ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಾವತಿ ಬಟ್ಟೆ ಮೇಲೆ ಹಾಲಪ್ಪನ ವೀರ್ಯ

By Mahesh
|
Google Oneindia Kannada News

Chandravati
ಶಿವಮೊಗ್ಗ, ಸೆ.14: ಮಾಜಿ ಸಚಿವ ಹರತಾಳು ಹಾಲಪ್ಪ ಅವರ ಮೇಲೆ ಅತ್ಯಾಚಾರದ ಆರೋಪ ಹೊರೆಸಿರುವ ಚಂದ್ರಾವತಿ ಅವರ ಬಟ್ಟೆಯ ಮೇಲಿದ್ದ ವೀರ್ಯ ಹಾಲಪ್ಪ ಅವರದ್ದು ಎಂದು ಡಿಎನ್ ಎ ವರದಿಯಿಂದ ಬಹಿರಂಗಗೊಂಡಿದೆ. ಹೈದರಾಬಾದಿನಿಂದ ವರದಿ ಬಂದು ವಾರವಾದರೂ ಸಿಐಡಿ ತಂಡ ಸುದ್ದಿಯನ್ನು ಹೊರಗಡೆ ಬಿಟ್ಟು ಕೊಟ್ಟಿರಲಿಲ್ಲ.

ಹೈದರಾಬಾದಿನ CDFD ಕೇಂದ್ರ ವರದಿ ಪ್ರಕಾರ 'ಹಾಲಪ್ಪ ಹಾಗೂ ಚಂದ್ರಾವತಿ ಅವರ ರಕ್ತದ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಚಂದ್ರಾವತಿ ವಿಡಿಯೋ ತುಣುಕಿನಲ್ಲಿ ತೋರಿಸಿರುವ ಬಟ್ಟೆಯಲ್ಲಿದ್ದ ವೀರ್ಯದ ಕಲೆ ಹಾಲಪ್ಪ ಅವರದ್ದು ಎಂದು ತಿಳಿದುಬಂದಿದೆ. ಅಲ್ಲದೆ. ಚಂದ್ರಾವತಿ ಹಾಗೂ ಹಾಲಪ್ಪ ಅವರ ನಡುವೆ ದೈಹಿಕ ಸಂಪರ್ಕ ನಡೆದಿದ್ದು ನಿಜ ಎಂದು ಹೇಳಲಾಗಿದೆ.

ಆದರೆ, ಪರಸ್ಪರ ಒಪ್ಪಂದದಿಂದ ದೈಹಿಕ ಸಂರ್ಪಕ ಸಾಧ್ಯವಾಯಿತೇ ಅಥವಾ ಹಾಲಪ್ಪ ಅವರು ಚಂದ್ರಾವತಿಯ ಮೇಲೆ ಅತ್ಯಾಚಾರ ಎಸೆಗಿದ್ದಾರೆಯೇ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಒಂದು ವೇಳೆ ಅತ್ಯಾಚಾರದ ಆರೋಪ ಸಾಬೀತಾದರೆ, ಹಾಲಪ್ಪನವರಿಗೆ 14 ವರ್ಷ ಸೆರೆಮನೆ ವಾಸ ಖಂಡಿತ.ಒಪ್ಪಂದದ ದೈಹಿಕ ಸಂಪರ್ಕವಾದರೆ ಚಂದ್ರಾವತಿಯ ಗಂಡ ಅಥವಾ ಹಾಲಪ್ಪನವರ ಹೆಂಡತಿ ಇಚ್ಛಿಸಿದರೆ ಹೊಸ ದೂರು ನೀಡಬೇಕಾಗುತ್ತದೆ.

ಮೇ ತಿಂಗಳಿನಲ್ಲಿ ಆಹಾರ ಮತ್ತು ನಾಗರೀಕ ಸೌಲಭ್ಯ ಖಾತೆಗೆ ರಾಜೀನಾಮೆ ನೀಡಿ ಸಿಂಗದೂರಿನ ಅಮ್ಮನ ಕೃಪೆಯೊಂದಿಗೆ ಆರೋಗ್ಯವಾಗಿ ಸ್ವಂತ ಊರಲ್ಲಿ ಕಾಲದೂಡುತ್ತಿರುವ ಹಾಲಪ್ಪ ಅವರಿಗೆ ಈ ಸುದ್ದಿಯಿಂದ ಶಾಕ್ ಆಗಿದೆಯಂತೆ. ಆದರೆ, ಯಾವುದೇ ಪ್ರತಿಕ್ರಿಯೆ ನೀಡಲು ಇನ್ನೂ ಮುಂದೆ ಬಂದಿಲ್ಲ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X