ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ ಗರಂ

By Mahesh
|
Google Oneindia Kannada News

YSV Datta
ಕಡೂರು, ಸೆ.13: ಇಂದು ಬೆಳಗ್ಗೆ ಸಕುಟುಂಬ ಸಪರಿವಾರ ಸಮೇತ ಯಗಟಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದ ಯಗಟಿ ಸೂರ್ಯನಾರಾಯಣ ವೆಂಕಟೇಶ ದತ್ತಾ ಯಾನೆ ವೈಎಸ್ ವಿ ದತ್ತಾ ಅವರು ಯಾಕೋ ಕೊಂಚ ಗರಂ ಆಗಿದ್ದರು. ಕಾರಣ, ಎಲೆಕ್ಟ್ರಾನಿಕ್ ಮಾಧ್ಯಮದವರನ್ನು ಬೂತ್ ಒಳಗೆ ಬಿಡಲಿಲ್ಲವಂತೆ.

ಮೊಬೈಲ್ ಫೋನ್ ತೆಗೆದುಕೊಂಡು ಸ್ಪೀಕರ್ ಫೋನ್ ಆನ್ ಮಾಡಿ ಬೂತ್ ಆಫೀಸರ್ ಅನ್ನು ತರಾಟೆಗೆ ತೆಗೆದುಕೊಂಡು ಬಿಟ್ಟರು. ನಂತರ ಸುದ್ದಿಗಾರರೊಂದಿಗೆ ದುಃಖ ತೋಡಿಕೊಂಡ ದತ್ತಾ, 'ಮತದಾನ ಶಾಂತಿಯುತವಾಗಿದ್ದರೂ, ನಿಷ್ಪಕ್ಷಪಾತವಾಗಿ ನಡೆಯುತ್ತಿಲ್ಲ" ಎಂಬ ಶಂಕೆ ವ್ಯಕ್ತಪಡಿಸಿದರು.

ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ವೋಟ್ ಹಾಕುವಾಗ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅವಕಾಶ ನೀಡಿ, ನನಗೆ ಯಾಕೆ ನೀಡಲಿಲ್ಲ, ಈ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.

"ದತ್ತಾ ಅಂದರೆ ಆದಳಿತ ಪಕ್ಷಕ್ಕೆ ಸದನದ ಒಳಗೆ ಹೊರಗೂ ಕೂಡಾ ಭಯ, ಬಿಜೆಪಿ ಅವರು ನಾಚಿಕೆ ಮಾನ ಬಿಟ್ಟು ಕಣಕ್ಕಿಳಿದಿದ್ದಾರೆ, ಸಿಟಿ ರವಿ ತಮಗೆ ಬೇಕಾದ ಪೊಲೀಸರನ್ನು ತಮ್ಮ ಕ್ಷೇತ್ರಕ್ಕೆ ಹಾಕಿದ್ದಾರೆ,. 394 ಹಳ್ಳಿಗೆ ಹೋಗಿದ್ದೇನೆ ಎಲ್ಲರೊಡನೆ ಮಾತಾಡಿ, ಸಂವಾದ ಮಾಡಿದ್ದೇನೆ.

ದತ್ತಣ್ಣ ಕೆಟ್ಟವನು ಎಂದು ಒಬ್ಬೇ ಒಬ್ಬ ಮತದಾರ ಹೇಳಿಲ್ಲ. ಅವರ ಅಭಿಮಾನಕ್ಕೆ ನಾನು ಚಿರಋಣಿ. ನಾನು ಓದಿದ ಶಾಲೆಯಲ್ಲೇ ಮತದಾನ ಮಾಡುತ್ತಿರುವುದು ಸುಯೋಗ ಎಂದರು.

ಇತ್ತೀಚಿನ ವರದಿಗಳ ಪ್ರಕಾರ ಗುಲ್ಬರ್ಗಾದಲ್ಲಿ ಶೇ.48, ಕಡೂರು ಶೇ. 54.27ಮತದಾನವಾಗಿತ್ತು. ಎರಡೂ ಕ್ಷೇತ್ರದಲ್ಲೂ ಶೇ.60ಕ್ಕಿಂತ ಹೆಚ್ಚು ಮತದಾನವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X