ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೇವಿಡ್ ಬೆಕಮ್ ಗೂ ಉಂಟು ವೇಶ್ಯೆ ಸಹವಾಸ?

By Mahesh
|
Google Oneindia Kannada News

After Rooney, Beckham lands in sex scandal
ಲಂಡನ್, ಸೆ.27 : ಕಾಮಕಾಂಡ ಪ್ರಕರಣಗಳಲ್ಲಿ ಸಿಲುಕಿರುವ ವಿಶ್ವದ ಅಗ್ರಗಣ್ಯ ಕ್ರೀಡಾಪಟುಗಳ ಪೈಕಿ ಟೈಗರ್ ವುಡ್ಸ್, ವೆಯ್ನ್ ರೂನಿ ನಂತರ ಸ್ಟಾರ್ ಫುಟ್ಬಾಲ್ ಆಟಗಾರ ಡೇವಿಡ್ ಬೆಕ್ ಹ್ಯಾಮ್ ಹೆಸರು ಸೇರ್ಪಡೆಯಾಗಿದೆ.

ಇನ್ ಟಚ್ ಮ್ಯಾಗಜೀನ್ ಪ್ರಕಟಣೆಯಂತೆ, ಇರ್ಮಾ ನಿಸಿ ಎಂಬ ವೇಶ್ಯೆಯೊಂದಿಗೆ ಡೇವಿಡ್ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ. ಆತನ ಜತೆ ಮಾತನಾಡಿದ್ದಕ್ಕೆ ದೂರವಾಣಿ ದಾಖಲೆಗಳಿವೆ. ಡೈರಿ ಪುಸ್ತಕವೊಂದರಲ್ಲಿ ನಮ್ಮ ಸಂಬಂಧದ ಬಗ್ಗೆ ವಿವರಗಳನ್ನು ಬರೆದಿಟ್ಟಿದ್ದೇನೆ ಎಂದು ಇರ್ಮಾ ಹೇಳಿದ್ದಾಳೆ.

ಜರ್ಮನ್ ನ ಹಿರಿಯ ಪ್ರಕಾಶಕ ಹೈಂಜ್ ಬೂಯರ್ ಒಡೆತನದ ಈ ಅಮೆರಿಕನ್ ಮ್ಯಾಗಜೀನ್ ನಲ್ಲಿ ಬಂದಿರುವ ವರದಿಗಳನ್ನು ನೋಡಿ ಬೆಕಮ್ ಕೆಂಡಮಂಡಲವಾಗಿದ್ದಾನೆ.

ಆಧಾರ ರಹಿತ ಲೇಖನವನ್ನು ಪ್ರಕಟಿಸುವ ಮುನ್ನ ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು. ಅಥವಾ ಈ ಬಗ್ಗೆ ನನ್ನನ್ನು ಪ್ರಶ್ನಿಸಬಹುದಿತ್ತು. ಇದು ಸತ್ಯಕ್ಕೆ ದೂರವಾದ ಲೇಖನ ಎಂದು ಇನ್ ಟಚ್ ಪತ್ರಿಕೆಗೆ ಗೊತ್ತಿದ್ದರೂ, ಪ್ರಕಟಗೊಂಡಿದ್ದು ಯಾಕೆ ಎಂದು ವಿವರಗಳನ್ನು ಕೇಳಿ 70ವರ್ಷದ ಬೂಯರ್ ಅವರಿಗೆ ಡೇವಿಡ್ ಪತ್ರ ಬರೆದು ಉತ್ತರಕ್ಕೆ ನಿರೀಕ್ಷಿಸುತ್ತಿದ್ದಾರೆ ಎಂದು ಡೈಲಿಮೇಲ್ ವರದಿ ಮಾಡಿದೆ.

35 ವರ್ಷದ ಫುಟ್ಬಾಲ್ ಪಟು ಡೇವಿಡ್ ಬೆಕಮ್ ನ ಕಾನೂನು ತಜ್ಞರು ಕೂಡಾ ಮಿಸ್ ನಿಸಿ ಯಾವುದೇ ಪುರಾವೆ ಒದಗಿಸುವಲ್ಲಿ ವಿಫಲರಾದರೂ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿರುವುದು ಅಕ್ಷಮ್ಯ ಎಂದಿದ್ದಾರೆ. ಮಾಜಿ ಸ್ಪೈಸ್ ಗರ್ಲ್ ತಂಡ ಸದಸ್ಯೆ ವಿಕ್ಟೋರಿಯಾರನ್ನು ಮದುವೆಯಾಗಿ ಬೆಕಮ್ ಸಂಸಾರ ನಡೆಸಿದ್ದರು. ಸುಮ್ಮನೆ ಆವರ ಖಾಸಗಿ ವಿಷಯ ಕೆದಕುವುದು ಮಾಧ್ಯಮಗಳಿಗೆ ಒಂದು ಆಟ ಎಂದು ಬೆಕಮ್ ಅಭಿಮಾನಿಗಳು ಪ್ರತಿಕ್ರಿಯಿಸಿದ್ದಾರೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X