೆ, ಅಂತಿಮ ತೀರ್ಪಿನ ಮಹೂರ್ತ ನಿಗದಿ ಆದ ಮೇಲೆ ಪ್ರತಿಕ್ರಿಯೆ ನೀಡಿರುವ ಆರೆಸ್ಸೆಸ್ ಮುಖಂಡ ಮೋಹನ್ ಭಾಗ್ವತ್, 'ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡುವ ದಿನಗಳು ಹತ್ತಿರವಾಗುತ್ತಿವೆ' ಎಂದಿದ್ದಾರೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X