ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಸುವಲ್ಲಿ ಗಾಂಧಿ, ಗಾಂಧಿಯಲ್ಲಿ ಏಸು ಕಂಡ ಮೂರ್ತಿ

By Mrutyunjaya Kalmat
|
Google Oneindia Kannada News

UR Ananthmurthy
ಬೆಂಗಳೂರು, ಸೆ. 27 : ಯೇಸು ಕ್ರಿಸ್ತ ಒಬ್ಬ ಮಾನವತಾವಾದಿ ಆಗಿರುವುದರಿಂದ, ಆತ ಮತ್ತೆ ಮತ್ತೆ ಅವತರಿಸಬಹುದಾದ ಮಹಾನ್ ಪುರುಷ ಎಂದು ಡಾ ಯು.ಆರ್. ಅನಂತಮೂರ್ತಿ ಅಭಿಪ್ರಾಯಪಟ್ಟರು.

ಸಾಗರದ ರವೀಂದ್ರ ಪುಸ್ತಕಾಲಯ ಹೊರ ತಂದ ವಿಲಿಯಂ ಸಂಪಾದಿತ 'ಕ್ರಿಸ್ತ ಕಾವ್ಯ" ಪುಸ್ತಕವನ್ನು ನಗರದಲ್ಲಿ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ಯೇಸು ದರ್ಪ, ಕ್ರೌರ್ಯಕ್ಕೆ ಬೆಲೆ ಕೊಡದೆ ವಿನಯಕ್ಕೆ ಬೆಲೆ ಕೊಟ್ಟು ಇಡೀ ರೋಮ್ ಸಾಮ್ರಾಜ್ಯದಲ್ಲಿ ತನ್ನ ಛಾಪು ಮೂಡಿಸಿದ. ಅವನು ಬಹು ದೊಡ್ಡ ಮಾನವ ಪ್ರೇಮಿ. ನಾವು ಗಾಂಧಿಯಲ್ಲಿ ಯೇಸುವನ್ನು ಮತ್ತು ಯೇಸುವಿನಲ್ಲಿ ಗಾಂಧಿಯ ವ್ಯಕ್ತಿತ್ವ ಕಾಣಬಹುದು.

ಗಾಂಧಿ ಒಬ್ಬ ಸಾಮಾನ್ಯನಾಗಿದ್ದೂ, ಬ್ರಿಟಿಷ್ ಸಾಮ್ರಾಜ್ಯವನ್ನು ದೇಶದಿಂದ ತೊಲಗಿಸಿದವರು. ರೋಮ್ ಸಾಮ್ರಾಜ್ಯ ವೈಭವದಿಂದ ಮೆರೆಯುತ್ತಿದ್ದ ವೇಳೆ ಅಲೆಮಾರಿಯಾಗಿ ನಾಗರಿಕತೆಯನ್ನು ಪ್ರತಿಪಾದಿಸಿದವನು ಯೇಸು ಕ್ರಿಸ್ತ ಎಂದು ಹೇಳಿದರು. ಮಹಾಭಾರತ, ಬೈಬಲ್‌ನಂಥ ಗ್ರಂಥಗಳನ್ನು ಕಾವ್ಯವಾಗಿ ಓದಿದಾಗ ಅದು ಹೆಚ್ಚು ಹಿತವೆನಿಸುತ್ತವೆ. ಯೇಸುವಿನಂಥ ಮಹಾಪುರುಷರ ತತ್ತ್ವಗಳು ಜೀವಂತವಾಗಿರುವುದು ಇಂಥ ಕಾವ್ಯ ಗ್ರಂಥಗಳಿಂದ.

ವಿಲಿಯಂ ಈ ಪುಸ್ತಕದ ಮೂಲಕ ಕನ್ನಡಕ್ಕೆ ಒಂದು ವಿಭಿನ್ನ, ಉಪಯುಕ್ತ ಕೃತಿಯನ್ನು ಕೊಟ್ಟಿದ್ದಾರೆ. ಕ್ರಿಸ್ತನ ಬಗ್ಗೆ ಕನ್ನಡದಲ್ಲಿ ಇಲ್ಲಿಯವರೆಗೆ ಬಂದಿರುವ ಎಲ್ಲ ಬರಹಗಳನ್ನು ಕಲೆ ಹಾಕಿದ್ದಾರೆ ಎಂದರು. ಸಾಹಿತಿ ನಾ. ಡಿಸೋಜ ಮಾತನಾಡಿ, ಕ್ರಿಸ್ತನ ಸ್ವಭಾವ, ಗುಣಗಳಿಗೆ ಈ ಗ್ರಂಥ ಕನ್ನಡಿ ಹಿಡಿದಂತೆ ಮೂಡಿಬಂದಿದೆ. ಆ ಮೂಲಕ ವಿಲಿಯಂ ಕನ್ನಡಿಗರಿಗೆ ಕ್ರಿಸ್ತನ ಮಹಿಮೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ ಎಂದರು. ಯೇಸು ಕ್ರಿಸ್ತ ಒಬ್ಬ ಮಾನವತಾವಾದಿ ಎಂದು ಅನಂತಮೂರ್ತಿ ಹೇಳಿದರು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X