ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿವಾದಿತ ಅಯೋಧ್ಯೆ ಭೂಮಿ ಯಾರಿಗೆ ಸೇರಿದ್ದು?

By Prasad
|
Google Oneindia Kannada News

Ayodhya title dispute : Main issues
ನವದೆಹಲಿ, ಸೆ. 27 : ಅಯೋದ್ಯೆಯ ವಿವಾದಿತ ಭೂಮಿ ಯಾರಿಗೆ ಸೇರಬೇಕು? ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡಿಗೋ ಅಥವಾ ಅಖಿಲ ಭಾರತ ಹಿಂದೂ ಸಭಾಕ್ಕೋ? ಈ ಕ್ಲಿಷ್ಟಕರ ಪ್ರಶ್ನೆ ಈಗ ಅಲಹಾಬಾದ್ ಉಚ್ಚ ನ್ಯಾಯಾಲಯದ ಮುಂದಿದೆ. ನ್ಯಾಯಮೂರ್ತಿ ಎಸ್ ಯು ಖಾನ್, ನ್ಯಾ. ಸುಧೀರ್ ಅಗರವಾಲ್ ಮತ್ತು ನ್ಯಾ. ಧರಮ್ ವೀರ್ ಶರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಕುರಿತು ತೀರ್ಪು ನೀಡಲಿದೆ. ಈ ಒಡೆತನ ಹಕ್ಕಿನ ಪ್ರಕರಣ ಐದು ವ್ಯಾಜ್ಯಗಳನ್ನು ಹೊಂದಿದ್ದು, ಒಟ್ಟು 20 ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಆ ಅಂಶಗಳು ಹೀಗಿವೆ :

1. ಮುಸ್ಲಿಂ ಸಂಘಟನೆಗಳು ಹೇಳಿದಂತೆ ಧ್ವಂಸವಾದ ಕಟ್ಟಡ ಮಸೀದಿಯೆ?

2. ಮಸೀದಿಯೇ ಆಗಿದ್ದರೆ ಕಟ್ಟಿಸಿದ್ದು ಯಾರು ಮತ್ತು ಯಾವಾಗ? ಮುಘಲ್ ರಾಜ ಬಾಬರ್? ಅಥವಾ ಅವಧ್ ರಾಜ್ಯಪಾಲನಾಗಿದ್ದ ಮಿರ್ ಬಕಿ ತಷ್ಕಂಡಿ?

3. ಮಸೀದಿಯನ್ನು ನಿರ್ನಾಮ ಮಾಡಿದ ಹಿಂದೂ ದೇವಸ್ಥಾನದ ಮೇಲೆ ಕಟ್ಟಲಾಯಿತೆ?

4. ಬಾಬ್ರಿ ಮಸೀದಿಯಲ್ಲಿ ಮೊದಲಿನಿಂದಲೂ ಮುಸ್ಲಿಂರು ಪ್ರಾರ್ಥನೆ ಮಾಡುತ್ತಿದ್ದರೆ?

5. ಮಸೀದಿಯನ್ನು ಕಟ್ಟಲಾದ ವರ್ಷ 1528ರಿಂದ ಸತತವಾಗಿ ಮುಸ್ಲಿಂರು ಅದರ ಒಡೆತನದಲ್ಲಿದ್ದರೆ?

6. 1949ರಲ್ಲಿ ಮುಸ್ಲಿಂರ ಒಡೆತನ ಹಿಂತೆಗೆದುಕೊಳ್ಳುವವರಗೆ ಅವರೇ ಮಾಲಿಕರಾಗಿದ್ದರೆ?

7. ವ್ಯಾಜ್ಯ ತೀರಾ ತಡವಾಗಿ ಹೂಡಲಾಗಿದೆಯೆ?

8. ಹಿಂದೂಗಳು ವಿವಾದಿತ ಸ್ಥಳದಲ್ಲಿ ಪ್ರಾರ್ಥಿಸುವ ಹಕ್ಕನ್ನು ಬಲವಂತವಾಗಿ ಪಡೆದಿದ್ದಾರೆಯೆ?

