ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಣಿಪುರದ ಮೇರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್
48 ಕೆಜಿ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಮೇರಿ ಕೋಮ್ ತಮ್ಮ ಫಿಲಿಪೈನ್ಸ್ ಎದುರಾಳಿ ಅಲೈಸ್ ಕಾಟೆರನ್ನು 8-1 ಅಂಕಗಳ ಅಂತರದಿಂದ ಸೋಲಿಸಿ ಫೈನಲ್ ಪ್ರವೇಶಿಸಿದ್ದರು.ಫೈನಲ್ನಲ್ಲಿ ರೋಮಾನಿಯಾದ ಸ್ಟೆಲುಟಾ ಡುಟಾರನ್ನು 16-6 ಅಂಕಗಳಿಂದ ಸೋಲಿಸಿ ಜಯಭೇರಿ ಬಾರಿಸಿದರು.
ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು
ಖೇಲ್ ರತ್ನ ಪುರಸ್ಕೃತೆ ಕೋಮ್, ಇದೇ ವೇಳೆ ಮತ್ತೋರ್ವ ಭಾರತೀಯ ಬಾಕ್ಸರ್ ಕವಿತಾ (+81ಕೆಜಿ)ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ, ಉಕ್ರೇನ್ನ ಎದುರಾಳಿ ಕಟೆರಿನಾ ಕುಝೆಲ್ ವಿರುದ್ಧ ಸೋಲನುಭವಿಸಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಮಣಿಪುರದ ಮೇರಿ ಕೊಮ್ ಎರಡು ಮಕ್ಕಳ ತಾಯಿಯಾಗಿದ್ದು, ಸತತವಾಗಿ ಬಾಕ್ಸಿಂಗ್ ಕ್ಷೇತ್ರದಲ್ಲಿ ಉನ್ನತ ಸಾಧನೆಯನ್ನು ಮೆರೆಯುತ್ತಿದ್ದಾರೆ.
Comments
Story first published: Thursday, December 16, 2010, 18:24 [IST]