• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತರಕಾರಿ ಬೆಲೆ ಏರಿಕೆಗೆ ತರಾವರಿ ಕಾರಣಗಳು

By Mahesh
|
Indian Food inflation raised to 15.46 percent
ನವದೆಹಲಿ/ಬೆಂಗಳೂರು, ಸೆ.23 : ದಪ್ಪ ಮೆಣಸಿನಕಾಯಿ ಕಿ.ಗ್ರಾಂ.ಗೆ ಬೆಲೆ 30 ರು, ಡಬಲ್ ಬೀನ್ಸ್ ಬೆಲೆ 55 ರು, ನುಗ್ಗೆಕಾಯಿ ಬೆಲೆ ಯಾಕೆ 32 ರು ಆಯ್ತು? ಹಾಳಾದ ಸರ್ಕಾರ ಯಾವಾಗಾಲೂ ರೇಟ್ ಜಾಸ್ತಿ ಮಾಡ್ತಾನೆ ಇರ್ತಾರೆ ಎಂದು ತರಕಾರಿ, ಹಣ್ಣುಗಳ ಮಾರುಕಟ್ಟೆಯಲ್ಲಿ ನಮ್ಮ ಅಮ್ಮಂದಿರು ಗೊಣಗಾಡುವುದು ಇತ್ತೀಚೆಗೆ ಮಾಮೂಲಿಯಾಗಿದೆ. ಆದರೆ , ಇದಕ್ಕೆ ಕಾರಣ ಏನಿರಬಹುದು ಯಾರು ಆಳವಾಗಿ ಯೋಚಿಸುವುದಿಲ್ಲ. ಊರು ಉಸಾಬರಿ ನಮಗೇಕೆ ಎಂದು ಉದಾಸೀನರಾಗಿರುವ ಮಂದಿಯೇ ಹೆಚ್ಚು.

ಅಯೋಧ್ಯಾ ಬಾಬ್ರಿ ಮಸೀದಿ ವಿವಾದದ ಪರಿಣಾಮ ಜನ ಸಾಮಾನ್ಯರ ಮೇಲಂತೂ ನೇರವಾಗಿ ಆಗುತ್ತದೆ ಅದನ್ನು ತಪ್ಪಿಸಲು ಸಾಧ್ಯವಿಲ್ಲ. ತೀರ್ಪು ವಿಳಂಬವಾಗಲಿ, ಮುಂದೂಡಲಿ ಜನ ಸಾಮಾನ್ಯರ ರಥ ಮಾತ್ರ ಸಾಗಲೇಬೇಕು. ಕಳೆದ ವಾರ ಆಹಾರದುಬ್ಬರ ಸುಮಾರು ಶೇ.15.16ಕ್ಕೆ ಏರಿಕೆ ಕಂಡ ಪರಿಣಾಮ ಆಹಾರ ಧಾನ್ಯ, ಹಾಲು, ಹಣ್ಣು, ತರಕಾರಿಗಳ ಬೆಲೆ ಪೈಪೋಟಿಯ ಮೇಲೆ ಏರಿಕೆ ಕಂಡವು.

ದೆಹಲಿ, ಹರ್ಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಅಸ್ಸಾಂ, ರಾಜಸ್ತಾನ ಹಾಗೂ ಉತ್ತರ ಪ್ರದೇಶ ಸೇರಿದಂತೆ ಹಲವೆಡೆ ಸುರಿಯುತ್ತಿರುವ ಮಳೆಯ ಕಾರಣದಿಂದ ಆಹಾರ ಸರಂಜಾಮುಗಳನ್ನು ಹೊತ್ತು ತರುವ ಟ್ರಕ್ ಗಳು ನಿಂತಲ್ಲೇ ನಿಂತಿದ್ದವು. ಪರಿಣಾಮ ಬೆಂಗಳೂರು ಸೇರಿದಂತೆ ದಕ್ಷಿಣ ಭಾಗದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಮತ್ತದೇ ಗೊಣಗಾಟ, ಮಾರಾಟಗಾರ ಪೇಚಾಟ.

ಧಾನ್ಯಗಳು ಶೇ.6.75, ಬೆಳೆ ಕಾಳುಗಳು ಶೇ. 4.01, ಗೋಧಿ ಶೇ 9.21, ಅಕ್ಕಿ ಶೇ 5.52ರಷ್ಟು ಏರಿಕೆ ಕಂಡಿವೆ. ಇದರ ಜೊತೆಗೆ ಕಳೆದ ವರ್ಷಕ್ಕೆ ಇದೇ ಅವಧಿಗೆ ಹೋಲಿಸಿದರೆ ಹಾಲಿನ ದರ ಶೇ. 23.41 ಏರಿದ್ದು, ಹಣ್ಣುಗಳು ಶೇ. 10.33ರಷ್ಟು ಏರಿಕೆ ಕಂಡಿವೆ. ಆದರೆ, ಅಲೂಗೆಡ್ಡೆ ಬೆಲೆ ಶೇ.48.56 ಮತ್ತು ಈರುಳ್ಳಿ ಶೇ. 1.97ರಷ್ಟು ಇಳಿಕೆಯಾಗಿರುವುದು ಸಮಾಧಾನದ ಸಂಗತಿ.

ಬೆಂಗಳೂರಿನಲ್ಲಿ ಕೆಜಿ ಈರುಳ್ಳಿ ಬೆಲೆ 15 ರು. ಹಾಗೂ ಆಲೂಗೆಡ್ಡೆ ಬೆಲೆ 20 ರು. ತಲುಪಿದೆ. ನಿಂಬೆಹಣ್ಣು ಒಂದಕ್ಕೆ ಬೆಲೆ 5 ರು. ದಾಟಿದ್ದು ಹುಳಿಯಿಲ್ಲದೆ ಅಡುಗೆ ಮಾಡುವಂತಾಗಿದೆ. ಟೊಮಾಟೋ 23ರಿಂದ 25ರ ಆಸುಪಾಸಿನಲ್ಲಿದೆ. ಕುಂಬಳಕಾಯಿ ಕೆಜಿಗೆ 6 ರು. ತಲುಪಿರುವುದರಿಂದ ವಾರದ ಎಲ್ಲಾ ದಿನಗಳಲ್ಲಿ ಕುಂಬಳಕಾಯಿ ಹುಳಿಗೆ ಜನ ಮೊರೆಹೋಗುವಂತಾಗಿದೆ. ಇಲ್ಲದಿದ್ದರೆ ದಂರೋಟೇ ಗತಿ!

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more