ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರು. 15ಕ್ಕೆ ಕಂಪ್ಯೂಟರ್ ಬಾಡಿಗೆಗೆ ಸಿಗಲಿದೆ
ವಿಡಿಯೋ ಪಾರ್ಲರ್ ನಿಂದ ನೆಚ್ಚಿನ ಸಿಡಿ ಪಡೆದು ಸಿನಿಮಾ ನೋಡುವಂತೆ ಗಣಕಗಳನ್ನು ಇನ್ಮುಂದೆ ಬಾಡಿಗೆಗೆ ಪಡೆದು ಜ್ಞಾನ ವೃದ್ಧಿ ಮಾಡಿಕೊಳ್ಳುವ ಅವಕಾಶವನ್ನು ಕಲ್ಪಿಸಲು ಸರ್ಕಾರ ಮುಂದಾಗಿದೆ. ಕೇಂದ್ರದ ಮಾಹಿತಿ ತಂತ್ರಜ್ಞಾನ ಹಾಗೂ ಕಮ್ಯೂನಿಕೇಷನ್ ಇಲಾಖೆಯ ಈ ಯೋಜನೆ ಸಾಕಾರಗೊಳಿಸಲು ಪ್ರಮುಖ ಐಟಿ ಕಂಪೆನಿಗಳೊಂದಿಗೆ ಸರ್ಕಾರ ಈಗಾಗಲೆ ಮಾತುಕತೆ ನಡೆಸಿದೆ. ಅವುಗಳಲ್ಲಿ ಎಚ್ ಸಿಎಲ್ ಇನ್ಫೋ ಸಿಸ್ಟಮ್ಸ್ ಪ್ರಮುಖವಾದದು.
ಸುಮಾರು 45 ಲಕ್ಷ ವೆಚ್ಚದ ಈ ಯೋಜನೆಯ ಹೊಣೆಯನ್ನು ಯಾವ ಕಂಪೆನಿಗೆ ಸರ್ಕಾರ ವಹಿಸುವುದು ಎಂದು ಇನ್ನೂ ತಿಳಿದುಬಂದಿಲ್ಲ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಡಿಮೆ ವೆಚ್ಚದಲ್ಲಿ ಗಣಕ ಸೌಲ ಭ್ಯ ಒದಗಿಸುವ ಮೂಲಕ ಜನಮೆಚ್ಚುಗೆಯ ಕಾರ್ಯಕ್ಕೆ ಐಟಿ ಸಚಿವಾಲಯ ಮುಂದಾಗಿದೆ.
Comments
ಕಂಪ್ಯೂಟರ್ ಐಟಿ ಗ್ರಾಮೀಣ ಭಾರತ ಎಚ್ ಸಿಎಲ್ ಗಣಕ ಮಾಹಿತಿ ತಂತ್ರಜ್ಞಾನ ಸಾಕ್ಷರತೆ ವಿದ್ಯಾರ್ಥಿ computer rural india hcl information technology literacy students
Story first published: Sunday, September 12, 2010, 16:29 [IST]