ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡೇ ಕಾಲಿನ ಜಾಣ ಕುರಿಮರಿ ಕಥೆ

By Prasad
|
Google Oneindia Kannada News

Two legged goat
ಕೆಲ ದಿನಗಳ ಹಿಂದೆ ರಾಷ್ಟ್ರಗೀತೆ ಹಾಡುವ ಸಮಯಕ್ಕೆ ಸರಿಯಾಗಿ ಹಾಜರಾಗಿ ದೇಶಪ್ರೇಮ ಮೆರೆದಿದ್ದ ಮೇಕೆಯ ಬಗ್ಗೆ ಓದಿದ್ದಿರಿ. ಇದೇ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಪರಾವಲಂಬಿ ಮನುಜರೂ ನಾಚುವಂತೆ ಸ್ವಾವಲಂಬಿಯಾಗಿ ಜೀವನ ಸಾಗಿಸುತ್ತಿರುವ ಮೇಕೆಯ ಕಥೆ ಇಲ್ಲಿದೆ ಓದಿ.

* ರಾಜೇಶ್ ಕೊಂಡಾಪುರ

ಮನುಷ್ಯ ತನ್ನ ದೇಹದ ಒಂದು ಅಂಗ ಊನವಾದರೆ ಆತ ಸಾಕಷ್ಟು ಜರ್ಜರಿತನಾಗುತ್ತಾನೆ. ಇನ್ನು ಕೆಲವರು ಎಲ್ಲದಕ್ಕೂ ಬೇರೆಯವರ ಮೇಲೆ ಅವಲಂಬಿತರಾಗುವ ಮೂಲಕ ಪರಾವಲಂಬಿ ಬದುಕಿಗೆ ಅಂಟಿಕೊಂಳ್ಳುತ್ತಾರೆ. ಇವರ ನಡುವೆ ಕೆಲವು ಮಂದಿ ವಿಕಲಚೇತನರು ತನ್ನಲ್ಲಿರುವ ಊನವನ್ನು ಮೆಟ್ಟಿ ಸಾಮಾನ್ಯರು ಸಾಧಿಸಲಾಗದ್ದನ್ನ ಸಾಧಿಸಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ.

ಇಂಥ ಮನುಷ್ಯ ಜೀವಿಗಳ ಮಧ್ಯೆ ತಾಯಿಗರ್ಭದಿಂದ ಹುಟ್ಟುತ್ತಲೇ ಎರಡು ಕಾಲುಗಳನ್ನ ಕಳೆದುಕೊಂಡು ಜನಿಸಿದ್ದ ಮೇಕೆ ಮರಿ ಎರಡೇ ಕಾಲಲ್ಲಿ ಮನುಷ್ಯರಂತೆ ನಡೆದು ತನ್ನ ಹೊಟ್ಟೆಪಾಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದು ವಿಸ್ಮಯ ಮೂಡಿಸಿದೆ. ಪರಾವಲಂಬಿಯಾಗದೆ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದೆ.

ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಬ್ರಹ್ಮಣೀಪುರದ ಜಯಮ್ಮ ಬೈರೇಗೌಡರ ಮನೆಯಲ್ಲಿ 6 ತಿಂಗಳ ಹಿಂದೆ ಜನಿಸಿದ ಮೇಕೆ ಮರಿಯೊಂದು ಹುಟ್ಟುತ್ತಲೇ ಎರಡು ಕಾಲುಗಳನ್ನ ಮಾತ್ರ ಹೊಂದಿತ್ತು. ಎರಡು ಕಾಲಿನ ಮೇಕೆ ಮರಿಯನ್ನು ನೋಡಿದ ಜಯಮ್ಮನವರ ಕುಟುಂಬ ಆರಂಭದಲ್ಲಿ ಅದು ಬದುಕುವುದಿಲ್ಲವೆಂದು ತಿಳಿದಿದ್ದರು.

