ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳ್ಳಾರಿ ಪಾಲಿಕೆಯಲ್ಲಿ ಮತ್ತೆ ಅರಳಿದ ಕಮಲ

By Mahesh
|
Google Oneindia Kannada News

Bellary city corporation result
ಬಳ್ಳಾರಿ, ಸೆ.28: ಬಳ್ಳಾರಿ ಮಹಾನಗರ ಪಾಲಿಕೆಯ 1 ಮತ್ತು 19ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಭರ್ಜರಿ ಗೆಲುವನ್ನು ಸಾಧಿಸಿದೆ. ಸಿರುಗುಪ್ಪ ಪುರಸಭೆಯ ಉಪ ಚುನಾವಣೆಯ 2 ವಾರ್ಡ್‌ಗಳಲ್ಲಿ ಒಂದು ಬಿಜೆಪಿ, ಮತ್ತೊಂದು ಕಾಂಗ್ರೆಸ್ ಗೆಲವು ಸಾಧಿಸಿವೆ.

ಬಳ್ಳಾರಿ ನಗರ ಶಾಸಕರಾಗಿ ಆಯ್ಕೆ ಆದ ಜಿ. ಸೋಮಶೇಖರರೆಡ್ಡಿ ಅವರು ರಾಜೀನಾಮೆ ನೀಡಿದ್ದ 1ನೇ ವಾರ್ಡ್‌ನಲ್ಲಿ ಬಿಜೆಪಿಯ ಅಭ್ಯರ್ಥಿ ಪಾರ್ವತಿ ಎಸ್. ಇಂದುಶೇಖರ್ 8483 ಮತಗಳನ್ನು, ಪದ್ಮಾವತಿ ಜಿ. ಯಾದವ್ ಅವರ ಕೊಲೆಯಿಂದ ತೆರವಾಗಿದ್ದ ೧೯ನೇ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಎನ್. ಪಾರ್ವತಿ 7605 ಮತಗಳನ್ನು ಪಡೆದು ಅದ್ಭುತವಾದ ಗೆಲುವನ್ನು ತಮ್ಮದಾಗಿಸಿಕೊಂಡಿದ್ದಾರೆ.

1ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ಜೆ.ವಿ. ಮಂಜುನಾಥ್ 686, ಜೆಡಿಎಸ್‌ನ ಎಂ.ಎಸ್. ಶಿವಾರೆಡ್ಡಿ 473 ಪಡೆದಿದ್ದು, ಬಿಜೆಪಿ ಅಭ್ಯರ್ಥಿ ಪಾರ್ವತಿ ಎಸ್. ಇಂದುಶೇಖರ್ ಅವರು 7797 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ವಾರ್ಡ್‌ನಲ್ಲಿ 9807 ಮತಗಳು ಚಲಾವಣೆ ಆಗಿದ್ದು, 165ಮತಗಳು ತಿರಸ್ಕೃತಗೊಂಡಿವೆ.

19ನೇ ವಾರ್ಡ್‌ನಲ್ಲಿ ಜೆಡಿಎಸ್‌ನ ವೆಂಕಟಮ್ಮ 799 ಮತಗಳನ್ನು, ಬಿಜೆಪಿಯ ಎನ್. ಪಾರ್ವತಿ 7605 ಮತಗಳನ್ನು ಪಡೆದು 6806 ಮತಗಳ ಅಂತರದಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಈ ವಾರ್ಡ್‌ನಲ್ಲಿ 8513 ಮತಗಳು ಚಲಾವಣೆ ಆಗಿದ್ದು 109 ಮತಗಳು ತಿರಸ್ಕೃತಗೊಂಡಿವೆ.

ಸಿರುಗುಪ್ಪ: ಸಿರುಗುಪ್ಪ ಪುರಸಭೆಯ 2ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಈರಣ್ಣ 414ಮತಗಳನ್ನು ಪಡೆದು ಕೇವಲ 2 ಮತಗಳಿಂದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ. ಕಾಂಗ್ರೆಸ್‌ನ ವೆಂಕಟೇಶನಾಯಕ ಅವರು 412 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಈ ವಾರ್ಡ್‌ನಲ್ಲಿ ೮೪೦ ಮತಗಳು ಚಲಾವಣೆ ಆಗಿದ್ದು, 14ಮತಗಳು ತಿರಸ್ಕೃತಗೊಂಡಿವೆ.

23ನೇ ವಾರ್ಡ್‌ಗೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ.ಎಂ. ಮಂಗಳ ಅವರು 690ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ಬಿ.ಎಂ. ತ್ರಿವೇಣಿ ಅವರು 342 ಮತಗಳನ್ನು ಪಡೆದು ಸೋಲನುಭವಿಸಿದ್ದಾರೆ. ಕಾಂಗ್ರೆಸ್‌ನ ಬಿ.ಎಂ. ಮಂಗಳ 348 ಮತಗಳ ಅಂತರದಿಂದ ವಿಜೇತರಾಗಿದ್ದಾರೆ. ಈ ವಾರ್ಡ್‌ನಲ್ಲಿ 950 ಮತಗಳು ಚಲಾವಣೆ ಆಗಿದ್ದು 18 ಮತಗಳು ತಿರಸ್ಕೃತಗೊಂಡಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X