ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋಹತ್ಯೆ ಕಾಯ್ದೆ ವಿರೋಧಿಗಳು ಕ್ರಿಮಿನಲ್ಸ್

By Mahesh
|
Google Oneindia Kannada News

VS Acharya
ಗುಲ್ಬರ್ಗಾ, ಸೆ.6: ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುವವರು ಸಂವಿಧಾನದ ವಿರೋಧಿಗಳು ಎಂದು ರಾಜ್ಯ ದ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಡಾ. ವಿ.ಎಸ್. ಆಚಾರ್ಯ ಅವರು ಆರೋಪಿಸಿದ್ದಾರೆ. ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ನಮೋಶಿಯವರ ಪರ ಪ್ರಚಾರ ಭಾಷಣದಲ್ಲಿ ಈ ರೀತಿ ಹೇಳಿದ್ದಾರೆ.

ಭಾರತರತ್ನ ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ 40ರ ಪರಿಚ್ಛೇದದ ಅಡಿ ಯಲ್ಲಿಯೇ ಜಾನುವಾರುಗಳ ಹತ್ಯೆ ನಿಷೇಧ ಕಾಯ್ದೆ ರೂಪಿಸಲಾಗಿದೆ. ಇದು ಸಂವಿಧಾನ ಬದ್ಧವಾಗಿದೆ. ಅಲ್ಲದೇ ಈ ವಿವಾದ ಸುಪ್ರೀಂ ಕೋರ್ಟ್‌ಗೂ ಹೋಗಿದ್ದರಿಂದ ಕಾಯ್ದೆಯ ಪರವಾಗಿ ತೀರ್ಪು ಬಂದಿದೆ. ಆದರೂ, ಈ ಕಾಯ್ದೆ ಯನ್ನು ವಿರೋಧಿಸುವವರು ಸಂವಿಧಾನ ವಿರೋಧಿಗಳು ಎಂದು ಜರಿದರು.

ಮಾಜಿ ಪ್ರಧಾನಿ ಎಚ್.ಡಿ. ದೇವೇ ಗೌಡ ಅವರು ಈ ಕಾಯ್ದೆಯನ್ನು ವಿರೋಧಿ ಸುತ್ತಿದ್ದಾರೆ. ಈಗಾಗಲೇ ಅಲ್ಪಸಂಖ್ಯಾತರ ಮುಸ್ಲಿಂರೇ ಹೆಚ್ಚಾಗಿರುವ ಜಮ್ಮು ಕಾಶ್ಮೀರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಯನ್ನು ಜಾರಿಗೆ ತರಲಾಗಿದೆ. ಅಲ್ಲಿ ಗೋಹತ್ಯೆ ಮಾಡಿದಲ್ಲಿ 10 ವರ್ಷಗಳ ಕಾಲ ಗೋಹತ್ಯೆ ಬೆಂಬಲಿಗರು ಸಂವಿಧಾನ ವಿರೋಧಿಗಳು-ಆಚಾರ್ಯ ಶಿಕ್ಷೆಗೆ ಗುರಿಪಡಿಸಲಾಗುತ್ತಿದೆ.

ಸುಮಾರು 7 ರಾಜ್ಯಗಳಲ್ಲಿ ಈಗಾಗಲೇ ಈ ಕಾಯ್ದೆ ಜಾರಿಗೆ ಬಂದಿದೆ. 8ನೇ ರಾಜ್ಯವಾಗಿ ಕರ್ನಾಟಕದಲ್ಲಿ ಕಾಯ್ದೆ ಜಾರಿಗೆ ಬರಲಿದೆ. ಈ ಕಾಯ್ದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾವು ಅಸಮರ್ಥ ಗೃಹ ಸಚಿವ ಎಂಬುದನ್ನು ಅಲ್ಲಗಳೆದ ಅವರು, ರಾಜ್ಯದಲ್ಲಿ ಭಯೋತ್ಪಾದಕರ ನಿಗ್ರಹ, ನಕ್ಸಲಿಯರ ನಿಗ್ರಹ ಸೇರಿದಂತೆ ವಿಧ್ವಂಸಕ ಕೃತ್ಯಗಳನ್ನು ತಡೆಯಲು ಕೈಗೊಂಡ ಕ್ರಮಗಳಿಂದಾಗಿ ಇಡೀ ದೇಶದಲ್ಲಿಯೇ ಕರ್ನಾಟಕ ನಂಬರ್ ಒನ್ ಇದೆ. ಅಲ್ಲದೇ ಕೇಂದ್ರದ ಪ್ರಮುಖರು ಸಹ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳನ್ನು ಶ್ಲಾಘಿಸಿದ್ದಾರೆ ಎಂದು ಅವರು ಹೇಳಿದರು.

ಪಿಎಫ್‌ಡಿ ಅಧ್ಯಕ್ಷ ಮದನಿ ಬಂಧನದ ಕುರಿತು ತಿಳಿಸಿದ ಅವರು, ಈಗಾಗಲೇ ಆತನನ್ನು ತನಿಖೆಗೆ ಒಳಪಡಿಸಲಾಗಿದೆ. ಇನ್ನು ಆತನ ವಿರುದ್ಧ 8 ಪ್ರಕರಣಗಳಿದ್ದು, ಆ ಕುರಿತು ಸಹ ತನಿಖೆ ನಡೆಯುತ್ತಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X