ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ವೇತಭವನ ಮುಂದೆ ಕುರಾನ್ ಹರಿದಿದ್ದು ತಪ್ಪು

By Mahesh
|
Google Oneindia Kannada News

Roemer Condemns Quran Desecration
ವಾಷ್ಟಿಂಗ್ಟನ್, ಸೆ.14: ಅಮೆರಿಕದ ಅಧ್ಯಕ್ಷೀಯ ಕಚೇರಿ ಶ್ವೇತಭವನ ಎದುರು ಕ್ರೈಸ್ತರ ಗುಂಪೊಂದು ಕುರಾನ್ ಪ್ರತಿಗಳನ್ನು ಹರಿದು ಹಾಕಿ 9/11 ಜಿಹಾದಿ ಭಯೋತ್ಪಾದಕ ದಾಳಿಗೆ ಪ್ರತಿಭಟನೆ ದಾಖಲಿಸಿರುವುದನ್ನು ಭಾರತದ ಅಮೆರಿಕ ರಾಯಭಾರಿ ತಿಮೋತಿ ಜೆ ರೋಮರ್ ತೀವ್ರವಾಗಿ ಖಂಡಿಸಿದ್ದಾರೆ.

'ಈ ರೀತಿಯ ದುಷ್ಕೃತ್ಯದಲ್ಲಿ ಪಾಲ್ಗೊಂಡವರು ಅಮೆರಿಕದವರಲ್ಲ ಹಾಗೂ ಅಮೆರಿಕದ ಸಂಸ್ಕೃತಿಯ ಬಗ್ಗೆ ತಿಳಿದವರಂತೂ ಅಲ್ಲವೇಅಲ್ಲ. ಇದು ಅಮಾನವೀಯ ಕೃತ್ಯ. ಬಲಾತ್ಕಾರವಾಗಿ ಅನ್ಯಧರ್ಮದ ಪವಿತ್ರಗ್ರಂಥವನ್ನು ಹಾಳುಗೆಡುವುದು ಹೇಯಕೃತ್ಯ' ಎಂದು ಖಂಡಿಸಿದ್ದಾರೆ.

ಅಮೆರಿಕದಲ್ಲಿ ಗರ್ಭಪಾತದ ವಿರುದ್ಧ ಅಭಿಯಾನವನ್ನು ಹಮ್ಮಿಕೊಂಡು ಹೆಸರುವಾಗಿದ್ದ ರಂಡಾಲ್ ಟೆರ್ರಿ ಈಗ, ಕುರಾನ್ ಹರಿದುಹಾಕಿದ ಗುಂಪಿನ ವಕ್ತಾರನಾಗಿದ್ದು, ಇಸ್ಲಾಮ್ ವಿರುದ್ಧದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡಿದ್ದಾನೆ. ಇಸ್ಲಾಂ ಶಾಂತಿಪೂರ್ಣ ಮತ ಎಂಬ ಭ್ರಮೆಯನ್ನು ತೆಗೆದುಹಾಕಿ ಎಂದು ಆತ ಮನವಿ ಮಾಡಿದ್ದಾನೆ.

ಪ್ರತಿಭಟನಕಾರರು ಕುರಾನಿನಲ್ಲಿ ಕ್ರೈಸ್ತ, ಯಹೂದಿ ಮತಗಳ ವಿರುದ್ಧ ದ್ವೇಷ ಇರುವುದನ್ನು ಉಲ್ಲೇಖಿಸಿ, ಈ ದ್ವೇಷದ ವಿಚಾರಗಳಿಂದಲೇ 9/11 ಅನಾಹುತ ಸಂಭವಿಸಿದ್ದು ಎಂದು ಹೇಳಿದ್ದಾರೆ. ವಿಶ್ವ ವ್ಯಾಪಾರ ಕೇಂದ್ರ ಮೇಲಿನ ದಾಳಿಯ 9ನೇ ವರ್ಷಾಚರಣೆ ಸಂದರ್ಭ ಕುರಾನ್ ಹರಿದು ಹಾಕುವ ಪ್ರತಿಭಟನೆಯ ಸಂದರ್ಭದಲ್ಲಿ ಸ್ಥಳದಲ್ಲಿ ಪೊಲೀಸರು ಹಾಜರಿದ್ದರೂ ಪ್ರತಿಭಟನಾಕಾರರನ್ನು ತಡೆಯುವ ಯಾವುದೇ ಯತ್ನ ಮಾಡಲಿಲ್ಲ ಎಂದು ಪತ್ರಿಕೆಗಳು ವರದಿ ಮಾಡಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X