ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದು ಪಕ್ಕಾ ಅವಕಾಶವಾದಿ : ವರ್ತೂರ್ ಪ್ರಕಾಶ್

By Mahesh
|
Google Oneindia Kannada News

MLA Vartur Prakash
ಬೆಂಗಳೂರು, ಸೆ 13:ಹಾಲಿ ವಿರೋಧ ಪಕ್ಷದ ನಾಯಕರು ಜನತಾದಳ ತೊರೆದಾಗ ಅವರಿಗೆ ಬೇಕಾದಷ್ಟು ಹಣಕಾಸಿನ ನೆರವು ನೀಡಿದ್ದೆ. ಅವರು ಕಾಂಗ್ರೆಸ್ ಪಕ್ಷ ಸೇರಿದ ಮೇಲೆ 15 ಇದ್ದ ಕುರುಬ ಜನಾಂಗದ ಶಾಸಕರ ಸಂಖ್ಯೆ ಎರಡಕ್ಕಿಳಿದಿದೆ. ರಾಜಕೀಯವಾಗಿ ನನ್ನನ್ನು ಮುಗಿಸುವ ಯತ್ನಕ್ಕೆ ನಾನು ಕ್ಯಾರೇ ಮಾಡುವುದಿಲ್ಲ ಅದು ಅವರಿಂದ ಸಾಧ್ಯನೂ ಇಲ್ಲ ಎಂದು ಒಂದು ಕಾಲದಲ್ಲಿ ಸಿದ್ದರಾಮಯ್ಯವರ ಆಪ್ತ ಶಿಷ್ಯರಾಗಿದ್ದ ವರ್ತೂರು ಪ್ರಕಾಶ್ ಗುರುಗಳ ಮೇಲೆ ಕಿಡಿಕಾರಿದ್ದಾರೆ.

ನನ್ನ ಹಿಂದಿನ ಹೇಳಿಕೆಯನ್ನು ಚಿಲ್ಲರೆ ಹೇಳಿಕೆ ಎಂದಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಬಂದ ಮೇಲೆ ಯಾರು ಚಿಲ್ಲರೆಯೆಂದು ಗೊತ್ತಾಗಲಿದೆ. ಕುರುಬ ಸಮುದಾಯದ ಮತ್ತೊಬ್ಬ ಮುಖಂಡರು ರಾಜಕೀಯವಾಗಿ ಮೇಲೆ ಬರುವುದು ಸಿದ್ದರಾಮಯ್ಯವರಿಗೆ ಬೇಕಾಗಿಲ್ಲ. ಕುರುಬ ಸಮಾಜದಿಂದ ನಡೆಯುವ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸದಂತೆ ಎಲ್ಲಾ ಮುಖಂಡರಿಗೆ ಸಿದ್ದು ಸಲಹೆ ನೀಡಿದ್ದಾರೆ. ಆದರೆ ಈ ಪ್ರಕಾಶ್ ಅದಕ್ಕೆ ತಲೆಕೆಡಿಸಿ ಕೊಳ್ಳುವವನಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ನಾನು ಸ್ವಸಾಮರ್ಥ್ಯದಿಂದ ಮೇಲೆ ಬಂದವನು. ನಾನು ಕಡೂರಿನ ಪತ್ರಿಕಾಗೋಷ್ಠಿಯಲ್ಲಿ ದೇವೇಗೌಡರನ್ನು ಭೇಟಿಯಾಗಿದ್ದೆ. ನನ್ನ ಆರೋಪದ ಹಿಂದೆ ಗೌಡರ ಅಣತಿಯೇನೂ ಇಲ್ಲ. ಸಿದ್ದು ಅವರ ಕುರುಬ ವಿರೋಧಿ ನೀತಿಯಿಂದ ಬೇಸತ್ತು ಈ ಹೇಳಿಕೆ ನೀಡುತ್ತಿದ್ದೇನೆ, ಕುರುಬ ಸಮದಾಯದಲ್ಲಿ ಬಹಳಷ್ಟು ಜನ ಸಿದ್ದು ಅವರ ವಿರುದ್ಧವಿದ್ದಾರೆ ಎನ್ನುವುದು ಅವರಿಗೆ ತಿಳಿದಿರಲಿ ಎಂದು ವರ್ತೂರು ಪ್ರಕಾಶ್ ಸಿದ್ದು ಅವರ ಮೇಲೆ ಹರಿಹಾಯ್ದಿದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X