ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನೂ ಬ್ರಾಹ್ಮಣ, ಗೋವುಗಳ ಬಗ್ಗೆ ಪಾಠ ಬೇಡ : ಭಾರಧ್ವಾಜ್

By Mahesh
|
Google Oneindia Kannada News

HR Bhardwaj
ಬೆಂಗಳೂರು, ಸೆ 13: ಗೋರಕ್ಷಣಾ ಮಸೂದೆ ಬಗ್ಗೆ ಬಿಜೆಪಿ ಸಚಿವರುಗಳಿಂದ ಪಾಠ ಕಲಿಯುವ ಅವಶ್ಯಕತೆ ನನಗಿಲ್ಲ. ಗೋ ಸಂರಕ್ಷಣೆ ಬಗ್ಗೆ ಇವರು ನನಗೆ ಬುದ್ದಿ ಹೇಳಲು ಇವರು ಯಾರು? ಗೋವುಗಳ ಬಗ್ಗೆ ನನಗೂ ಅರಿವಿದೆ. ನಾನು ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದವನು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರಕಾರಕ್ಕೆ ಮತ್ತೊಮ್ಮೆ ಮಗದೊಮ್ಮೆ ಜಾಡಿಸಿದ್ದಾರೆ.

ಸಂವಿಧಾನಿಕ ಮುಖ್ಯಸ್ಥನಾಗಿದ್ದೇನೆ, ಜನರ ಹಿತಾಸಕ್ತಿಗನುಗುಣವಾಗಿ ಯಾವಾಗ ಏನು ತೀರ್ಮಾನ ತೆಗೆದುಕೊಳ್ಳಬೇಕೆನ್ನುವ ಅರಿವು ನನಗಿದೆ. ಗೋಹತ್ಯೆ ನಿಷೇಧ ಮಸೂದೆ ವಿಚಾರಗಳ ಬಗ್ಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಬಳಿ ಇಲ್ಲಿನ ಬೆಳವಣಿಗೆಗಳ ಬಗ್ಗೆ ವಿವರಿಸುತ್ತೇನೆ.

ಬಿಜೆಪಿಯ ಕೆಲ ಸಚಿವರು ಈ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಇವರಿಗೆಲ್ಲಾ ಸೂಕ್ತ ವೇದಿಕೆಯಲ್ಲಿ ಸರಿಯಾಗಿ ಉತ್ತರಿಸುವೆ ಎಂದು ರಾಜ್ಯಪಾಲರು ಸರಕಾರವನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಖೈದಿಗಳ ಬಿಡುಗಡೆ ವಿಚಾರದಲ್ಲಿ ಒತ್ತಡ ಹೇರುವ ಅಧಿಕಾರ ಯಾರಿಗೂ ಇಲ್ಲ. ಖೈದಿಗಳ ಬಿಡುಗಡೆ ಕಡತಕ್ಕೆ ಸಹಿ ಹಾಕದಿದ್ದರೆ ರಾಷ್ಟ್ರಪತಿಗಳ ಬಳಿ ದೂರು ನೀಡುವುದಾಗಿ ಬಂದೀಖಾನೆ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡಿದ್ದಾರೆ. 600 ಖೈದಿಗಳ ಬಿಡುಗಡೆ ವಿಚಾರದಲ್ಲಿ ಸರ್ಕಾರ ನನ್ನ ಮೇಲೆ ಒತ್ತಡ ಹೇರಬಾರದು. ಈ ಸಂಬಂಧ ಸಚಿವರ ಹೇಳಿಕೆ ಬೇಸರ ತಂದಿದೆ ಎಂದು ರಾಜ್ಯಪಾಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X