9. ವಿವಾದಿತ ಸ್ಥಳ ರಾಮ ಹುಟ್ಟಿದ ಸ್ಥಳವೆ?

10. ಅನಾದಿ ಕಾಲದಿಂದಲೂ ಹಿಂದೂಗಳು ಈ ಜಾಗದಲ್ಲಿ ರಾಮ ಹುಟ್ಟಿದ ಸ್ಥಳವೆಂದೇ ಪೂಜೆ ಸಲ್ಲಿಸುತ್ತಿದ್ದಾರೆಯೆ?

11. ಅಲ್ಲಿಡಲಾಗಿದ್ದ ಮೂರ್ತಿಯನ್ನು 1949ರ ಡಿಸೆಂಬರ್ 22-23ರ ರಾತ್ರಿಯಂದು ಇಡಲಾಗಿತ್ತೆ ಅಥವಾ ಅವು ಮೊದಲಿನಿಂದಲೂ ಅಲ್ಲೇ ಇದ್ದವೆ?

12. ವಿವಾದಿತ ಸ್ಥಳದ ಪಕ್ಕದಲ್ಲಿದ್ದ ರಾಮ ಚಾಬುತ, ಭಂಡಾರ ಮತ್ತು ಸೀತಾ ರಸೋಯಿಯನ್ನು ಮುಖ್ಯ ಕಟ್ಟಡದ ಜೊತೆಯೇ ಧ್ವಂಸ ಮಾಡಲಾಯಿತೆ?

13. ಆ ಕಟ್ಟಡದ ಪೂರ್ವ, ಉತ್ತರ ಮತ್ತು ದಕ್ಷಿಣ ಭಾಗದಲ್ಲಿ ಖಬರಸ್ತಾನ್ (ರುದ್ರಭೂಮಿ) ಮತ್ತು ಮಸೀದಿ ಇತ್ತೆ?

14. ಮಸೀದಿಗೆ ಅದರ ಸುತ್ತಲಿದ್ದ ಹಿಂದೂ ದೇವಸ್ಥಾನದ ಮುಖಾಂತರ ಹೋಗದೆ ಬೇರೆ ದಾರಿಯೇ ಇರಲಿಲ್ಲವೆ?

15. ವಿವಾದಿತ ಸ್ಥಳದಲ್ಲಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿತ್ತೆನ್ನಲಾದ್ದರಿಂದ ಇಸ್ಲಾಮ್ ಧರ್ಮದ ನಂಬಿಕೆಯ ಪ್ರಕಾರ ಅಲ್ಲಿ ಮಸೀದಿ ಬರಲು ಸಾಧ್ಯವೇ ಇಲ್ಲವೆ?

16. ಅಲ್ಲಿ ಮಿನಾರುಗಳು ಇಲ್ಲದ್ದರಿಂದ ಅಲ್ಲಿದ್ದ ಕಟ್ಟಡವನ್ನು ಮಸೀದಿ ಎಂದು ಕರೆಯಲು ಸಾಧ್ಯವಿಲ್ಲವೆ?

17. ಕಟ್ಟಡದ ಮೂರು ಕಡೆಯೂ ಸ್ಮಶಾನವಿದ್ದರಿಂದ ಆ ಕಟ್ಟಡವನ್ನು ಮಸೀದಿಯನ್ನು ಕರೆಯಬೇಕೆ, ಬೇಡವೆ?

18. ಧ್ವಂಸ ಆದಮೇಲೂ ಆ ಕಟ್ಟಡವನ್ನು ಮಸೀದಿಯೆಂದು ಕರೆಯಬೇಕೆ?

19. ಕಟ್ಟಡ ಧ್ವಂಸವಾದ ನಂತರ ಖಾಲಿಯಿದ್ದ ಮೈದಾನವನ್ನು ಮುಸ್ಲಿಂರು ಪ್ರಾರ್ಥನೆಗಾಗಿ ಬಳಸಬಹುದೆ?

20. ವ್ಯಾಜ್ಯ ಹೂಡಿದ ಮುಸ್ಲಿಂ ಸಂಘಟನೆ ಪರಿಹಾರಕ್ಕೆ ಅರ್ಹವೆ?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X