ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೌರ್ಜನ್ಯ : ದಲಿತರ ಪರ ಪೇಜಾವರ ಶ್ರೀಗಳ ಉಪವಾಸ

By Mrutyunjaya Kalmat
|
Google Oneindia Kannada News

Vishweshatirtha Swamiji
ಗುಂಡ್ಲುಪೇಟೆ, ಸೆ. 8 : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಅಂಕಹಳ್ಳಿಯಲ್ಲಿ ಸಹಬಾಳ್ವೆ ನೆಲೆಯೂರಲಿ, ಸೌಹಾರ್ದ ಮೂಡಲಿ ಎನ್ನುವ ಸದಾಶಯದೊಂದಿಗೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಮಂಗಳವಾರ ಉಪವಾಸ ನಡೆಸಿದರು.

ಗ್ರಾಮದಲ್ಲಿ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಪ್ರಕರಣ ನಡೆದಿತ್ತು. ನಗರದ ಸರಸ್ವತಿಪುರಂನಲ್ಲಿರುವ ಶ್ರೀಕೃಷ್ಣಧಾಮದಲ್ಲಿ ಮಧ್ಯಾಹ್ನ 1.45 ರಿಂದ ಉಪವಾಸ ಆರಂಭಿಸಿದ ಶ್ರೀಗಳು ಬುಧವಾರ ಮಧ್ಯಾಹ್ನ 1.45ಕ್ಕೆ ಅಂತ್ಯಗೊಳಿಸಲಿದ್ದಾರೆ. ಸದಾ ಚಟುವಟಿಕೆಯಿಂದಿರುವ ಸ್ವಾಮೀಜಿ ಉಪವಾಸದ ವೇಳೆಯೂ ಸುಮ್ಮನೆ ಕುಳಿತಿಲ್ಲ.

ತಮ್ಮ ಶಿಷ್ಯ ವೃಂದವನ್ನು ಮುಂದೆ ಕೂರಿಸಿಕೊಂಡು ಪ್ರವಚನ ನೀಡುವಲ್ಲಿ ನಿರತರಾಗಿದ್ದಾರೆ. ಜತೆಗೆ ವೇದಾಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಉಪವಾಸ ಯಾರ ವಿರುದ್ದ ಪ್ರತಿಭಟನೆಯೂ ಅಲ್ಲ, ಪಶ್ಚಾತ್ತಾಪವೂ ಅಲ್ಲ. ದೇವರ ಪ್ರಾರ್ಥನೆ. ಎಲ್ಲಿಯೂ ಹಿಂದೂಗಳಲ್ಲಿ ಘರ್ಷಣೆ, ಗಲಾಟೆ, ವೈಮನಸ್ಸು ಆಗಬಾರದು ಎನ್ನುವುದು ಆಶಯ. ಅದಕ್ಕಾಗಿ ಉಪವಾಸ ನಡೆಸುತ್ತಿದ್ದು, ಆ ಮೂಲಕ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದೇನೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X