ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈಗ ತುಳು ಭಾಷೆಯಲ್ಲಿ ಪಿಎಚ್‌ಡಿ ಪ್ರಬಂಧ ಬರೆಯಿರಿ

By Rajendra
|
Google Oneindia Kannada News

Yakshagana artist
ಮಂಗಳೂರು, ಸೆ.25: ಸಂಶೋಧನಾ ಪ್ರಬಂಧವನ್ನು(ಪಿಎಚ್‌ಡಿ )ಈಗ ತುಳು ಭಾಷೆಯಲ್ಲಿ ಬರೆಯಬಹುದು! ಈ ಒಂದು ಸೌಲಭ್ಯವನ್ನು ಆಂಧ್ರಪ್ರದೇಶ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದ ಕಲ್ಪಿಸಿದೆ. ಪ್ರಸಕ್ತ ಸಾಲಿನಲ್ಲಿ ತುಳು ಭಾಷೆಯಲ್ಲಿ ಪ್ರಬಂಧವನ್ನು ಮಂಡಿಸಬಹುದು ಎಂದು ವಿಶ್ವವಿದ್ಯಾಲಯದ ತುಳು ಮತ್ತು ಭಾಷಾಂತರ ಅಧ್ಯಯನ ವಿಭಾಗ ತಿಳಿಸಿದೆ.

ಕರ್ನಾಟಕ ತುಳು ಅಕಾಡೆಮಿಮಾರ್ಗನಿರ್ದೇಶನದಂತೆ ಕನ್ನಡ ಲಿಪಿಯನ್ನು ಬಳಸಿಕೊಂಡು ತುಳು ಭಾಷೆಯಲ್ಲಿ ಪ್ರಬಂಧ ಮಂಡಿಸಬಹುದಾಗಿದೆ. ಈ ವರ್ಷ ಎಂಟು ಮಂದಿ ಸಂಶೋಧನಾ ವಿದ್ಯಾರ್ಥಿಗಳು ದಾಖಲಾಗಿರುವುದಾಗಿ ವಿವಿ ಹೇಳಿದೆ.

ದ್ರಾವಿಡ ವಿಶ್ವವಿದ್ಯಾಲಯದ ನಿಯಮಗಳ ಪ್ರಕಾರ ತುಳು ಭಾಷೆಯಲ್ಲಿ ಸಂಶೋಧನಾ ಪ್ರಬಂಧ ಮಂಡಿಸಬೇಕಾದರೆ, ಮೊದಲು ವಿವಿ ನಿರ್ವಹಿಸುವ ತುಳು ಡಿಪ್ಲೊಮಾ ಪರೀಕ್ಷೆಯನ್ನು ಪಾಸು ಮಾಡಬೇಕು. ಬಳಿಕ ಮತ್ತೊಂದು ಪ್ರವೇಶ ಪರೀಕ್ಷೆಯ ಮೂಲಕ ಪಿಎಚ್‌ಡಿಗೆ ಅರ್ಹತೆ ಪಡೆಯುತ್ತಾರೆ ಎಂದು ವಿಶ್ವವಿದ್ಯಾಲಯ ಪ್ರಕಟಣೆ ತಿಳಿಸಿದೆ.

ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಇಲ್ಲದ ಸೌಲಭ್ಯ ತುಳು ಭಾಷೆಗೆ ಪ್ರಾಪ್ತವಾಗಿದೆ. ಫ್ರೆಂಚ್ ಭಾಷೆಯಂತೆ ಸಹಾಯಕ ಕ್ರಿಯಾಪದವಿಲ್ಲದೆ ಮಾತನಾಡ ಬಹುದಾದಒಂದು ವಿಶಿಷ್ಟ ಭಾಷೆ ತುಳು. ದ್ರಾವಿಡ ಭಾಷಾ ಕುಟುಂಬದಲ್ಲಿ ತುಳು ಅತ್ಯಂತ ಅಭಿವೃದ್ಧಿ ಹೊಂದಿದ ಭಾಷೆ ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಸೇರಿದಂತೆ ಜಗತ್ತಿನಾದ್ಯಂತೆ 3 ದಶಲಕ್ಷ ಅಧಿಕ ಜನರ ನಾಲಿಗೆ ಮೇಲೆ ತುಳು ಭಾಷೆ ನಲಿದಾಡುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X