ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಟ್ಟಾ ಅವರ ರಾಜೀನಾಮೆಗೆ ಎಚ್ಡಿಕೆ ಆಗ್ರಹ

By Mahesh
|
Google Oneindia Kannada News

HD Kumaraswamy
ಬೆಂಗಳೂರು, ಸೆ.25: ಕೆಐಎಡಿಬಿ ಭೂ ಸ್ವಾಧೀನ ಹಾಗೂ ಪರಿಹಾರ ಧನ ನೀಡಿಕೆ ಸಂಬಂಧ ನಡೆದಿರುವ ಕೋಟ್ಯಂತರ ರೂ. ಹಗರಣದಲ್ಲಿ ನೇರ ಭಾಗಿಯಾಗಿರುವ ವಸತಿ ಮತ್ತು ಐಟಿ ಬಿಟಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರನ್ನು ಕೂಡಲೇ ಸಂಪುಟದಿಂದ ವಜಾ ಗೊಳಿಸಬೇಕು ಹಾಗೂ ಪಾಲಿಕೆ ಸದಸ್ಯ ಹಾಗೂ ಅವರ ಪುತ್ರ ಜಗದೀಶ್ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಶನಿವಾರ ರಾಜಭವನದಲ್ಲಿ ರಾಜ್ಯ ಪಾಲ ಹಂಸರಾಜ್ ಭಾರದ್ವಾಜ್‌ರನ್ನು ಭೇಟಿಯಾದ ಅವರು, ಭೂ ಸ್ವಾಧೀನ ಅಕ್ರಮಗಳ ಕುರಿತಂತೆ ತಾವು ಸಂಗ್ರಹಿಸಿದ್ದ ದಾಖಲೆಗಳನ್ನು ಸಲ್ಲಿಸಿ, ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ವಜಾಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸೂಚನೆ ನೀಡಬೇಕೆಂದು ಕುಮಾರಸ್ವಾಮಿ ಮನವಿ ಮಾಡಿದರು.

ಕೆಐಎಡಿಬಿ ನಕಲಿ ದಾಖಲೆಗಳ ಆಗರ :
ದೇವನಹಳ್ಳಿಯ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತ ಮುತ್ತದ ಭೂ ಸ್ವಾಧೀನಕ್ಕೆ ಸರಕಾರ ದಿಂದ ಪರಿಹಾರ ನೀಡಲಾಗುತ್ತಿದೆ. ಈ ಪರಿಹಾರವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೇನಾಮಿ ಹೆಸರಿನಲ್ಲಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪಡೆದಿದ್ದಾರೆ. ಜೊತೆಗೆ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದಕ್ಕೆ ಸಚಿವರ ಪುತ್ರ ಕಟ್ಟಾ ಜಗದೀಶ್ ಭಾರೀ ಪ್ರಮಾಣದಲ್ಲಿ ಭೂಮಿಯನ್ನು ಸ್ವಾಧೀನ ಪಡಿಸಿ ಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸಣ್ಣ ಮೊತ್ತದ ಲಂಚ ಪಡೆವ ಸಣ್ಣ ಮೀನುಗಳಿಗೆ ಬಲೆ ಬೀಸುವುದನ್ನು ಸಿಎಂ ನಿಲ್ಲಿಸಲಿ, ದೊಡ್ಡ ದೊಡ್ಡ ತಿಮಿಂಗಲಗಳನ್ನು ಹಿಡಿದು ಹೊರಗೆ ಎಸೆಯಲಿ. ಕೋಟ್ಯಾಂತರ ರು ಗಳ ಹಗರಣವನ್ನು ಲೋಕಾಯುಕ್ತರು ಬಹಿರಂಗಗೊಳಿಸಿದ್ದರು. ಆರೋಪಿತ ಸಚಿವರ ಮೇಲೆ ಕ್ರಮ ಜರುಗಿಸಲು ಸಿಎಂ ಮೀನಾ ಮೇಷ ಎಣಿಸುತ್ತಿದ್ದಾರೆ ಎಂದು ಎಚ್ಡಿಕೆ ಕಿಡಿಕಾರಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X