ಹೆಮ್ಮೆಯ ಮೇಕೆ : ದಿನಕಳೆದಂತೆ ಎರಡು ಕಾಲಿನ ಮೇಕೆ ಮರಿ(ಕರಿಯ) ಆರೋಗ್ಯದಿಂದ ಇರುವುದನ್ನು ಕಂಡು ಮುತುವರ್ಜಿಯಿಂದ ಜಯಮ್ಮ ಶುಶ್ರೂಷೆ ಮಾಡಿದರು. ಆರಂಭದಲ್ಲಿ ಹಾಲಿನ ಬಾಟಲಿ ಮೂಲಕ ಹಾಲುಣಿಸುತ್ತಿದ್ದರು. ಬೆಳೆದಂತೆ ಬೇರೆ ಮೇಕೆಗಳಂತೆ ಈ ಎರಡು ಕಾಲಿನ ಮೇಕೆಯೂ ಆಹಾರವನ್ನು ಸೇವಿಸಲು ಪ್ರಾರಂಭಿಸಿತು. ಎರಡೇ ಕಾಲಿದ್ದರೂ ಬೇರೆ ಮೇಕೆಗಳಂತೆಯೇ ಗಿಡಗಳನ್ನು ಬಾಗಿಸಿ ಸೊಪ್ಪು ತಿನ್ನುವುದು ಇತರೆ ಮೇಕೆಗಳಂತೆ ನಡೆದುಹೋಗುವುದು ಸಾಮಾನ್ಯವಾಯಿತು. 2 ಕಾಲಿನ ಮೇಕೆಯ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಜಯಮ್ಮ ಹೇಳುತ್ತಾರೆ.

ಪ್ರತಿ ದಿನ ಚಿಕ್ಕ ಮಗುವೊಂದು ನಡೆದುಹೋಗುವ ರೀತಿಯಲ್ಲಿ ಈ ಮೇಕೆ ಮರಿ ರಸ್ತೆಯಲ್ಲಿ ನಡೆದುಹೋಗುತ್ತದೆ. ಈ ಎರಡು ಕಾಲಿನ ಮೇಕೆಯ ದಿನನಿತ್ಯದ ಚಟುವಟಿಕೆಯ ಬಗ್ಗೆ ಗ್ರಾಮಸ್ಥರಲ್ಲಿ ಕುತೂಹಲ ಹುಟ್ಟುಹಾಕಿದ್ದರ ಜತೆಗೆ ತನ್ನ ಹೊಟ್ಟೆ ತುಂಬಿಸಿಕೊಳ್ಳುವುದನ್ನು ಕಂಡು ನಾವೇಕೆ ಪರಾವಾಲಂಬಿಗಳಾಗಿದ್ದೇವೆ ಎಂದು ಪ್ರಶ್ನೆ ಹಾಕಿಕೊಳ್ಳುವಂತೆ ಮಾಡಿದೆ.

ಈ ವಿಚಿತ್ರ ವಿಶಿಷ್ಟ ಮೇಕೆಯ ಅಸಾಮಾನ್ಯ ಗುಣವನ್ನು ಕಂಡ ಹಲವಾರು ಮಂದಿ ಹೆಚ್ಚು ಬೆಲೆ ನೀಡಿ ಕೊಳ್ಳಲು ಮುಂದೆ ಬಂದಿದ್ದರು. ಆದರೆ ಜಯಮ್ಮನವರ ಕುಟುಂಬದ ಪ್ರೀತಿಪಾತ್ರ ಸದಸ್ಯನಾಗಿರುವ ಈ ಕರಿಯನನ್ನು ಮಾರಾಟ ಮಾಡಲು ಮನಸು ಒಪ್ಪಲೇ ಇಲ್ಲ. ಈ ಎರಡು ಕಾಲಿನ ಕರಿಯ ಬ್ರಹ್ಮಣೀಪುರದಲ್ಲಿ ಸಖತ್ ಪ್ರಸಿದ್ಧಿ ಪಡೆದಿದೆ. ಕರಿಯ ಕೂಡ ಅಂಗವೈಕಲ್ಯವಿದ್ದರೂ ಪ್ರೀತಿಯಿಂದ ಬೆಳೆಸಿದ ತನ್ನ ಮಾಲೀಕನ ಮನೆಯಲ್ಲಿ ಕುಟುಂಬದ ಸದಸ್ಯನ ಸ್ಥಾನವನ್ನು ಪಡೆದಿದೆ. ಸೋಮಾರಿತನ ಮಾಡುತ್ತಾ ಪರಾವಲಂಬಿಗಳಾಗಿರುವ ಹಲವರಿಗೆ ಈ ಎರಡು ಕಾಲಿನ ಕರಿಯ ಮೇಕೆ ಮಾದರಿಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X