ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮೀಕ್ಷೆ: ಕಮಲ ಮತ್ತು ಕೈಗೆ 'ಫಿಫ್ಟಿ ಫಿಫ್ಟಿ'

By Mahesh
|
Google Oneindia Kannada News

Kadur Gulbarga Bypoll prepoll survey
ಬೆಂಗಳೂರು, ಸೆ. 12 : ಸಿ ಫೋರ್ ಸಂಸ್ಥೆ ಕನ್ನಡಪ್ರಭ ಮತ್ತು ಸುವರ್ಣ ವಾರ್ತಾ ವಾಹಿನಿಗಾಗಿ ನಡೆಸಿದ ಮತದಾನ ಪೂರ್ವ ಸಮೀಕ್ಷೆಯಲ್ಲಿ ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಡೂರಿನಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸುತ್ತದೆ. ಹಾಗೂ ಜೆಡಿಎಸ್ ಎರಡೂ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಳ್ಳಬೇಕಾದ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.

ಸಮೀಕ್ಷೆ ಪ್ರಕಾರ ಎರಡೂ ಕ್ಷೇತ್ರದಲ್ಲಿ ಅಕ್ರಮ ಗಣಿಗಾರಿಕೆ ಮತದಾರರಿಗೆ ಪ್ರಮುಖ ವಿಷಯವಾಗಿ ಪರಿಗಣಿಸಲ್ಪಟ್ಟಿದೆ. ಅರ್ಧಕ್ಕಿಂತ ಹೆಚ್ಚು ಮತದಾರರು ಅಕ್ರಮ ಗಣಿಗಾರಿಕೆಗೆ ವಿಶೇಷ ಒತ್ತು ನೀಡಿದ್ದಾರೆ. ಪ್ರತಿಯೊಂದು ಕ್ಷೇತ್ರದ ಒಟ್ಟು ಹತ್ತು ನಗರ ಪ್ರದೇಶ ಮತ್ತು ನಲವತ್ತು ಗ್ರಾಮೀಣ ಪ್ರದೇಶದಲ್ಲಿ ವಿವಿಧ ಸಾಮಾಜಿಕ ಮತ್ತು ಆರ್ಥಿಕ ವರ್ಗಗಳಿಗೆ ಸೇರಿದ ಎರಡು ಸಾವಿರ ಜನರನ್ನು ಸಮೀಕ್ಷೆಗಾಗಿ ಸಂದರ್ಶಿಸಲಾಗಿತ್ತು.

ಗುಲ್ಬರ್ಗ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಶೇ. 41, ಕಾಂಗ್ರೆಸ್ ಶೇ.39 ಮತ್ತು ಜೆಡಿಎಸ್ ಶೇ.15 ರಷ್ಟು ಮತಗಳಿಸುವ ನಿರೀಕ್ಷೆಯಿದೆ. ಕಡೂರಿನಲ್ಲಿ ಕಾಂಗ್ರೆಸ್ ಶೇ.35 , ಬಿಜೆಪಿ ಶೇ. 33 ಮತ್ತು ಜೆಡಿಎಸ್ ಶೇ.28 ರಷ್ಟು ಮತಗಳಿಸುವ ನಿರೀಕ್ಷೆಯಿದೆ.

ಆದರೆ ಕಡೂರಿನಲ್ಲಿ ಶೇ.9ರಷ್ಟು ಮತದಾರರು ತಮ್ಮ ಗುಟ್ಟು ಬಿಟ್ಟು ಕೊಟ್ಟಿಲ್ಲ. ಗಣಿಗಾರಿಕೆಯ ನಂತರ ಎರಡೂ ಕ್ಷೇತ್ರದಲ್ಲಿ ಜನತೆಗೆ ಬೆಲೆ ಏರಿಕೆಯೇ ಪ್ರಮುಖ ಸಮಸ್ಯೆ. ನಂತರ ಭ್ರಷ್ಟಾಚಾರ, ಕುಡಿಯುವ ನೀರು ಮತ್ತು ವಿದ್ಯುತ್ ಕೊರತೆ ಮೊದಲಾದವುಗಳಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X