ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಂದು ಹಗರಣದಲ್ಲಿ ಪಾಕಿ ಕ್ರಿಕೆಟರ್ಸ್

By Mrutyunjaya Kalmat
|
Google Oneindia Kannada News

Pakistani Players
ಲಂಡನ್, ಸೆ. 19 : ಪಾಕ್ ಕ್ರಿಕೆಟ್ ಆಟಗಾರರ ಕಳ್ಳಾಟದ ಮತ್ತೊಂದು ಕರಾಳಮುಖ ಬಯಲಾಗಿದೆ. ಇದು ಅಂತಿಂತಹ ಕಳ್ಳಾಟವಲ್ಲ. ಇಡೀ ವಿಶ್ವವನ್ನು ಬೆರಗಾಗಿಸುವ ಸುದ್ದಿ. ಇಂಗ್ಲೆಂಡ್ ವಿರುದ್ಧ ಶುಕ್ರವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟಿಗರ ರನ್ ಗಳಿಸುವ ವಿಧಾನ ಮೊದಲೇ ಫಿಕ್ಸ್ ಆಗಿತ್ತು ಎಂಬ ಹೊಸ ಸುದ್ದಿ ಇದೀಗ ಸ್ಫೋಟಗೊಂಡಿದೆ.

ಈ ಆಘಾತಕಾರಿ ವಿಷಯ ಕೇಳಿ ಬರುತ್ತಿದ್ದಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು (ಐಸಿಸಿ) ವ್ಯಾಪಕ ತನಿಖೆಯನ್ನೂ ಆರಂಭಿಸಿದೆ. ಪಾಕಿಸ್ತಾನ ತಂಡದಲ್ಲಿನ ಆಟಗಾರನೊಬ್ಬ ಇದರ ಕೇಂದ್ರಬಿಂದುವಾಗಿದ್ದಾನೆ. ಭಾರತ ಮತ್ತು ದುಬೈಗಳಲ್ಲಿನ ಬುಕ್ಕಿಗಳಿಂದ ಹಣ ಪಡೆದಿರುವ ಈ ಆಟಗಾರ, ತಂಡ ಹೇಗೆ ರನ್ ಗಳಿಸಬೇಕು ಎಂಬುದರ ಉಸ್ತುವಾರಿ ವಹಿಸಿರುವಾತ. ಬುಕ್ಕಿಗಳ ಅಣತಿಯಂತೆ ಆಟ ನಡೆಸುವ ಸೂತ್ರಧಾರ. 'ದಿ ಸನ್" ಪತ್ರಿಕೆ ಈ ವಿವರಗಳನ್ನು ಬಯಲಾಗಿಸಿದೆ.

ತನಿಖೆ ಆರಂಭಗೊಂಡಿರುವ ಕಾರಣ 'ದಿ ಸನ್" ಈ ಕಳ್ಳಾಟಕ್ಕೆ ಸಂಬಂಧಿಸಿದ ವಿವರಗಳನ್ನು ಸದ್ಯಕ್ಕೆ ತಡೆ ಹಿಡಿದಿದೆ. ಆದರೆ ಐಸಿಸಿ ಈ ವಿಷಯದ ಬಗ್ಗೆ ಎಷ್ಟು ವೇಗವಾಗಿ ಸ್ಪಂದಿಸಿತು ಎಂದರೆ ಈ ಪಂದ್ಯದಲ್ಲಿ ಪಾಕಿಸ್ತಾನದ ಇನಿಂಗ್ಸ್ ಕೊನೆಗೊಳ್ಳುವ ಮುಂಚೆಯೇ ತನಿಖೆ ಆರಂಭಿಸಿಬಿಟ್ಟಿದೆ. ಸನ್ ಪತ್ರಿಕೆ ಪಂದ್ಯದ ಆರಂಭಕ್ಕೆ ಮುನ್ನವೇ '?ಫಿಕ್ಸಿಂಗ್' ವಿವರಗಳನ್ನು ಐಸಿಸಿಗೆ ರವಾನಿಸಿತ್ತು.

ಪಾಕ್ ತಂಡದಲ್ಲಿನ ವ್ಯಕ್ತಿ (ಆಟಗಾರ) ಯೊಬ್ಬನೇ ಇದೆಲ್ಲದರ ಉಸ್ತುವಾರಿ ವಹಿಸಿದ್ದಾನೆ. ಪಾಕ್ ತಂಡದ ಇನಿಂಗ್ಸ್ ಆರಂಭ ಗೊಳ್ಳುವ ಮುಂಚೆಯೇ ಅದು ರನ್ ಗಳಿಸುವ ವಿಧಾನದ ಬಗ್ಗೆ ಬುಕ್ಕಿಗೆ ತಿಳಿದಿರುತ್ತದೆ. ಲಂಡನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಮೂರನೇ ಏಕದಿನ ಕ್ರಿಕೆಟ್ ಪಂದ್ಯ ಸಂಪೂರ್ಣವಾಗೇನೂ (ಫಲಿತಾಂಶ ಇತ್ಯಾದಿ) ಫಿಕ್ಸ್ ಆಗಿರಲಿಲ್ಲ.

ಬದಲಾಗಿ ಪಾಕಿಸ್ತಾನ ಗಳಿಸುವ ರನ್ ವಿಧಾನವಷ್ಟೇ ಫಿಕ್ಸ್ ಆಗಿತ್ತು. ಈ ಬಗ್ಗೆ ಬ್ರಿಟಿಷ್ ಮಾಧ್ಯಮದಿಂದ ಪಡೆದಿರುವ ದಾಖಲೆಗಳ ಆಧಾರದ ಮೇಲೆ ಐಸಿಸಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಪಾಕ್ ತಂಡದ ಪ್ರತಿಯೊಬ್ಬ ಸದಸ್ಯನ ಮೇಲೂ ಹದ್ದಿನ ಕಣ್ಣು ಇಟ್ಟಿದೆ. ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೂನ್ ಲಾರ್ಗತ್, ಬ್ರಿಟಿಷ್ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X