ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೇರುಘಟ್ಟದಲ್ಲಿ ಚಿತೆ ಇನ್ನೂ ಆರಿಲ್ಲ

By Mahesh
|
Google Oneindia Kannada News

Lions, Tigers die at Bannerghatta National Park
ಬೆಂಗಳೂರು, ಸೆ.13: ಬನ್ನೇರುಘಟ್ಟ ಜೈವಿಕ ಉದ್ಯಾನದ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಪ್ರಾಣಿಗಳ ಸಾವಿನ ಸರಣಿ ಮುಂದುವರೆದಿದೆ. ಸೈಬೀರಿಯನ್ ತಳಿಗೆ ಸೇರಿದ ಹುಲಿ ಮೃತಪಟ್ಟ ಬೆನ್ನಲ್ಲೇ, ಭಾನುವಾರ ಬೆಳಗ್ಗೆ ಕೂಡಾ ಎರಡು ಸಿಂಹಗಳು ಸಾವನ್ನಪ್ಪಿದ್ದು, ಇನ್ನೊಂದು ಹುಲಿ ಕೂಡಾ ಸುದ್ದಿ ಹೊರಬಿದ್ದಿದ್ದು ಚಿತೆ ಇನ್ನೂ ಉರಿಯುತ್ತಿದೆ. ಮಾಧ್ಯಮದವರಿಗೆ ಹೆಚ್ಚಿನ ಮಾಹಿತಿ ನೀಡದ ಇಲ್ಲಿನ ಸಿಬ್ಬಂದಿ ಎಲ್ಲವೂ ಸಹಜ ಸಾವು ಎಂದು ಬಿಂಬಿಸಿದ್ದಾರೆ.

ಸೈಬೀರಿಯನ್ ತಳಿಗೆ ಸೇರಿದ ಲಂಡನ್ ನ ಹುಲಿ ಕಿಂಗ್ (21) ಬನ್ನೇರುಘಟ್ಟ ಜೈವಿಕ ಉದ್ಯಾನ ಕೇಂದ್ರದಲ್ಲಿ ಆಶ್ರಯ ಪಡೆದಿತ್ತು. 1989 ರಲ್ಲಿ ಲಂಡನ್‌ನ ಮೃಗಾಲಯದಲ್ಲಿ ಹುಟ್ಟಿದ್ದ ಗಂಡು ಹುಲಿ, 2002 ರಲ್ಲಿ ಲಂಡನ್‌ನಿಂದ ವಿಮಾನದಲ್ಲಿ ಬಂದು ಬನ್ನೇರುಘಟ್ಟದಲ್ಲಿ ಅಶ್ರಯ ಪಡೆದಿದ್ದವು.

ಉದ್ಯಾನವದ ಕಾರ್ಯನಿರ್ವಹಣಾಧಿಕಾರಿಯವರ ಉಪಸ್ಥಿತಿಯಲ್ಲಿ ಹುಲಿಯ ಶವಪರೀಕ್ಷೆಯನ್ನು ಡಾ. ಚೆಟ್ಟಯಪ್ಪ ನೇರವೇರಿಸಿ, ನಂತರ ಹುಲಿಯ ಕಳೇಬರಹವನ್ನು ಬಂಡೆ ಮೇಲೆ ಸುಡಲಾಯಿತು. ಇದೇ ದಿನ ಉದ್ಯಾನವನದ ಪ್ರಾಣಿ ಪುರ್ನವಸತಿ ಕೇಂದ್ರದಲ್ಲಿನ ಗಂಡು ಸಿಂಹ ಲಕ್ಷ್ಮಣ್ (18) ಮೃತಪಟ್ಟಿದೆ.

2002ರಲ್ಲಿ ನ್ಯೂ ಗ್ರಾಂಡ್ ಸರ್ಕಸ್ ಕಂಪನಿಯಿಂದ ವಶ ಪಡಿಸಿಕೊಂಡಿದ್ದ ಸಿಂಹ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಇದಕ್ಕೆ ಚಿಕಿತ್ಸೆಯನ್ನು ಸಹ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಿಂಹ ಮೃತಪಟ್ಟಿತು. ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಾರೋಗ್ಯ, ವಯಸ್ಸು ಕಾರಣ?:
ಭಾನುವಾರ ಮೃತಪಟ್ಟ ಸಿಂಹ ಶಂಕರ್ (23) ಸಹ ನ್ಯೂಗೋಲ್ಡನ್ ಸರ್ಕಸ್ ಕಂಪನಿಯಿಂದ 2001ರಲ್ಲಿ ಉದ್ಯಾನಕ್ಕೆ ಕರೆ ತರಲಾಗಿತ್ತು. ಇದು ಸಹ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು.

ಈ ಬಗ್ಗೆ ವೈದ್ಯಾಧಿಕಾರಿ ಚೆಟ್ಟಿಯಪ್ಪ ಮಾತನಾಡಿ ಸಾಮಾನ್ಯವಾಗಿ ಸೈಬಿರಿಯನ್ ಹುಲಿಗಳು ಕಾಡಿನಲ್ಲಿ ಬದುಕುವುದು 15 ರಿಂದ 18 ವರ್ಷ, ಆದರೆ ಇಲ್ಲಿನ ಹುಲಿ 21 ವರ್ಷ ಬದುಕಿರುವುದೇ ಹೆಚ್ಚು ಇದಕ್ಕೆ ಕಾರಣ ಇಲ್ಲಿನ ಹವಾಗುಣ ಎಂದು ಅವರು ಹೇಳಿದರು.

ಕಳೆದ ಒಂದು ತಿಂಗಳಿಂದ ಮೂತ್ರ ಕೋಶದ ತೊಂದರೆಯಿಂದ ಬಳಲುತ್ತಿತ್ತು. ನಾವು ಚಿಕಿತ್ಸೆ ನೀಡುತ್ತ ಬಂದೆವೂ ಆದರೂ ಪ್ರಯೋಜನವಾಗಲಿಲ್ಲ ಎಂದು ಅವರು ಹೇಳಿದರು. ಸದ್ಯ ಮೃತ ಪಟ್ಟಿರುವ ಹುಲಿ ಸಿಂಹಗಳು, ಅನಾರೋಗ್ಯದಿಂದ ಬಳಲುತ್ತಿದ್ದವು ಇದರಿಂದ ಮೃತಪಟ್ಟಿದೆ ಎಂಬುದಕ್ಕೆ ನಾವು ನೀಡುತ್ತಿದ್ದ ಚಿಕಿತ್ಸೆಯೇ ಸಾಕ್ಷಿ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X