ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ : ಅ.21 ರಿಂದ ಆರು ಹಂತದಲ್ಲಿ ಚುನಾವಣೆ

By Mrutyunjaya Kalmat
|
Google Oneindia Kannada News

Lalu Prasad Yadav
ನವದೆಹಲಿ, ಸೆ. 7 : ಬಿಹಾರ ವಿಧಾನಸಭೆ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗ ಸೋಮವಾರ ಪ್ರಕಟಿಸಿದೆ. ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 21ರಂದು ಆರಂಭಗೊಳ್ಳಲಿವೆ. ಪ್ರಥಮ ಹಂತದಲ್ಲಿ 47 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಎಸ್ ವೈ ಖುರೇಶಿ ಘೋಷಿಸಿದ್ದಾರೆ.

ಅಕ್ಟೋಬರ್ 24, ಅಕ್ಟೋಬರ್ 28, ನವೆಂಬರ್ 1, ನವೆಂಬರ್ 9 ಮತ್ತು ನವೆಂಬರ್ 20 ರಂದು ಚುನಾವಣೆಗಳು ನಡೆಯಲಿವೆ. 243 ವಿಧಾನಸಭಾ ಸ್ಥಾನಗಳಿಗೆ ನಡೆಯುವ ಚುನಾವಣೆಯ ಫಲಿತಾಂಶ ನವೆಂಬರ್ 24ರಂದು ಹೊರಬೀಳಲಿದೆ. 56,943 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 5.5 ಕೋಟಿ ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ. ಸಂಸದ ದಿಗ್ವಿಜಯ್ ಸಿಂಗ್ ಮರಣದ ನಂತರ ತೆರವಾಗಿರುವ ಬಿಹಾರದ ಬಂಕಾಪುರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್ 1 ರಂದು ಚುನಾವಣೆಗಳು ನಡೆಯಲಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X