ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಳೂರು ಗೋಪಾಲಕೃಷ್ಣಂಗೆ ಮಂತ್ರಿ ಪಟ್ಟ ಬೇಕಂತೆ

By Mahesh
|
Google Oneindia Kannada News

Sagar MLA Gopalakrishna seeks Cabinet berth
ಸಾಗರ, ಸೆ.10: ರಾಜಕೀಯದಲ್ಲಿ ಬೆಳೆಯಬೇಕೆಂಬ ಆಸೆಯಿಂದ ಅವರಿವರ ಸಹವಾಸಕ್ಕೆ ಬಿದ್ದು ಹಾಳಾದೆ ಎಂದು ಒಪ್ಪಿಕೊಂಡ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ಮುಂದಿನ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತನಗೆ ಮಂತ್ರಿ ಸ್ಥಾನ ನೀಡಲೇಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರಿಗೆ ತಾಕೀತು ಮಾಡಿದ್ದಾರೆ.

"ನನಗೆ ಮಂತ್ರಿಯಾಗಲು ತನಗೆ ಎಲ್ಲ ರೀತಿಯ ಅರ್ಹತೆಯಿದೆ. ಖಾತೆ ನಿರ್ವಹಣೆ ಮಾಡುವ ಸಾಮರ್ಥ್ಯವಿದೆ. ಮುಂದಿನ ಸಚಿವ ಸಂಪುಟ ವಿಸ್ತರಣೆಯಲ್ಲಿ ತನಗೆ ಮಂತ್ರಿ ಸ್ಥಾನ ನೀಡಲೇ ಬೇಕು. ಒಂದು ವೇಳೆ ನೀಡದಿದ್ದರೆ ಮುಂದಿನ ದಾರಿ ಗೊತ್ತಿದೆ...! " ಎಂದು ಬಹಿರಂಗ ಎಚ್ಚರಿಕೆ ನೀಡಿರುವ ಬೇಳೂರು, ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕರೆ ಯಾವ ತ್ಯಾಗಕ್ಕೆ ಬೇಕಾದರೂ ರೆಡಿ ಎಂದಿದ್ದಾರೆ.

ಗೋಪಾಲಕೃಷ್ಣ ಲೆಕ್ಕಾಚಾರ: ಶಿವಮೊಗ್ಗ, ಸಾಗರ ಕಡೆಯಲ್ಲಿ ಬಿಜೆಪಿ ಅಲೆ ಏಳಲು ಹಾಗೂ ಮುಖ್ಯಮಂತ್ರಿಗಳ ಮಗ ಬಿವೈ ರಾಘವೇಂದ್ರ ಸಂಸದರಾಗಲು ತಾವು ಹಾಗೂ ತಮ್ಮ ಬೆಂಬಲಿಗರು ಸಾಕಷ್ಟು ಬೆವರು ಹರಿಸಿದ್ದೇವೆ. ಹರತಾಳು ಹಾಲಪ್ಪಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಈಡಿಗ ಸಮುದಾಯಕ್ಕೆ ಸಂಪುಟದಲ್ಲಿ ಯಾವುದೇ ರೀತಿಯ ಸ್ಥಾನಮಾನ ಸಿಕ್ಕಿಲ್ಲ. ಶಿವಮೊಗ್ಗ ಜಿಲ್ಲೆಯ ಈಡಿಗ ಸಮುದಾಯದವರ ಬೆಂಬಲ ಹೀಗೆ ಸ್ಥಿರವಾಗಿರಬೇಕಾದರೆ ನಾನು ಮಂತ್ರಿಯಾಗಲೇ ಬೇಕು.

ಈಗೇನಾದರೂ ಈಡಿಗ ಸಮುದಾಯವನ್ನು ಕಡೆಗಾಣಿಸಿದರೆ, ಅದೇ ಸಮುದಾಯದ ಬಂಗಾರಪ್ಪ, ಕಾಗೋಡು ತಿಮ್ಮಪ್ಪನವರು ಲಾಭ ಪಡೆಯುವುದು ಗ್ಯಾರಂಟಿ. ಶಿವಮೊಗ್ಗದಲ್ಲಿ ಈಡಿಗರ ಬೆಂಬಲ ಸಿಕ್ಕರೆ ಮಂಗಳೂರು, ಉಡುಪಿ, ಚಿಕ್ಕಮಗಳೂರು, ಕಾರವಾರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರೆಸಬಹುದು.

ಸಚಿವರಾಗಿ ಏನು ಮಾಡುತ್ತೀರಾ ಎಂದರೆ ಮೊದಲು ಮಂತ್ರಿ ಮಾಡಲಿ ಮುಂದಿನದು ಆಮೇಲೆ ಎಂದು ಜಾರಿಕೊಂಡರು.ಈಡಿಗ ಸಮುದಾಯದ ಬೇರೆ ಶಾಸಕರಿಗೆ ಮಂತ್ರಿ ಪದವಿ ನೀಡುವ ಚಾನ್ಸ್ ಇಲ್ಲ. ನನ್ನ ಬಳಿ ಹಲವಾರು ಶಾಸಕರಿದ್ದಾರೆ ಎಂದರು. ಆದರೆ, ಸಂಖ್ಯೆಯನ್ನು ಸ್ಪಷ್ಟಪಡಿಸಲಿಲ್ಲ.

ಹಾಲಪ್ಪ ಅಭಿಮಾನಿಗಳ ಕಿಡಿ:
ಆವೇಶದ ಬರದಲ್ಲಿ ಹಾಲಪ್ಪ ಅವರನ್ನು ಟೀಕಿಸಿರುವ ಗೋಪಾಲಕೃಷ್ಣ ಅವರು ಹಾಲಪ್ಪ ಪ್ರಕರಣದಲ್ಲಿ ತಮ್ಮ ಕೈವಾಡವಿಲ್ಲ ಎಂದಿರುವುದನ್ನು ಸಹಿಸಿಕೊಳ್ಳಬಹುದು ಆದರೆ, ಹಾಲಪ್ಪ ನವರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎನ್ನುವುದು ಸರಿಯಿಲ್ಲ ಎಂದು ಹಾಲಪ್ಪ ಅವರ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X